ಮಂಗಳೂರಿಗೆ ಬಂತು ಎಲ್‌ಪಿಜಿ ಹಡಗು

KannadaprabhaNewsNetwork |  
Published : Mar 23, 2026, 02:15 AM IST
ಹಡಗು | Kannada Prabha

ಸಾರಾಂಶ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಶನಿವಾರ ಕಚ್ಚಾತೈಲ ಹೊತ್ತ ಹಡಗು ಮಂಗಳೂರು ಬಂದರಿಗೆ ಆಗಮಿಸಿದ ಬೆನ್ನಲ್ಲೇ ಭಾನುವಾರ ಎಲ್‌ಪಿಜಿ ಹೊತ್ತ ಮತ್ತೊಂದು ಸರಕು ಹಡಗು ಬಂದು ತಲುಪಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಶನಿವಾರ ಕಚ್ಚಾತೈಲ ಹೊತ್ತ ಹಡಗು ಮಂಗಳೂರು ಬಂದರಿಗೆ ಆಗಮಿಸಿದ ಬೆನ್ನಲ್ಲೇ ಭಾನುವಾರ ಎಲ್‌ಪಿಜಿ ಹೊತ್ತ ಮತ್ತೊಂದು ಸರಕು ಹಡಗು ಬಂದು ತಲುಪಿದೆ.

ಸಿಂಗಾಪುರ ಧ್ವಜ ಹೊಂದಿರುವ ‘ಪಿಕ್ಸಿಸ್ ಪಯನೀರ್’ ಹೆಸರಿನ ಸರಕು ಹಡಗು ಅಮೆರಿಕದ ಟೆಕ್ಸಾಸ್‌ನಿಂದ ಸುಮಾರು 16 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಹೊತ್ತು ಬಂದಿದೆ. ಯುದ್ಧ ಆರಂಭವಾದ ಬಳಿಕ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿದ ಮೊದಲ ಎಲ್‌ಪಿಜಿ ಹಡಗು ಇದು. ಮಾ.14ರಂದು ಅಮೆರಿಕದ ಟೆಕ್ಸಾಸ್‌ನಿಂದ ಹೊರಟಿದ್ದ ಈ ಪಿಕ್ಸಿಸ್ ಪಯನೀರ್ ಹಡಗು, ಯಶಸ್ವಿಯಾಗಿ ಮಂಗಳೂರು ತಲುಪಿದ್ದು, ಅನ್‌ಲೋಡಿಂಗ್‌ ಕಾರ್ಯ ಕೂಡ ಆರಂಭವಾಗಿದೆ.

ಇದಕ್ಕೂ ಮೊದಲು ಶನಿವಾರ, ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ‘ಅಕ್ವಾ ಟೈಟಾನ್‌’ ಹೆಸರಿನ ಕಚ್ಛಾ ತೈಲ ಹೊತ್ತ ಬೃಹತ್‌ ಹಡಗು ಮಂಗಳೂರು ತಲುಪಿದ್ದು, ಪೈಪ್‌ಲೈನ್‌ ಮೂಲಕ ಎಂಆರ್‌ಪಿಎಲ್‌ ಸಂಸ್ಕರಣಾ ಘಟಕಕ್ಕೆ ತೈಲ ಇಳಿಸುವ ಕಾರ್ಯ ಭಾನುವಾರವೂ ಮುಂದುವರಿದಿದೆ.

ಈ ಎರಡು ಹಡಗುಗಳ ಆಗಮನದಿಂದಾಗಿ ತೈಲ ಮತ್ತು ಅನಿಲ ಭೀತಿಯಲ್ಲಿದ್ದ ರಾಜ್ಯದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಎಲ್ಲೆಡೆ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಅಭಾವ ತಲೆದೋರಿದ್ದು, ಹೋಟೆಲ್‌, ಕ್ಯಾಂಟಿನ್‌ಗಳು ಮುಚ್ಚುವ ಸ್ಥಿತಿಗೆ ತಲುಪಿದ್ದವು. ಇದೀಗ ಅನಿಲ ಹೊತ್ತ ನೌಕೆ ಆಗಮಿಸಿರುವುದು ವ್ಯಾಪಾರಿಗಳಲ್ಲಿ ಹರ್ಷ ತಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನತ್ತಬೆಲೆ ಡೇರಿ ಅಧ್ಯಕ್ಷರಾಗಿ ಶಾಸಕ ನಾರಾಯಣಸ್ವಾಮಿ ಅವಿರೋಧ ಆಯ್ಕೆ
ಸುದ್ದಿ ಹೋಗಿದೆ..........ಧಾರ್ಮಿಕ ಚಟುವಟಿಕೆ ಸಂಸ್ಕೃತಿ ಉಳಿಸುವಲ್ಲಿ ಸಹಕಾರಿ