ಆಸ್ಪತ್ರೆಗೆ ಸಿಬ್ಬಂದಿ ನೇಮಕಕ್ಕೆ ಸ್ಥಳೀಯರ ಮನವಿ

KannadaprabhaNewsNetwork |  
Published : Jun 30, 2026, 03:00 AM IST
ಮನವಿ | Kannada Prabha

ಸಾರಾಂಶ

ಗೋಕಾಕ: ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಸುಸಜ್ಜಿತ ಸಾರ್ವಜನಿಕ ಆರೋಗ್ಯ ಕೇಂದ್ರವಿದ್ದು ಸಿಬ್ಬಂದಿಯಿಲ್ಲದೇ ತಾಲೂಕು ಕೇಂದ್ರಕ್ಕೆ ತೆರಳುವ ದುಸ್ಥಿತಿ ಎದುರಾಗಿದೆ. ಕೂಡಲೇ ವೈದ್ಯ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾ.ರಾಧಾಕೃಷ್ಣ ಅವರಿಗೆ ಅಂಕಲಗಿ ಪಟ್ಟಣದ ಸಾರ್ವಜನಿಕರು ಮನವಿ ಸಲ್ಲಿಸಿದರು.

ಅಂಕಲಗಿ ಪಟ್ಟಣದ ಪ್ರಾಥಮಿಕ ಆರೋಗ್ಯಕ್ಕೆ ದಿನ ನಿತ್ಯ 200 ರಿಂದ 400 ಜನ ಬರುತ್ತಿದ್ದು, ಆದರೆ, ಸದರಿ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿಯೇ ಇಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ಆಸ್ಪತ್ರೆಗೆ ವೈದ್ಯರನ್ನು ಹಾಗೂ ಹೆಚ್ಚಿನ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ಡಾ.ರವಿಂದ್ರ ಅಂಟಿನ, ಸುರೇಶ ಸನದಿ, ಜಯಾನಂದ ಹುಣಚ್ಯಾಳ, ಸಚೀನ ಕಮಟೇಕರ, ಅಂಕಲಗಿ ಪಟ್ಟಣ ಜನಪ್ರತಿನಿಧಿಗಳು, ಮುಖಂಡರು ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲತೆ ತಡೆಗೆ ಪೋಲಿಯೋ ಲಸಿಕೆ ಕಡ್ಡಾಯ: ಪೊನ್ನಣ್ಣ
ಜಾಗತಿಕ ಆರ್ಥಿಕತೆಗೆ ಎಂಎಸ್‌ಎಂಇಯಿಂದ ಅಗಾಧ ಕೊಡುಗೆ: ಸಿಎ ಎಸ್‌.ಎಸ್‌. ನಾಯಕ್‌