ಕನ್ನಡಪ್ರಭ ವಾರ್ತೆ ಲೋಕಾಪುರ
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಕುಡಿಯುವ ನೀರಿಗಾಗಿ ಸ್ಥಳೀಯರು ಪಡುತ್ತಿರುವ ಕಷ್ಟಕ್ಕೆ ಕೊನೆ ಇಲ್ಲದಂತಾಗಿದೆ. ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದ ಎಚ್ಚರಿಕೆ ನೀಡಿದರು.
ಪ್ರತಿ ವರ್ಷವೂ ಭರವಸೆ ನೀಡುವುದೇ ಅಧಿಕಾರಿಗಳ ಕೆಲಸವಾಗಿದೆ, ಮೇನ್‌ಬಜಾರ್, ಜ್ಞಾನೇಶ್ವರ ಮಠದ ಹತ್ತಿರ, ಭೋವಿ ಗಲ್ಲಿ, ಬ್ರಾಹ್ಮಣ ಗಲ್ಲಿ, ಹೂಗಾರ ಗಲ್ಲಿ, ಬಡಿಗೇರ ಗಲ್ಲಿ, ವಿವಿಧ ವಾರ್ಡಗಳಲ್ಲಿ ಕುಡಿಯುವ ನೀರಿಗಾಗಿ ಜನರುತೊಂದರೆ ಅನುಭವಿಸುವುದು ತಪ್ಪಿಲ್ಲ, ಶುದ್ಧ ನೀರಿಲ್ಲದ ಪ್ರಯುಕ್ತ ದೂರದಿಂದ ನೀರು ತರಬೇಕಾದ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ. ಇದು ಇಂದು ನಿನ್ನೆಯ ಬವಣೆಯಲ್ಲ, ದಶಕಗಳಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ನಿವಾಸಿಗಳ ಅಳಲು ತೋಡಿಕೊಂಡರು.ಈ ವೇಳೆ ಡಿ.ಆರ್.ದಾಸರಡ್ಡಿ, ವಿಷ್ಣುಗೌಡ ಪಾಟೀಲ, ಸುರೇಶ ಕತ್ತಿ, ಬಸವರಾಜ ಉದಪುಡಿ, ಸಾಬಣ್ಣಾ ಚೌಡನ್ನವರ, ಐದಯ್ಯ ಹೊದ್ಲೂರಮಠ, ಮೊಹನ ಸೊನ್ನದ, ರಾಚಪ್ಪ ಬಳಗಾರ, ವಕೀಲರಾದ ಹಣಮಂತ ಮುಳ್ಳೂರ, ಶ್ರೀಶೈಲ ಕಡಿಬಾಗಿಲ, ಬಸನಗೌಡ ಜಕರಡ್ಡಿ ಇತರರು ಇದ್ದರು.