ನಮ್ಮ ಸೈನಿಕರಿಗೆ ಶ್ರೀರಾಮನ ಬಂಟ ಹನುಮನೇ ಪ್ರೇರಣೆ

KannadaprabhaNewsNetwork |  
Published : May 10, 2025, 01:09 AM IST
ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದ ಚುನಿಮಟ್ಟಿಯ ಶಕ್ತಿದೇವತೆಯಾದ ಚೂನಮ್ಮಾದೇವಿ ಹಾಗೂ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಏರ್ಪಡಿಸಿದ ನಗೆ ಹಬ್ಬ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಮಾತನಾಡಿದರು. | Kannada Prabha

ಸಾರಾಂಶ

ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳನ್ನು ಪತ್ತೆಹಚ್ಚಿ ನಿಖರವಾಗಿ ಅವುಗಳನ್ನೇ ಧ್ವಂಸ ಮಾಡಿದ ಆಪರೇಷನ್ ಸಿಂದೂರ-1 ಮತ್ತು 2 ಯಶಸ್ವಿ ಮಾಡಿದ ಸೈನಿಕರಿಗೆ ಶ್ರೀರಾಮನ ಬಂಟ ಹನುಮನೇ ಪ್ರೇರಣೆ

ಕನ್ನಡಪ್ರಭ ವಾರ್ತೆ ಮೂಡಲಗಿ

ಭಾರತದ ನೆಲದಲ್ಲೇ ನಿಂತು ವೈರಿ ರಾಷ್ಟ್ರ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳನ್ನು ಪತ್ತೆಹಚ್ಚಿ ನಿಖರವಾಗಿ ಅವುಗಳನ್ನೇ ಧ್ವಂಸ ಮಾಡಿದ ಆಪರೇಷನ್ ಸಿಂದೂರ-1 ಮತ್ತು 2 ಯಶಸ್ವಿ ಮಾಡಿದ ಸೈನಿಕರಿಗೆ ಶ್ರೀರಾಮನ ಬಂಟ ಹನುಮನೇ ಪ್ರೇರಣೆಯಾಗಿದ್ದಾನೆ. ರಫೆಲ್ ಪೂಜೆ ಮಾಡಿದನ್ನೇ ಒಂದು ಟೀಕಾಸ್ತ್ರವನ್ನಾಗಿ ಮಾಡಿಕೊಂಡ ವಿರೋಧಿಗಳು ಭಾರತದ ದೈವಿ ಶಕ್ತಿ ಅರ್ಥ ಮಾಡಿಕೊಳ್ಳದೆ ಮಾತನಾಡಿರುವುದು ನಾಚಿಕೆಗೇಡು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ರಾಜಾಪೂರ ಗ್ರಾಮದ ಚುನಿಮಟ್ಟಿಯ ಶಕ್ತಿದೇವತೆ ಚೂನಮ್ಮಾದೇವಿ ಹಾಗೂ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿದರ್ಶನ ಪಡೆದು ಜಾತ್ರೆ ನಿಮಿತ್ತ ನಡೆದ ನಗೆಹಬ್ಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಸಂಯಮತೆಯನ್ನು ವೈರಿ ರಾಷ್ಟ್ರ ಪಾಕಿಸ್ತಾನ ದುರಪಯೋಗ ಪಡಿಸಿಕೊಂಡಾಗ ಇಡಿ ಜಗತ್ತೇ ನಿಬ್ಬೆರಗಾಗುವಂತೆ ದಾಳಿ ಮಾಡಿರುವ ಭಾರತದ ಸೈನಿಕರ ಬಲ ಜಗಜ್ಜಾಹೀರಾಗಿದೆ. ಹೀಗಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಗಡಿಯಲ್ಲಿ ರಕ್ಷೆಣೆ ಮಾಡುತ್ತಿರುವ ಸೈನಿಕರ ನೈತಿಕ ಬಲ ಕುಗ್ಗುವಂತಹ ಯಾವುದೇ ಹೇಳಿಕೆಗಳನ್ನು ನೀಡಬಾರದೆಂದು ವಿರೋಧಿಗಳಿಗೆ ಆಗ್ರಹಿಸಿದರು.

ರಾಜಾಪೂರ ಗ್ರಾಮದ ಜಾತ್ರೆ ತಾಲೂಕಿನಲ್ಲಿ ಒಂದು ಮಾದರಿ ಜಾತ್ರೆಯಾಗಿದೆ. ದಾಖಲೆಯ ಪ್ರಮಾಣದಲ್ಲಿ ಜನ ಸೇರುವ ಮೂಲಕ ಈ ಜಾತ್ರೆಯ ವೈಭವ ಇನ್ನಷ್ಟು ಹೆಚ್ಚಾಗಿದೆ ಮತ್ತು ಜಾತ್ರೆಯಲ್ಲಿ ಕೈಗೊಂಡಿರುವ ಅಚ್ಚುಕಟ್ಟಾದ ಕ್ರಮಗಳು, ಊಟೋಪಚಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಮಹೋತ್ಸವಗಳು ಉಲ್ಲೇಖನೀಯವಾಗಿದ್ದು ಬರುವ ದಿನಗಳಲ್ಲಿ ನಾವೆಲ್ಲ ರೈತರಾಗಿದ್ದು ರೈತರಿಗೆ ಸಂಬಂಧಪಟ್ಟಂತಹ ಕೃಷಿ ಮೇಳಗಳನ್ನು ಆಯೋಜಿಸುವುದು ಅಗತ್ಯವಾಗಿದೆ ಎಂದು ವ್ಯವಸ್ಥಾಪಕರಿಗೆ ಸಲಹೆ ನೀಡಿದರು ಮತ್ತು ಎಲ್ಲಾ ವ್ಯವಸ್ಥೆ ಏರ್ಪಡಿಸಿದ ಗ್ರಾಮದ ಹಿರಿಯರು ಮತ್ತು ಯುವ ಮುಖಂಡರಿಗೆ ಧನ್ಯವಾದ ತಿಳಿಸಿದರು.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ಚೂನಮ್ಮಾದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ₹25 ಲಕ್ಷ ಹಾಗೂ ಮುಜರಾಯಿ ಇಲಾಖೆಯಿಂದ ₹5 ಲಕ್ಷ ಮಂಜೂರಾತಿಯಾಗಿದೆ ಎಂದರು. ಕಲ್ಲೋಳಿ ರಾಜಾಪೂರ ಕೊರೆವ್ವನ ಹಳ್ಳದ ಹತ್ತಿರ ₹1 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಿಸಲಾಗಿದೆ. ಗ್ರಾಮದ ಅಭಿವೃದ್ಧಿಗಾಗಿ ರಸ್ತೆ, ಕುಡಿವ ನೀರು ಸೌಲಭ್ಯ ಹಾಗೂ ಕನಕ ಭವನ ನಿರ್ಮಿಸಿದನ್ನು ಸ್ಮರಿಸಿದರು ಹಾಗೂ ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ವಿಠ್ಠಲ ಪಾಟೀಲ, ಬೈರು ಯಕ್ಕುಂಡಿ, ರಾಜು ಬೈರುಗೋಳ, ರಾಮಚಂದ್ರ ಪಾಟೀಲ, ಬಸವರಾಜ ಪಂಡ್ರೋಳಿ, ಶಿವಾನಂದ ಕಮತಿ, ರಾಜು ಪವಾರ, ಕೆಂಪಣ್ಣ ಗಡಹಿಂಗ್ಲೆಜ್, ಸಿದ್ದಪ್ಪ ಜೆಟ್ಟೆನ್ನವರ ಗ್ರಾ.ಪಂ ಅಧ್ಯಕ್ಷೆ ರೇಣುಕಾ ಕಮತಿ, ರಾಮಚಂದ್ರ ಕೊಡ್ಲಿ, ಬಸವರಾಜ ಹೊಸುರ, ಶಿವಪುತ್ರ ಗುಂಡಪ್ಪಗೋಳ, ಶ್ರೀನಾಥ ಬೈರುಗೋಳ, ವಿಠ್ಠಲ ಸಿಂಗಾರಿ, ಸಿದ್ದು ಯಕ್ಕುಂಡಿ, ಸುಭಾಸ ಎಣ್ಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ