ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರಥಮ ಬಾರಿಗೆ ಮತದಾನ ಖುಷಿ ತಂದಿದೆ
ಹಲಗೂರು:ಹಲಗೂರು ಗ್ರಾಮದ ವಾಸಿ ಎಚ್.ಎನ್.ವಿರೂಪಾಕ್ಷ ಮೂರ್ತಿ ಪುತ್ರ ಎಚ್.ವಿ.ಚಿನ್ಮಯ್ ಮೊದಲ ಬಾರಿ ಮತದಾನ ಮಾಡಿದರು. ನಂತರ ಮಾತನಾಡಿದ ಚಿನ್ಮಯ್, ನಾನು ಮೊದಲ ಬಾರಿ ತುಂಬಾ ಉತ್ಸಾಹದಿಂದ ಮತದಾನ ಮಾಡಿದ್ದೇನೆ. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ನನ್ನದು ಒಂದು ಪಾತ್ರವಿದೆ ಎಂಬ ಕಲ್ಪನೆ ನನಗೆ ತುಂಬಾ ಸಂತೋಷ ನೀಡಿದೆ. ಮುಂದಿನ ಸರ್ಕಾರದಿಂದ ನಿರುದ್ಯೋಗ ಸಮಸ್ಯೆ ತೊಲಗಿ ವಿದ್ಯಾವಂತ ಯುವಕರಿಗೆ ಉತ್ತಮ ಭವಿಷ್ಯ ದೊರಕಬೇಕೆಂದು ಆಶಿಸುತ್ತೇನೆ ಎಂದರುಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತಹಕ್ಕು ನನಗೆ ಸಿಕ್ಕಿರಲಿಲ್ಲ. ಈಗ ನನಗೆ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಮತದಾನ ಮಾಡಿರುವ ಬಗ್ಗೆ ಹೆಮ್ಮೆ ಎನಿಸಿದೆ. ಮತದಾನ ಮಾಡುವುದಕ್ಕಾಗಿಯೇ ನಾನು ಬೆಂಗಳೂರಿನಿಂದ ಬಂದಿದ್ದೇನೆ.
- ಎಸ್.ರುಚಿತಾ, ಮಂಡ್ಯನಾನೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿ ಮತದಾರರ ಗುರುತಿನ ಚೀಟಿ ಪಡೆದಿದ್ದೇನೆ. ಮೊದಲ ಮತ ಚಲಾಯಿಸಲು ಭಯ, ಆಶ್ಚರ್ಯ ಎರಡೂ ಆಗುತ್ತಿದೆ. ಉತ್ತಮರನ್ನು ಆಯ್ಕೆ ಮಾಡುವ ವಿಶ್ವಾಸದಿಂದ ಮತ ಹಕ್ಕು ಚಲಾಯಿಸಿದ್ದೇನೆ.
- ಬಿ.ಕೆ.ಶ್ವೇತಾ, ಬಸರಾಳುಮೊದಲ ಮತದಾನವಾದರೂ ಮತದಾನದ ಮಹತ್ವದ ಬಗ್ಗೆ ತಿಳಿದುಕೊಂಡಿದ್ದೇನೆ. ಉತ್ತಮರನ್ನುಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ ಎನ್ನುವುದು ಗೊತ್ತಿದೆ. ಅದೇ ಕಾರಣದಿಂದ ಮತದಾನ ಮಾಡಲು ಬಂದಿದ್ದೇನೆ. ಉತ್ತಮರಿಗೆ ಮತ ಹಾಕಿರುವ ವಿಶ್ವಾಸವಿದೆ.-ಮೀರಾ, ಮಂಡ್ಯ