ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಭದ್ರಾವತಿ ತಾಲೂಕಿನ ಮೈದೊಳಲಿನಲ್ಲಿ ವಾಡಿಕೆಯಂತೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಹನುಮಂತ ದೇವರ ಕಾರ್ಣಿಕೋತ್ಸವ ನಡೆಯುತ್ತದೆ. ಶುಕ್ರವಾರ ಸಂಜೆ ಗೋದೂಳಿ ಲಗ್ನದಲ್ಲಿ ಗಂಗಾಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈ ಮೇಲೆ ಆಹ್ವಾನ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವೇರಿ ಕಾರ್ಣಿಕ ನುಡಿಯುತ್ತಾರೆ. ಈ ಬಾರಿ ಆಕಾಶ ಮೇಲೆರಿತ್ತು ಸಿಡಿಲು ಸಿಡಿದೀತು ಎಚ್ಚರ ಎಂದು ಉಕ್ತಿಯನ್ನು ಹೇಳಿದರು.
ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳು ಸಿಡಿಲು ರೂಪದಲ್ಲಿ ಭೂಮಿಗೆ ಬರಬಹುದು. ಆಕಾಶ ಮೇಲೆ ಹೋಗಿ ಸಿಡಿಲು ಬಡಿ ಯುತ್ತದೆ ಎಂದಿರುವುದರಿಂದ ಈ ಬಾರಿ ರೈತಾಪಿಗಳಿಗೆ ಹಿನ್ನಡೆಯಾಗುತ್ತದೆ. ದೇಶದೆಲ್ಲೆಡೆ ಅತಿವೃಷ್ಟಿಯಾಗುತ್ತಿರುವುರಿಂದ ಕೃಷಿ ಚಟುವಟಿಕೆಗಳಿಗೆ ಅಡೆಚಣೆಗಳುಂಟಾಗಬಹುದು.ಮುಂದಿನ ಬೆಸೀಗೆಯ ಬಿಸಿಲ ಪ್ರಖರತೆ ತುಸು ಹೆಚ್ಚಿರಲಿದೆ ಎನ್ನಬಹುದು. ಕೊನೆಯಲ್ಲಿ ಎಚ್ಚರ ಎಂದಿರುವುದು ಸಂಭವಿಸಬಹು ದಾದ ಹಾನಿಯನ್ನು ತಿಳಿಸುತ್ತದೆ ಎಂದು ಹಿರಿಯರು ಕಾರ್ಣೀಕದ ವಾಕ್ಯವನ್ನು ವಿಶ್ಲೇಷಿಸಿದರು. ಕಾರ್ಣಿಕ ವಾಕ್ಯವನ್ನು ಆಧರಿಸಿ ಪ್ರಕೃತಿಯಲ್ಲಿ ಉಂಟಾಗುವ ವೈಪರೀತ್ಯಗಳನ್ನು ಹಿರಿಯರು ಅರ್ಥೈಸುವುದು ವಾಡಿಕೆ.