ಕನ್ನಡಪ್ರಭ ವಾರ್ತೆ ಚಿಂತಾಮಣಿ
ಕೇಂದ್ರ ಸರಕಾರ ನೂತನವಾಗಿ ಜಾರಿಗೊಳಿಸಿರುವ ಸಾರಥಿ ಸುರಕ್ಷಾ ಜಾಗೃತಿ ಕಾನೂನು ಲಾರಿ ಚಾಲಕರು ಹಾಗೂ ಮಾಲೀಕರಿಗೆ ಮಾರಕವಾಗಿದ್ದು, ಭಾರತೀಯ ನ್ಯಾಯ ಸಂಹಿತೆ ೨ನೇ ೨೦೨೩ ರ ಅಡಿ ಹಿಟ್ ಅಂಡ್ ರನ್ ಪ್ರಕರಣಗಳ ಸೆಕ್ಷನ್ ೧೦೬/೧ ಮತ್ತು ೧೦೬/೨ ನ್ನು ಕೂಡಲೇ ರದ್ದುಗೊಳಿಸಬೇಕು, ಶಿಕ್ಷೆಯ ಅವಧಿ ಹಾಗೂ ದಂಡವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ಸರಕಾರ ರಾಜ್ಯದ ಗಡಿಗಳಲ್ಲಿನ ಆರ್.ಟಿ.ಓ ಕಚೇರಿಗಳನ್ನು ರದ್ದುಪಡಿಸಿ ಲಾರಿ ಚಾಲಕರ ಮತ್ತು ಮಾಲೀಕರ ಹಿತ ಕಾಯಬೇಕು ಹಾಗೂ ಲಾರಿ ಚಾಲಕರ ಮತ್ತು ಮಾಲೀಕರ ಹಲವು ಬೇಡಿಕೆಗಳ ಈಡೇರಿಕೆಯ ಒತ್ತಾಯಿಸಿ ನಡೆದಿರುವ ಮುಷ್ಕರದ ಹಿನ್ನೆಲೆ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ನಗರದ ಮುಷ್ಕರ ನಡೆಸಿದರು. ಚಿಂತಾಮಣಿ ತಾಲೂಕು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.