ಅನಂತಕುಮಾರ್
ವಿಧಾನಸಭಾ ಚುನಾವಣೆ ಎಂದರೆ ಸಂಗಮೇಶ್ ಬಳಗ ಅಥವಾ ದಿ.ಅಪ್ಪಾಜಿಗೌಡರ ಬಳಗದ ನಡುವೆಯೇ ಕದನ. ಪಕ್ಷ ಯಾವುದೇ ಇರಲಿ, ಇವರ ನಡುವೆಯೇ ಯುದ್ಧ. 2009ರ ಬಳಿಕ ಲೋಕಸಭಾ ಚುನಾವಣೆ ಚಿತ್ರಣದಲ್ಲಿ ಮಾತ್ರ ಸ್ವಲ್ಪ ಬದಲಾವಣೆ. ಲೋಕಸಭಾ ಚುನಾವಣೆ ಮತಗಳಲ್ಲಿ ಬಹುತೇಕ ಬಿಜೆಪಿ ಬುಟ್ಟಿಗೆ! ಇದು ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಇದೀಗ ಇನ್ನೊಂದು ಲೋಕಸಭಾ ಚುನಾವಣೆ ಎದುರಾಗಿದೆ. ಆದರೆ ಈ ಬಾರಿ ಪರಿಸ್ಥಿತಿ ಸ್ವಲ್ಪ ಭಿನ್ನ. ಹೀಗಾಗಿ ಈ ಚುನಾವಣೆಯಲ್ಲಿ ಮತ ಹಂಚಿಕೆ ಲೆಕ್ಕಾಚಾರದಲ್ಲಿ ಬದಲಾಗಬಹುದೇ ಎಂಬ ಕುತೂಹಲ ಎಲ್ಲರಲ್ಲಿ ಕಾಣುತ್ತಿದೆ.ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖ ಎದುರಾಳಿಯಾಗಿದ್ದರೂ, ಜೆಡಿಎಸ್ ಎನ್‌ಡಿಎ ಕೂಟದಲ್ಲಿ ಸೇರ್ಪಡೆಯಾಗಿರುವುದರಿಂದ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಹಂಚಿಕೆ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸಂಗಮೇಶ್ ಮತ್ತು ಅಪ್ಪಾಜಿ ಬಳಗ ಇಬ್ಬರಿಗೂ ತಮ್ಮ ಮತಗಳನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆಯಂತೂ ಇದ್ದೇ ಇರುವುದರಿಂದ ಜೆಡಿಎಸ್ ತನ್ನ ಮತಗಳನ್ನು ಸಾರಸಗಟಾಗಿ ತನ್ನ ಮುಷ್ಟಿಯಿಂದ ಹಿಡಿದು ಬಿಜೆಪಿ ಸೆರಗಿಗೆ ಸುರಿಯಬಹುದು ಎಂಬ ಮಾತುಗಳಿವೆ. ಆದರೆ ಪಕ್ಷದ ಮುಖಂಡರು ವಿಧಾನಸಭಾ ಚುನಾವಣೆಯಲ್ಲಿ ಮತ ಬೇಟೆಗೆ ಇಳಿದಂತೆ ಈಗಲೂ ಇಳಿಯುತ್ತಾರೆಯೇ ಎಂಬುದು ಇನ್ನೂ ನಿಗೂಢ. ಇನ್ನೊಂದೆಡೆ ಕಾಂಗ್ರೆಸ್ ಪಾಳಯದಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಬಿ. ಕೆ. ಸಂಗಮೇಶ್‌ಗೆ ತನ್ನ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಅನಿವಾರ್ಯದ ಜೊತೆಗೆ ಪಕ್ಷದ ಹೈಕಮಾಂಡ್ ನೀಡಿರುವ ಟಾಸ್ಕ್‌ನಲ್ಲಿ ಗೆಲ್ಲಲೇಬೇಕು. ತಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್ ಕೊಡಿಸಬೇಕೆಂದು ಆದೇಶ ಬಂದಿದೆ. ಈ ಕಾರಣಕ್ಕೆ ಪ್ರಯತ್ನವಂತೂ ಜೋರಾಗಿಯೇ ಇರುವ ಸಾಧ್ಯತೆ ಇದೆ.ವಿಧಾನಸಭಾ ಚುನಾವಣೆಯಲ್ಲಿ ಸಂಗಮೇಶ್ ಅವರ ಮತ ಬ್ಯಾಂಕ್ ಲೋಕಸಭಾ ಚುನಾವಣೆಯಲ್ಲಿ ಪಲ್ಲಟಗೊಳ್ಳುತ್ತಿದ್ದ ಸಂದರ್ಭದಲ್ಲಿ ಸಂಗಮೇಶ್ ಮತ್ತು ಯಡಿಯೂರಪ್ಪ ನಡುವೆ ಹೊಂದಾಣಿಕೆ ನಡೆದಿರಬೇಕು ಎಂಬ ಆರೋಪ ತೆರೆಮರೆಯಲ್ಲಿ ಕೇಳಿ ಬಂದಿತ್ತು. ಇಬ್ಬರೂ ಲಿಂಗಾಯಿತ ಸಮುದಾಯದವರಾಗಿದ್ದರಿಂದ ಈ ನಂಟು ಬೆಳೆದಿರಬಹುದು ಎಂಬ ಟೀಕೆಗಳು ಕೇಳಿ ಬಂದಿದ್ದವು. ಆದರೆ ಈ ಬಾರಿ ಇದನ್ನು ಸುಳ್ಳು ಮಾಡುವ ಅನಿವಾರ್ಯತೆ ಅವರಿಗಿದೆ.
ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯಿತರು ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರಿದ್ದಾರೆ.
ಹಿಂದಿನ ಚುನಾವಣೆಯ ಮತ ಗಳಿಕೆ ವಿವರ:
ಮತದಾರರ ವಿವರ :