ತಿಪಟೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆ ಕೇಂದ್ರಕ್ಕೆ ಸಮಾಜ ಸೇವಕ, ನಿವೃತ್ತ ಎಸಿಪಿ ಲೋಕೇಶ್ವರ ದಂಪತಿ ಸಮೇತ ಆಗಮಿಸಿ ಮತಚಲಾಯಿಸಿದರು. ಇಂದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು ಪವಿತ್ರವಾದ ಮತವನ್ನು ಯಾರು ಉದಾಸೀನ ಮಾಡದೆ ಸಂವಿಧಾನ ಕೊಟ್ಟಿರುವ ಹಕ್ಕನ್ನು ಚಲಾಯಿಸಬೇಕು. ನಾನು ಮತದಾನ ಮಾಡಿದ್ದೇನೆ, ನೀವು ಸಹ ತಪ್ಪದೇ ಮತ ಹಾಕಿ ಎಂದು ಮನವಿ ಮಾಡಿದರು.