ಕೊಟ್ಟಿಗೆಹಾರ: ತರುವೆ ಗ್ರಾಮ ಪಂಚಾಯ್ತಿಗೆ ಕಾಯಂ ಪಿಡಿಒ ನೇಮಿಸುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸಂಜಯ್ ಗೌಡ ಅವರು ಶುಕ್ರವಾರ ಪಂಚಾಯ್ತಿ ಕಚೇರಿ ಎದುರು ಕುಳಿತು ಮೌನ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಂಜಯ್‌ಗೌಡ, ಪಿಡಿಒ ಇಲ್ಲದೆ ಗ್ರಾಮದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ತಾತ್ಕಾಲಿಕ ಪಿಡಿಒ ನೇಮಕದಿಂದ ಎರಡೆರಡು ಪಂಚಾಯ್ತಿ ಕೆಲಸಗಳು ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಸಮಸ್ಯೆಗಳಿವೆ. ಪ್ರತಿ ಯೊಂದು ಕೆಲಸ ಮಾಡಬೇಕಾದರೂ ಪಿಡಿಒ ಲಾಗಿನ್ ಬೇಕಾಗುತ್ತದೆ ಎಂದರು.
27 ಕೆಸಿಕೆಎಂ 2ಮೂಡಿಗೆರೆ ತಾಲೂಕಿನ ತರುವೆ ಗ್ರಾಮ ಪಂಚಾಯ್ತಿಗೆ ಖಾಯಂ ಪಿಡಿಒ ನೇಮಕ ಮಾಡುವಂತೆ ಆಗ್ರಹಿಸಿ ಸಂಜಯ್‌ಗೌಡ ಶುಕ್ರವಾರ ಪಂಚಾಯ್ತಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.