ಅಬಕಾರಿ ನಿರೀಕ್ಷಕರ ಮನೆ ಮೇಲೆ ಲೋಕಾಯುಕ್ತ ದಾಳಿ, 1.61 ಕೋಟಿ ಆಸ್ತಿ ಪತ್ತೆ

KannadaprabhaNewsNetwork |  
Published : Dec 11, 2024, 12:46 AM IST
10ಕೆಪಿಎಲ್21ಕೊಪ್ಪಳ ನಗರದ  ನಿವಾಸದಲ್ಲಿ ದಾಖಲೆ ಪರಿಶೀಲಿಸುತ್ತಿರುವ ಅಧಿಕಾರಿಗಳು | Kannada Prabha

ಸಾರಾಂಶ

ಅಬಕಾರಿ ನಿರೀಕ್ಷಕ ರಮೇಶ ಅಗಡಿ ಅವರ ಕೊಪ್ಪಳ ನಗರದ ನಿವಾಸದ ಮೇಲೆ ಲೋಕಾಯುಕ್ತರು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿ, ದಾಖಲೆ ಪರಿಶೀಲನೆ ಮಾಡಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಅಬಕಾರಿ ನಿರೀಕ್ಷಕ ರಮೇಶ ಅಗಡಿ ಅವರ ಕೊಪ್ಪಳ ನಗರದ ನಿವಾಸದ ಮೇಲೆ ಲೋಕಾಯುಕ್ತರು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿ, ದಾಖಲೆ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಪತ್ತೆಯಾಗಿರುವ ನಗದು, ಚಿನ್ನಾಭರಣ ಹಾಗೂ ಸ್ಥಿರಾಸ್ಥಿಯ ಒಟ್ಟು ಮೌಲ್ಯ ₹1,61,23,17

ಈ ಕುರಿತು ಲೋಕಾಯುಕ್ತರು ಅಧಿಕೃತ ಮಾಹಿತಿ ನೀಡಿದ್ದಾರೆ.

ರಮೇಶ ಅಗಡಿ ಅವರಿಗೆ ಸೇರಿದ ಕಚೇರಿ, ಮನೆ ಹಾಗೂ ಇತರ ಐದು ಸ್ಥಳಗಳಲ್ಲಿ ಶೋಧನೆ ನಡೆಸಲಾಗಿದೆ.

ಐದು ನಿವೇಶನ, 1 ವಾಸದ ಮನೆ, 37 ಎಕರೆ ಕೃಷಿ ಭೂಮಿ, ಜಮೀನು ಸೇರಿ ಇದರ ಮೌಲ್ಯ ₹92,79,000, 4,84,000 ನಗದು, ₹38,60,175 ಮೌಲ್ಯದ ಚಿನ್ನಾಭರಣ, ₹25 ಲಕ್ಷ ಬೆಲೆ ಬಾಳುವ 2 ವಾಹನಗಳು, 2 ವೈನ್‌ಶಾಪ್ ಸೇರಿ ₹6844175 ಆಸ್ತಿ ಹೊಂದಿದ್ದಾರೆ.

ಲೋಕಾಯುಕ್ತ ಎಸ್ಪಿ ಎಂ.ಎನ್. ಶಶಿಧರ, ಡಿವೈಎಸ್ಪಿ ಶೀಲವಂತ, ಸಿಪಿಐ ಸುನೀಲ್ ಮೇಗಿಲಮನಿ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ಇಲ್ಲಿನ ಬಿ.ಟಿ. ಪಾಟೀಲ ನಗರದಲ್ಲಿರುವ ಕಚೇರಿ ಹಾಗೂ ಬಾಡಿಗೆ ಮನೆ ಹಾಗೂ ಯಲಬುರ್ಗಾ ತಮ್ಮರಗುದ್ದಿ ಗ್ರಾಮದ ತೋಟದ ಮನೆ ಮೇಲೂ ದಾಳಿ ಮಾಡಿ ತನಿಖೆ ಮಾಡಿ, ಅಪಾರ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಗ್ರಾಮದಲ್ಲಿ ಕೃಷಿ ಭೂಮಿ ಇರುವುದು ಪತ್ತೆಯಾಗಿದೆ.

ಸಂಜೆಯಾದರೂ ದಾಖಲೆ ಪರಿಶೀಲನೆ ಕಾರ್ಯ ಭರದಿಂದ ನಡೆದಿತ್ತು. ಅಧಿಕಾರಿಗಳು ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಆದಾಯ ಮೀರಿ ಶೇ.134 ರಷ್ಟು ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ.

ಹೊಸಪೇಟೆ ಆಪ್ತನ ಮನೆ ಮೇಲೂ ದಾಳಿ:

ಕೊಪ್ಪಳದ ಅಬಕಾರಿ ನಿರೀಕ್ಷಕ ರಮೇಶ್ ಅಗಡಿಗೆ ಆಪ್ತರಾಗಿರುವ ಹೊಸಪೇಟೆಯ ರಾಜೀವ್ ನಗರದ ನಿವಾಸಿ ವೀರಭದ್ರಯ್ಯ ಎಂಬುವವರ ಮನೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಹೊಸಪೇಟೆ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಅಮರೇಶ್‌ ಹುಬ್ಬಳ್ಳಿ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಲೋಕಾಯುಕ್ತಕ್ಕೆ ಬಂದ ಮಾಹಿತಿ ಮೇರೆಗೆ ದಾಳಿ ನಡೆದಿದ್ದು, ಪರಿಶೀಲನೆ ಕಾರ್ಯ ನಡೆಸಿದ್ದಾರೆ.

PREV

Recommended Stories

ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ