ಮಕ್ಕಳ ಬೆಳವಣಿಗೆಗೆ ಸಾಹಿತ್ಯ ಪ್ರೀತಿ ಸಹಕಾರಿ: ಪಾಣತ್ತಲೆ ಹರೀಶ್

KannadaprabhaNewsNetwork |  
Published : Oct 06, 2026, 02:30 AM IST
ಕರ್ನಾಟಕ ಅರೆಭಾಷೆಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮೂರ್ನಾಡು ಗೌಡ ಸಮಾಜ ಹಾಗೂ ಮೂರ್ನಾಡು ಗೌಡ ಮಹಿಳಾಒಕ್ಕೂಟದ ಜಂಟಿ ಆಶ್ರಯದಲ್ಲಿ 16 ವರ್ಷದೊಳಗಿನ ಮಕ್ಕಳಿಗಾಗಿ ‘ಕಥೆ ಬರೆಯುವ ಕಾರ್ಯಾಗಾರ’ಮೂರ್ನಾಡಿನ ಗೌಡ ಸಮಾಜದಲ್ಲಿ ಜರುಗಿತು. | Kannada Prabha

ಸಾರಾಂಶ

ತಂತ್ರಜ್ಞಾನದ ಈ ಯುಗದಲ್ಲಿ ಮಕ್ಕಳು ಮೊಬೈಲ್ ಬಳಕೆಯಿಂದ ಹೊರಬರಲು ಸಾಹಿತ್ಯಿಕ ಕಾರ್ಯಕ್ರಮಗಳು ಸಹಕಾರಿ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಬೆಳವಣಿಗೆ ಸಾಧ್ಯ ಎಂದು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್ ಅಭಿಪ್ರಾಯಪಟ್ಟಿದ್ದಾರೆ.

ನಾಪೋಕ್ಲು: ತಂತ್ರಜ್ಞಾನದ ಈ ಯುಗದಲ್ಲಿ ಮಕ್ಕಳು ಮೊಬೈಲ್ ಬಳಕೆಯಿಂದ ಹೊರಬರಲು ಸಾಹಿತ್ಯಿಕ ಕಾರ್ಯಕ್ರಮಗಳು ಸಹಕಾರಿ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಬೆಳವಣಿಗೆ ಸಾಧ್ಯ ಎಂದು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್ ಅಭಿಪ್ರಾಯಪಟ್ಟಿದ್ದಾರೆ.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮೂರ್ನಾಡು ಗೌಡ ಸಮಾಜ ಹಾಗೂ ಮೂರ್ನಾಡು ಗೌಡ ಮಹಿಳಾ ಒಕ್ಕೂಟದ ಜಂಟಿ ಆಶ್ರಯದಲ್ಲಿ ಮೂರ್ನಾಡು ಗೌಡ ಸಮಾಜದಲ್ಲಿ ನಡೆದ 16 ವರ್ಷದೊಳಗಿನ ಮಕ್ಕಳಿಗಾಗಿ ‘ಕಥೆ ಬರೆಯುವ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪೆರಾಜೆ ಗೋಪಾಲಕೃಷ್ಣ, ಮಕ್ಕಳಲ್ಲಿ ಅರೆಭಾಷೆ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವುದು ಹಾಗೂ ಕಥೆ ಬರೆಯುವ ಕೌಶಲ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ತೆಕ್ಕಡೆ ಕುಮಾರಸ್ವಾಮಿ ಮಾತನಾಡಿ, ಕಥೆ ಎನ್ನುವುದು ಕೇವಲ ಕಲ್ಪನೆಯ ಅಭಿವ್ಯಕ್ತಿಯಲ್ಲ. ಅದು ನಮ್ಮ ಸುತ್ತಮುತ್ತಲಿನ ಬದುಕು, ಸಂಬಂಧಗಳು, ಅನುಭವಗಳು ಮತ್ತು ಸಮಾಜದ ವಿಚಾರಗಳನ್ನು ಸುಂದರವಾಗಿ ಕಟ್ಟಿಕೊಡುವ ಶಕ್ತಿಯುತ ಮಾಧ್ಯಮ ಎಂದರು.ಅರೆಭಾಷೆ ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಅವರು ಮಕ್ಕಳಿಗೆ ಕಥೆಗೆ ಸೂಕ್ತ ವಿಷಯ ಆಯ್ಕೆ ಮಾಡುವುದು ಹೇಗೆ, ಕಥೆಯ ಆರಂಭ, ಬೆಳವಣಿಗೆ ಹಾಗೂ ಅಂತ್ಯ ರೂಪಿಸುವ ವಿಧಾನ, ಪಾತ್ರಗಳ ಸೃಷ್ಟಿ ಮತ್ತು ಸ್ವ-ಅನುಭವಗಳನ್ನು ಕಥೆಯ ರೂಪಕ್ಕೆ ತರುವ ಕುರಿತು ವಿಸ್ತೃತ ಮಾರ್ಗದರ್ಶನ ನೀಡಿದರು.

ಮೆರ್ಕಜ್ಜೆ ಲೋಹಿತ್ ಸೋಮಯ್ಯ, ತೆಕ್ಕಡೆ ಪ್ರಸನ್ನ ಹಾಗೂ ಮಹಿಳಾ ಒಕ್ಕೂಟದ ಆಡಳಿತ ಮಂಡಳಿಯ ಪದಾಧಿಕಾರಿಗಳು ಇದ್ದರು. ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಲ್ಲುಮುಟ್ಲು ಜಶ್ಮಿ ಚಿಂತು ಸ್ವಾಗತಿಸಿದರು. ತೆಕ್ಕಡೆ ಆಶಾ ಪ್ರಸನ್ನ ನಿರೂಪಿಸಿ ಕೊಂಪುಳಿ ಮಮತಾ ವಂದಿಸಿದರು.

.ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮೂರ್ನಾಡು ಗೌಡ ಸಮಾಜ ಹಾಗೂ ಮೂರ್ನಾಡು ಗೌಡ ಮಹಿಳಾ

ಒಕ್ಕೂಟದ ಜಂಟಿ ಆಶ್ರಯದಲ್ಲಿ 16 ವರ್ಷದೊಳಗಿನ ಮಕ್ಕಳಿಗಾಗಿ ‘ಕಥೆ ಬರೆಯುವ ಕಾರ್ಯಾಗಾರ’

ಮೂರ್ನಾಡಿನ ಗೌಡ ಸಮಾಜದಲ್ಲಿ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿತ್ರಕೂಟ ಆಯುರ್ವೇದ ಹಬ್ಬಕ್ಕೆ ವೈಭವದ ಚಾಲನೆ
ಗ್ರಾಮೀಣ ಭಾಗಕ್ಕೆ ಸಿಂಗಲ್ ಪ್ಲಾಟ್ ಅನುಮೋದನೆ ಸುಲಭ