ಕನ್ನಡಪ್ರಭ ವಾರ್ತೆ ಐಗಳಿಕಳಕೊಂಡ ತಾಯಿ, ತಂದೆ ಹಾಗೂ ಕಳೆದ ಸಮಯ ಎಂದಿಗೂ ಸಿಗುವುದಿಲ್ಲ. ಅವು ಬಜಾರದಲ್ಲಿ ಕೊಂಡು ತರುವ ವಸ್ತುಗಳಲ್ಲ, ಗಳಿಸಿದ ಆಸ್ತಿ ಹಾಗೂ ಹಣ ಕಳವುದಾರೇ ಮತ್ತೆ ಗಳಿಸಬಹುದು ಎಂದು ಕವಲಗುಡ್ಡ ಅಮರೇಶ್ವರ ಸ್ವಾಮೀಜಿ ನುಡಿದರು.
ಸಿದ್ದೇಶ್ವರ ಮಹಾರಾಜರು ಮಾತನಾಡಿ, ಅಂಕಲ ಸಿದ್ದೇಶ್ವರರಿಗೆ ಭಕ್ತಿಯಿಂದ ನಡೆದುಕೊಂಡರೆ ನಿಮ್ಮನ್ನು ಏಂದಿಗೂ ಕೈ ಬಿಡುವುದಿಲ್ಲ. ಜೀವನದಲ್ಲಿ ಪುಣ್ಯ ಕಾರ್ಯ ಮಾಡಿದ್ದರೆ ಭಗವಂತ ನಿಮ್ಮನ್ನು ಕಾಪಾಡುತ್ತಾನೆ. ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ, ಕೆಟ್ಟ ಕೆಲಸ ಮಾಡಲೇಬಾರದು ಎಂದರು.
ವಿಶ್ರಾಂತಿ ಪ್ರಾಚಾರ್ಯ ಎ.ಎಸ್. ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳಿಗೆ ಸಂಸ್ಕಾರ ಇಲ್ಲ. ತಾಯಿ-ತಂದೆ, ಗುರುಗಳು ಮಕ್ಕಳಿಗೆ ಮೊದಲು ಸಂಸ್ಕಾರ ಕೊಡಬೇಕಿದೆ ಎಂದರು.ಜಾತ್ರೆಯ ನಿಮಿತ್ತ ಶ್ರೀ ಕವಿರತ್ನ ಕಾಳಿದಾಸ ನಾಟ್ಯ ಸಂಘ ಐಗಳಿ ಇವರಿಂದ ಅಣ್ಣನ ಒಡಲು ಬಂಗಾರದ ಕಡಲು ನಾಟಕದ ಭಿತ್ತಿಪತ್ರಗಳನ್ನು ಶ್ರೀಗಳು, ಗಣ್ಯರು ಬಿಡುಗಡೆ ಮಾಡಿದರು. ಈ ವೇಳೆ ಗ್ರಾಮದ ಹಿರಿಯರಾದ ಸಿ.ಎಸ್.ನೇಮಗೌಡ, ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಬಿರಾದಾರ, ಅರ್ಚಕರು, ಜಾತ್ರಾ ಕಮಿಟಿ ಹಾಗೂ ಯುವಕರ ಬಳಗದವರು ಇದ್ದರು. ನಿಂಗಪ್ಪ ದಳವಾಯಿ ಸ್ವಾಗತಿಸಿದರು. ಕೆ.ಎಸ್.ಬಿರಾದಾರ ನಿರೂಪಿಸಿದರು. ಬತಮಣ್ಣ ಹಿರೇಕುರುಬರ ವಂದಿಸಿದರು.