ಇನ್‌ಸ್ಟಾಗ್ರಾಂನಲ್ಲಿ ಪ್ರೀತಿ 2 ತಿಂಗಳಿಗೇ ಪತ್ನಿ ಕೊಲೆ

KannadaprabhaNewsNetwork |  
Published : Jun 18, 2026, 01:15 AM IST
೧೭ಕೆಎಲ್‌ಆರ್-೧೦ಕೊಲೆಯಾದ ಯೋಗಿನಿ. | Kannada Prabha

ಸಾರಾಂಶ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವಲಹಳ್ಳಿ ಮೂಲದ ಗಣೇಶ್ ಎಂಬಾತನೆ ಕೊಲೆ ಮಾಡಿ ಸದ್ಯ ಪೊಲೀಸರಿಗೆ ಶರಣಾಗಿದ್ದಾನೆ.

ಮಾಲೂರು:

ಇನ್‌ಸ್ಟಾಗ್ರಾಂನಲ್ಲಿ ಪ್ರೀತಿಸಿ ಮದುವೆಯಾದ ಎರಡೇ ತಿಂಗಳಿಗೆ ಪತಿಯಿಂದಲೆ ಪತ್ನಿ ಕೊಲೆಯಾಗಿರುವ ಘಟನೆ ಮಾಲೂರಿನಲ್ಲಿ ನಡೆದಿದೆ.

ತಾಲೂಕಿನ ಮಿಂಡಹಳ್ಳಿ ಕೆರೆ ಬಳಿ ಕಳೆದ ರಾತ್ರಿ ಕೊಲೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ಯೋಗಿನಿ (೨೧) ಕೊಲೆಯಾದ ಮಹಿಳೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವಲಹಳ್ಳಿ ಮೂಲದ ಗಣೇಶ್ ಎಂಬಾತನೆ ಕೊಲೆ ಮಾಡಿ ಸದ್ಯ ಪೊಲೀಸರಿಗೆ ಶರಣಾಗಿದ್ದಾನೆ.

ಎರಡು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ಯೋಗಿನಿ ಹಾಗೂ ಗಣೇಶ್ ಕಳೆದ ೨ ವರ್ಷಗಳಿಂದಲೂ ಪ್ರತಿನಿತ್ಯ ಕಿತ್ತಾಟ, ಅಲ್ಲದೆ ಇತ್ತೀಚೆಗೆ ಸಂಸಾರದಲ್ಲಿ ಗಲಾಟೆ ಮಾಡಿಕೊಂಡು ಹೆಂಡತಿ ಮೇಲೆ ಅನುಮಾನಪಡುತ್ತಿದ್ದ ಎನ್ನಲಾಗಿದೆ.

ಕಳೆದ ಒಂದು ವಾರದಿಂದ ತವರು ಮನೆಯಲ್ಲೆ ಇದ್ದ ಯೋಗಿನಿ ನಿನ್ನೆ ಟಾಟಾ ಕಂಪನಿಗೆ ಇಂಟರ್ ವ್ಯೂಗೆ ಬಂದಿದ್ದಾಳೆ. ಈ ವೇಳೆ ಆಕೆಯನ್ನ ಕರೆಸಿಕೊಂಡು ಕೊಲೆ ಮಾಡಿ ಬಳಿಕ ಯೋಗಿನಿ ತಾಯಿ ಕಲ್ಪನಾಗೆ ತಿಳಿಸಿದ್ದಾನೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಬರುತ್ತಿದ್ದ ಯೋಗಿನಿಯನ್ನು ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ ಬಳಿಕ ಕೆರೆ ಬಳಿ ಕೊಲೆ ಮಾಡಿದ್ದೇನೆ ಹೋಗಿ ನೋಡಿ ಎಂದು ಅವನೆ ಹೇಳಿದ್ದಾನೆ.

ಮಾಲೂರು ಪೊಲೀಸರು ಆರೋಪಿ ಪತಿ ಗಣೇಶ್‌ನನ್ನು ಬಂಧಿಸಿದ್ದು, ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದ ಇಂಟರ್ ಕ್ಯಾಸ್ಟ್ ಮ್ಯಾರೇಜ್ ಆಗಿರುವುದರಿಂದ ಡಿಸಿಆರ್‌ಇ ಸೆಲ್‌ಗೆ ಪ್ರಕರಣವನ್ನು ಹಸ್ತಾಂತರ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಧಿಕಾರಿಗಳಿಂದ ರೈತರಿಂದ ಅರ್ಜಿಗಳ ಸ್ವೀಕಾರ
ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಚಾಲನೆ