ಲೋಕ ಅದಾಲತ್‌ 44.28 ಲಕ್ಷ ಕೇಸ್‌ಇತ್ಯರ್ಥ; ₹2,384 ಕೋಟಿ ಪರಿಹಾರ

KannadaprabhaNewsNetwork |  
Published : Sep 24, 2026, 03:45 AM IST
ಎಐ ಚಿತ್ರ | Kannada Prabha

ಸಾರಾಂಶ

ಕಳೆದ ಸೆ.19ರಂದು ನಡೆದ ಮೂರನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 44,28,455 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಕಕ್ಷಿದಾರರಿಗೆ ₹2,384 ಕೋಟಿ ಪರಿಹಾರ ಒದಗಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಕಳೆದ ಸೆ.19ರಂದು ನಡೆದ ಮೂರನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 44,28,455 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಕಕ್ಷಿದಾರರಿಗೆ ₹2,384 ಕೋಟಿ ಪರಿಹಾರ ಒದಗಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾಲತ್‌ನಲ್ಲಿ ಒಟ್ಟು 931 ಪೀಠಗಳು ಕಾರ್ಯ ನಿರ್ವಹಿಸಿದ್ದವು. ರಾಜ್ಯ ಹೈಕೋರ್ಟ್‌ನ ಮೂರು ಪೀಠಗಳಲ್ಲಿ ಒಟ್ಟು 1,010 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಒಟ್ಟು 1,230 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹4 ಕೋಟಿ, 2,828 ವಿಭಾಗದಾವೆ ವಿಲೇವಾರಿ ಮಾಡಿ ₹70 ಕೋಟಿ, 4,160 ಮೋಟಾರು ವಾಹನ ಅಪರಾಧಗಳಲ್ಲಿ ₹267 ಕೋಟಿ, 10,093 ಚೆಕ್‌ ಬೌನ್ಸ್‌ ವಿಲೇವಾರಿ ಮಾಡಿ ₹300 ಕೋಟಿ, 571 ಎಲ್‌ಎಸಿ ಅಮಲ್ಜಾರಿ ಮತ್ತು 584 ಎಂವಿಸಿ ಅಮಲ್ಜಾರಿ ಪ್ರಕರಣ ಇತ್ಯರ್ಥಗೊಳಿಸಿ ₹153 ಕೋಟಿ ಪರಿಹಾರ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ರಿಯಲ್‌ ಎಸ್ಟೇಟ್‌ಗೆ ಸಂಬಂಧಿಸಿದ 9 ಪ್ರಕರಣದಲ್ಲಿ ₹88 ಲಕ್ಷ, 130 ಗ್ರಾಹಕರ ವ್ಯಾಜ್ಯಗಳನ್ನು ಬಗೆಹರಿಸಿ ₹3 ಕೋಟಿ ಐದು ವರ್ಷಕ್ಕೂ ಹಳೆಯದಾದ 1,227 ಪ್ರಕರಣ, 10 ವರ್ಷ ಮತ್ತು ಅದಕ್ಕೂ ಹಳೆಯದಾದ 140 ಹಾಗೂ 15 ವರ್ಷಕ್ಕೂ ಹಳೆಯದಾದ 23 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು. ಹಿರಿಯ ನಾಗರಿಕರಿಗೆ ಸಂಬಂಧಿಸಿದ 1,562 ಪ್ರಕರಣ ಇತ್ಯರ್ಥಗೊಂಡಿವೆ. ಶಿವಮೊಗ್ಗ ಜಿಲ್ಲೆಯ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ಬಾಕಿಯಿದ್ದ ಅಮಲ್ಜಾರಿ ಪ್ರಕರಣವನ್ನು ₹4.21 ಕೋಟಿ ಮೊತ್ತಕ್ಕೆ ಪರಿಹರಿಸಲಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕಳೆದ 27 ವರ್ಷಗಳಿಂದ ಬಾಕಿ ಇದ್ದ ಸ್ಥಿರಾಸ್ತಿ ದಾವೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಹಿರಿಯ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರು ಮಾತನಾಡಿ, ಈ ಬಾರಿಯ ಅದಾಲತ್‌ ವಿಶೇಷವೆಂದರೆ 287 ದಂಪತಿ ರಾಜಿ ಸಂಧಾನದ ಮೂಲಕ ತಮ್ಮ ಕೌಟುಂಬಿಕ ಕಲಹದ ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ವೈವಾಹಿಕ ಜೀವನಕ್ಕೆ ಮರಳಿದ್ದಾರೆ. ಡಿ.12ರಂದು ರಾಜ್ಯದೆಲ್ಲೆಡೆ ಈ ವರ್ಷದ ಕೊನೆಯ ಲೋಕ ಅದಾಲತ್‌ ನಡೆಯಲಿದೆ. ವ್ಯಾಜ್ಯದಾರರು ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ತಮ್ಮ ಪ್ರಕರಣಗಳನ್ನು ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ದಾಖಲೆ ಸೃಷ್ಟಿಸಿ ಕಾರು ಮಾರ್ತಿದ್ದ ಗ್ಯಾಂಗ್‌ನ ಬಂಧನ
ಶಿಕ್ಷಣ ನೀತಿ ಬದಲಾಗದೆ ದೇಶಬದಲಾಗದು: ಡಾ. ಬಿಳಿಮಲೆ