ಕನ್ನಡಪ್ರಭ ವಾರ್ತೆ ಮಂಗಳೂರು
ನಗರದಲ್ಲಿ ನಡೆದ 7ನೇ ಲಿಟ್ ಫೆಸ್ಟ್‌ನ ಸಮಾರೋಪ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂಸ್ಕೃತ ಕಾವ್ಯಶಾಸ್ತ್ರ ಅಂತರ್ಜಾಲದಲ್ಲಿ ಸಲೀಲಾಗಿ ಸಿಗುತ್ತದೆ. ಇದನ್ನು ಪ್ರೀತಿಯಿಂದ ಮಾಡಿಕೊಂಡು ಬಂದಿದ್ದರಿಂದ ಸಾಧ್ಯವಾಗಿದೆ. ಶಾಸ್ತ್ರೀಯ ಸಂಗೀತವನ್ನೂ ಇದೇ ರೀತಿಯಲ್ಲಿ ನಡೆಸಿಕೊಂಡು ಬರಲಾಗಿದೆ. ಕಲೆ- ಸಾಹಿತ್ಯದ ಅನನ್ಯತೆಯನ್ನು ಉಳಿಸಿಕೊಳ್ಳಲು ಇಂತಹ ಪ್ರೀತಿ ತುಂಬ ಅಗತ್ಯ ಎಂದರು.
ಪ್ರಸ್ತುತ ಅಸಂಬದ್ಧವಾಗಿ ಬರೆಯುವವರಿಗೆ ಉತ್ತರ ನೀಡುವವರು ನಮ್ಮಲ್ಲಿ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ ಆರ್.ಗಣೇಶ್, ಕಲೆ, ಸಾಹಿತ್ಯ ಕಮ್ಯೂನಿಟಿ ಸೆಂಟ್ರಿಕ್ ಆಗುವುದಕ್ಕಿಂತ ಮುಖ್ಯವಾಗಿ ಅದರ ಸ್ವಾಯತ್ತತೆ, ಮೌಲ್ಯ ಉಳಿಸಿಕೊಳ್ಳುವ ಪ್ರೀತಿಯ ಕಾರ್ಯ ಬೇಕು ಎಂದು ಹೇಳಿದರು.ನಮ್ಮ ದೇಶದಲ್ಲಿ ಸಿಗುವಷ್ಟು ಶಾಸ್ತ್ರಗಳು ಎಲ್ಲೂ ಸಿಗಲ್ಲ. ಆದರೆ ಈ ಶಾಸ್ತ್ರಗಳನ್ನು ಓದುವವರು ಎಷ್ಟು ಮಂದಿ ಇದ್ದಾರೆ? ವಿಶ್ವ ವಿದ್ಯಾನಿಲಯಗಳು, ಅಕಾಡೆಮಿಗಳು ಪರಿಶ್ರಮದ ಪಾಂಡಿತ್ಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
--------------
ಕನ್ನಡಪ್ರಭ ವಾರ್ತೆ ಮಂಗಳೂರುಭಾವನಾ ಅರೋರಾ ಅವರು ಬರೆದಿರುವ ‘ನಾಗ್ರೋಟಾ ಅಂಡರ್ ಸೀಜ್’ ಪುಸ್ತಕ ಮಂಗಳೂರು ಲಿಟ್ ಫೆಸ್ಟ್‌ನ 2ನೇ ದಿನ ಭಾನುವಾರ ಲೋಕಾರ್ಪಣೆಗೊಂಡಿತು.
ಪತ್ರಕರ್ತ ಮತ್ತು ಲೇಖಕ ಶಿವ್ ಆರೂರ್ ಮಾತನಾಡಿ, ಈ ದೇಶದ ಮೊದಲ ೬೦ ರಿಂದ ೭೦ ವರ್ಷ ಸೇನೆಯು ಸೌಲಭ್ಯಗಳಿಂದ ವಂಚಿತವಾಗಿತ್ತು. ನಮ್ಮ ದೇಶವು ಅಮೆರಿಕಗಿಂತ ಹೆಚ್ಚು ಯುದ್ಧಗಳನ್ನು ಹೋರಾಡಿದ ದೇಶವಾಗಿದೆ ಎಂದು ಹೇಳಿದರು.
----------------
ಕನ್ನಡಪ್ರಭ ವಾರ್ತೆ ಮಂಗಳೂರುಈಗಿನ ಯುವಜನತೆ ದೇಶದ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ದೇಶದ ಕೊರತೆಗೆ ನಮ್ಮಲ್ಲೇ ಉತ್ತರ ಕಂಡುಕೊಳ್ಳುವ ಬದಲು ಪಾಶ್ಚಾತ್ಯದತ್ತ ಮುಖ ಮಾಡುತ್ತೇವೆ. ವಿದೇಶಿಗರು ನಮ್ಮ ದೇಶದತ್ತ ನೋಡುತ್ತಿದ್ದಾರೆ. ನಾವು ನಮ್ಮ ದೇಶವನ್ನು ಕೇವಲ ಆಧ್ಯಾತ್ಮಿಕ ಮಾತ್ರವಲ್ಲ ನಾಯಕತ್ವ ದೃಷ್ಟಿಯಿಂದ ನೋಡಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಾಮರ್ಥ್ಯ ಆಯೋಗ ಸದಸ್ಯ ಹಾಗೂ ವಿವೇಕಾನಂದ ಯೂತ್ ಮೂವ್‌ಮೆಂಟ್ ಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಆಶಿಸಿದರು.
-------------