ಕನ್ನಡಪ್ರಭ ವಾರ್ತೆ ವಿಜಯಪುರ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೂಫಿ ಸಂತರು ತಮ್ಮ ಪ್ರೀತಿ, ಕರುಣೆ, ಸಹಿಷ್ಣುತೆ ಮತ್ತು ಮಾನವೀಯತೆಯ ಸಂದೇಶಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಬಿತ್ತಿದ್ದಾರೆ. ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಸರ್ವಧರ್ಮ ಸಮಭಾವ ಮತ್ತು ಭ್ರಾತೃತ್ವದ ಸಂದೇಶ ಸಾರುತ್ತಿವೆ ಎಂದು ಹೇಳಿದರು.
ಹಾಸಿಂಪೀರ್ ದರ್ಗಾ ಭೇಟಿ ಸಂದರ್ಭದಲ್ಲಿ ಹಾಸಿಂಪೀರ್ ದರ್ಗಾದ ಸಯ್ಯದ್ ಮೆಹಮೂದ್ ಹುಸೇನಿ ಹಾಸ್ಮಿ, ಸಯ್ಯದ್ ಮೊಯಿನುದ್ದೀನ್ ಹುಸೇನಿ ಹಾಸ್ಮಿ, ಸೈಯದ್ ಜೈನುಲ್ ಅಬಿದಿನ್ ಹಾಸ್ಮಿ, ಸೈಯದ್ ವಾಜೇದಪಿರಾಂ ಹಾಸ್ಮಿ, ಮುಖಂಡರಾದ ಜಮೀರ್ ಭಕ್ಷಿ, ಶಕೀಲ್ ಬಾಗಮಾರೆ ಇತರರು ಉಪಸ್ಥಿತರಿದ್ದರು.ಬಳಿಕ ಅರ್ಕಾಟ್ ದರ್ಗಾ ಭೇಟಿ ಸಂದರ್ಭದಲ್ಲಿ ಅರ್ಕಾಟ್ ದರ್ಗಾದ ಸಜ್ಜಾದೆ ಡಾ.ಸೈಯ್ಯದ್ ಶಾ ತಕಿಪಿರಾಂ ಹುಸೇನಿ, ಸಯ್ಯದ್ ಶಾ ಇಕ್ಬಾಲ್ ಪೀರಾಂ ಹುಸೇನಿ, ಸೈಯ್ಯದ್ ಶಾ ಅಲಿ ಪೀರಾಂ ಹುಸೇನಿ, ಮುಖಂಡರಾದ ಮೊಹ್ಮದ್ ರಫೀಕ್ ಟಪಾಲ್, ರಫೀಕ್ ಅಹ್ಮದ್ ಕಾಣೆ, ಅಬ್ದುಲ್ ರಜಾಕ್ ಹೊರ್ತಿ, ಎಂ.ಸಿ. ಮುಲ್ಲಾ, ಅಶ್ಪಾಕ್ ಮನಗೂಳಿ ಇತರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಚಿವರು, ಈ ದೇವಾಲಯ ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿದ್ದು, ವಿಶಿಷ್ಟ ವಾಸ್ತುಶಿಲ್ಪ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಿಂದಾಗಿ ನಿತ್ಯ ಸಾವಿರಾರು ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಸಿದ್ದೇಶ್ವರರ ಕೃಪಾಶೀರ್ವಾದದಿಂದ ನಾಡಿನಲ್ಲಿ ಸೌಹಾರ್ದತೆ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ಅಭಿವೃದ್ಧಿ ಮತ್ತು ಜನಕಲ್ಯಾಣದ ಕಾರ್ಯಗಳು ಮತ್ತಷ್ಟು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹೇಳಿದರು.
---
ಬರಹ: ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಎಂ.ಬಿ.ಪಾಟೀಲ ಭೇಟಿ ನೀಡಿದರು.