ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಬಾಕಿ ಇರುವ ಒಟ್ಟು 11833 ಪೈಕಿ 5885 ಪ್ರಕರಣ ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ ಒಟ್ಟು 31282 ಪೈಕಿ ₹ 42.86 ಕೋಟಿ ಪ್ರಕರಣದ ಮೊತ್ತದ 27808 ಪ್ರಕರಣ ಇತ್ಯರ್ಥಪಡಿಸಲಾಯಿತು.
ಕೌಟುಂಬಿಕ ವಿವಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಅಧೀನ ಕುಟುಂಬ ನ್ಯಾಯಾಲಯದಲ್ಲಿ ವಿಚ್ಚೇದನ ಬಯಸಿ ಅರ್ಜಿ ಸಲ್ಲಿಸಿದ್ದ 58 ಜೋಡಿ ಪೈಕಿ 8 ಜೋಡಿಗಳು ಮತ್ತೆ ಒಂದಾಗುವ ಮೂಲಕ ಹೊಸ ಜೀವನ ಆರಂಭಿಸಲು ಅಣಿಯಾದರು. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ 4 ಪೈಕಿ 1 ಪ್ರಕರಣಗಳಿಗೆ ಒಟ್ಟು ₹5.19 ಲಕ್ಷಕ್ಕೆ ಇತ್ಯರ್ಥಗೊಂಡರೆ, ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದ 1757 ಪೈಕಿ 23 ಕ್ಕೆ ₹3.98 ಕೋಟಿ, ಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ 12 ಪೈಕಿ 12ಕ್ಕೆ ₹15 ಸಾವಿರ, ಸಿವಿಲ್ ಪ್ರಕರಣಗಳಲ್ಲಿ ಪಾಟಿಶನ್ ಸೂಟ್‌ದಲ್ಲಿ 874 ಪೈಕಿ 334ಕ್ಕೆ ₹12.38 ಕೋಟಿ, ಎಂ.ಎ.ಟಿ.ಸಿ ಪ್ರಕರಣಗಳಲ್ಲಿ 207 ಪೈಕಿ 62ಕ್ಕೆ ₹3.4 ಕೋಟಿ ಇತ್ಯರ್ಥಪಡಿಸಲಾಯಿತು.ಲೋಕ ಅದಾಲತ್ ಶಿಬಿರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ಎಫ್‌ಟಿಎಸ್‌ಸಿ -1 ನ್ಯಾಯಾಧೀಶೆ ಪಿ.ಎಸ್. ಸದರ ಜೋಶಿ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ. ಮೂಲಿಮನಿ, 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ರಾಜೇಶ ಕರಣಮ್ ಕೆ, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಮೇಶ ಎಕಬೋಟೆ, ಜಿಲ್ಲಾ ನ್ಯಾಯಾಧೀಶರು ಮತ್ತು ಕುಟುಂಬ ನ್ಯಾಯಾಲಯದ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಸುದೀಪ ನಾಯಕ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರುಘೇಂದ್ರ ತುಬಾಕೆ, ಹೆಚ್ಚುವರಿ ದಿವಾನಿ ನ್ಯಾಯಾಧೀಶೆ ರೂಪಾ ಮಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.
ನ್ಯಾಯಾಲಯ ಒಟ್ಟು ಪ್ರಕರಣ ಇತ್ಯರ್ಥಗೊಂಡ ಪ್ರಕರಣಜಿಲ್ಲಾ ನ್ಯಾಯಾಲಯ48071872
ಬೀಳಗಿ ನ್ಯಾಯಾಲಯ448 316ಮುಧೋಳ ನ್ಯಾಯಾಲಯ 801708
ಬನಹಟ್ಟಿ ನ್ಯಾಯಾಲಯ 1734466ಹುನಗುಂದ ನ್ಯಾಯಾಲಯ1467613
ಇಳಕಲ್ಲ ನ್ಯಾಯಾಲಯ446 386,ಬಾದಾಮಿ ನ್ಯಾಯಾಲಯ836761
ಜಮಖಂಡಿ ನ್ಯಾಯಾಲಯ 1254762ಎಫ್.ಟಿ.ಎಸ್.ಸಿ-1 ನ್ಯಾಯಾಲಯ31 1