ಭಕ್ತರ ಪಾಲಿನ ಕಲ್ಪವೃಕ್ಷವಾಗಿದ್ದ ಶಿವಲಿಂಗ ಶ್ರೀಗಳು: ಲೀಲಾವತಿ ಪಾಟೀಲ

KannadaprabhaNewsNetwork |  
Published : Feb 21, 2025, 11:49 PM IST
20ಎಚ್‌ವಿಆರ್4 | Kannada Prabha

ಸಾರಾಂಶ

ಬಟ್ಟೆ ಮತ್ತು ಬಂಗಾರವನ್ನು ಸಮವಾಗಿ ಕಂಡ ಲಿಂ. ಶಿವಲಿಂಗ ಶ್ರೀಗಳು ತಮಗಾಗಿ ಯಾವುದನ್ನು ಅಪೇಕ್ಷೆ ಪಡೆದೇ ಸಮಾಜಕ್ಕೆ ನೀಡಿದ ಅವರು ವೈರಾಗ್ಯದ ಸಾಕಾರ ಮೂರ್ತಿಗಳಾಗಿದ್ದರು

ಹಾವೇರಿ: ಹುಕ್ಕೇರಿಮಠದ ಲಿಂ. ಶಿವಲಿಂಗ ಶ್ರೀಗಳು ನಡೆದಾಡುವ ದೇವರೆಂದೇ ಖ್ಯಾತರಾಗಿ, ಭಕ್ತರಿಗೆ ಬಹಿರಂಗದ ಬೆಳಕು, ಅಂತರಂಗದ ಅನುಭಾವದ ಹೊಂಬೆಳಕನ್ನು ತಮ್ಮ ಅನುಗ್ರಹದ ಮೂಲಕ ಅನ್ನ, ಅರಿವು, ಆಶ್ರಯದ ಮೂಲಕ ನಂಬಿದವ ಭಕ್ತರಿಗೆ ಕಲ್ಪವೃಕ್ಷ ಕಾಮಧೇನು ಆಗಿ ವಿರಕ್ತ ಪರಂಪರೆಯ ಗೌರಿಶಂಕರದ ಎತ್ತರಕ್ಕೆ ಏರಿದವರು ಎಂದು ಸಾಹಿತಿ ಲೀಲಾವತಿ ಪಾಟೀಲ ತಿಳಿಸಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆಯ ಆಶ್ರಯದಲ್ಲಿ ನಗರದ ದಾಕ್ಷಾಯಣಿ ಗಾಣಗೇರ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ದಿ. ಸಿದ್ದಪ್ಪ ಚೌಶೆಟ್ಟಿ ಅವರ ದತ್ತಿನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಲಿಂ. ಶಿವಲಿಂಗ ಶ್ರೀಗಳಿಗೆ ಭಕ್ತರಿಂದ ಅವರ ಷಷ್ಟ್ಯಬ್ದಿ ಸಮಾರಂಭ, ಅಮೃತ ಮಹೋತ್ಸವ, ಸಹಸ್ರ ಚಂದ್ರದರ್ಶನ, ಲಕ್ಷ ದೀಪೋತ್ಸವ, ಭೀಮರಥಿ ಶಾಂತಿ, ಐತಿಹಾಸಿಕ ಸುವರ್ಣ ತುಲಾಭಾರ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದವು. ಆದರೆ ಬಟ್ಟೆ ಮತ್ತು ಬಂಗಾರವನ್ನು ಸಮವಾಗಿ ಕಂಡ ಶ್ರೀಗಳು ತಮಗಾಗಿ ಯಾವುದನ್ನು ಅಪೇಕ್ಷೆ ಪಡೆದೇ ಸಮಾಜಕ್ಕೆ ನೀಡಿದ ಅವರು ವೈರಾಗ್ಯದ ಸಾಕಾರ ಮೂರ್ತಿಗಳಾಗಿದ್ದರು ಎಂದರು.ದತ್ತಿದಾನಿಗಳಾದ ಸ್ವಾತಂತ್ರ್ಯ ಯೋಧ ದಿ. ಸಿದ್ದಪ್ಪ ಚೌಶೆಟ್ಟಿ ಅವರ ಕುರಿತು ಸಿ.ಎಸ್. ಮರಳಿಹಳ್ಳಿ ಮಾತನಾಡಿ, ಸಮಾಜಕ್ಕೆ ತಮ್ಮನ್ನೇ ತಾವು ಅರ್ಪಿಸಿಕೊಂಡಿದ್ದ ಕೆಲವೇ ಕೆಲವು ಮಹನೀಯರಲ್ಲಿ ಅವರು ಒಬ್ಬರಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಹಾವೇರಿ ಜಿಲ್ಲಾ ರಚನಾ ಸಮಿತಿ ಅಧ್ಯಕ್ಷರಾಗಿ ಅವರ ಹೋರಾಟ ಸ್ಮರಣೀಯವಾಗಿದೆ ಎಂದರು.ಆಮೃತಮ್ಮ ಶೀಲವಂತರ ಮಾತನಾಡಿದರು. ರತ್ಮಮ್ಮ ಹೇರೂರ ಕಾರ್ಯಕ್ರಮ ಉದ್ಘಾಟಿಸಿದರು. ವಚನ ಮಂದಾರ ಅಂತಾರಾಷ್ಟ್ರೀಯ ವಚನ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ನಗರದ ದಿಯಾ ನಟರಾಜ ತುಪ್ಪದ ಅವರನ್ನು ಸನ್ಮಾನಿಸಲಾಯಿತು. ಕದಳಿ ವೇದಿಕೆ ನೂತನ ಪದಾಧಿಕಾರಿಗಳಾದ ಅಕ್ಕಮಹಾದೇವಿ ಭರತನೂರಮಠ, ಶಾಂತಕ್ಕ ಮಡಿವಾಳರ, ರೇಣುಕಾ ಮಡಿವಾಳರ, ಶೋಭಾ ಮೇವುಂಡಿಮಠ ಅವರನ್ನು ಸನ್ಮಾನಿಸಲಾಯಿತು.ಸಮಾರಂಭ ಅಧ್ಯಕ್ಷತೆ ವಹಿಸಿದ್ದ ದಾಕ್ಷಾಯಣಿ ಗಾಣಗೇರ ಮಾತನಾಡಿದರು. ಸಮಾರಂಭದಲ್ಲಿ ಶೋಭಾ ಮುಂಡರಗಿ, ಸುವರ್ಣ ಕೋರಿಕೊಪ್ಪ, ರುದ್ರಾಕ್ಷಿ ನೆಲವಿಗಿ, ಲೀಲಾ ಮಿರ್ಜಿ, ಪ್ರೇಮಾ ಗೌಡಶಾನಿಮಠ, ಜ್ಯೋತಿ ಬಶೆಟ್ಟಿ, ಮಂಜುಳಾ ಕಡ್ಡಿ, ಶಶಿಕಲಾ ಶಿವಪೂರ, ಅನಸೂಯಾ ಗುಡಿಮನಿ, ಜುಬೇದಾ ನಾಯಕ, ನಿರ್ಮಲಾ ವಾಟ್ನಾಳಮಠ, ಸರೋಜಾ ಮಳಗಿ, ಲಲಿತಾ ಶಿವಶೆಟ್ಟರ ಮತ್ತಿತರರು ಉಪಸ್ಥಿತರಿದ್ದರು. ಕಮಲಾ ಬುಕ್ಕಶೆಟ್ಟಿ ಸ್ವಾಗತಿಸಿದರು. ಲಲಿತಾ ಹೊರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮಹಾದೇವಿ ಕಬ್ಬಿಣಕಂತಿಮಠ ನಿರೂಪಿಸಿದರು. ರೇಣುಕಾ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ