ಬಡವರ ಬದುಕಿಗೆ ಆಶಾಕಿರಣವಾಗಿದ್ದ ಎಂ.ಸಿ.ಮನಗೂಳಿ

KannadaprabhaNewsNetwork |  
Published : Jan 29, 2026, 03:15 AM IST
ಸಿಂದಗಿ ಪಟ್ಟಣದಲ್ಲಿ ಬುಧುವಾರ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ 5ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಬಡವರ, ಸಾಮಾನ್ಯ ಜನರ ಮತ್ತು ರೈತರ ಬದುಕಿನ ಏಳಿಗೆಗಾಗಿ ದುಡಿದು ನೊಂದು ಬೆಂದಿದವರ ದೀನದಲಿತರ ಬದುಕಿಗೆ ಆಶಾಕಿರಣವಾಗಿದ್ದ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಬದುಕು ನಿಜಕ್ಕೂ ಅಜರಾಮರ ಎಂದು ಮಾಜಿ ಜಿಪಂ ಸದಸ್ಯ ನರಸಿಂಹ ಪ್ರಸಾದ ತಿವಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಬಡವರ, ಸಾಮಾನ್ಯ ಜನರ ಮತ್ತು ರೈತರ ಬದುಕಿನ ಏಳಿಗೆಗಾಗಿ ದುಡಿದು ನೊಂದು ಬೆಂದಿದವರ ದೀನದಲಿತರ ಬದುಕಿಗೆ ಆಶಾಕಿರಣವಾಗಿದ್ದ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಬದುಕು ನಿಜಕ್ಕೂ ಅಜರಾಮರ ಎಂದು ಮಾಜಿ ಜಿಪಂ ಸದಸ್ಯ ನರಸಿಂಹ ಪ್ರಸಾದ ತಿವಾರಿ ಹೇಳಿದರು.

ಪಟ್ಟಣದಲ್ಲಿ ಬುಧುವಾರ ನಡೆದ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ 5ನೇ ಪುಣ್ಯ ಸ್ಮರಣೆ ನಿಮಿತ್ತ ಅವರ ಗದ್ದುಗೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಸಿಂದಗಿ ಮತ ಕ್ಷೇತ್ರವನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿ ಸಾಮಾನ್ಯರ ಶಾಸಕರಾಗಿ, ಸಚಿವರಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ್ದಾರೆ. ಕಷ್ಟದಿಂದ ಬಂದ ಅವರು ಅತ್ಯಂತ ಮೇಲ್ಮಟ್ಟಕ್ಕೆ ಹೋಗಿರುವುದು ಒಂದು ಇತಿಹಾಸ. ಗುತ್ತಿ ಬಸವಣ್ಣ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ ಯೋಜನೆ, ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸುವ ಯೋಜನೆ, 24/7 ಕುಡಿಯುವ ನೀರಿನ ಯೋಜನೆ, ಮಿನಿ ವಿಧಾನಸೌಧ ಕಟ್ಟಡ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯಗಳು ಸೇರಿದಂತೆ ಹಲವಾರು ಶಾಶ್ವತ ಯೋಜನೆಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ನೀಡಿದ್ದಾರೆ. ಅಂತಹ ಮಹಾನ್‌ ಚೇತನರು ಮನಗೂಳಿ ಅವರು. ಹಣವಿದ್ದಾಗ ದಾನ ಧರ್ಮ ಮಾಡಬೇಕು, ವಯಸ್ಸು ಇದ್ದಾಗ ದುಡಿಬೇಕು, ಅಧಿಕಾರವಿದ್ದಾಗ ಜನ ಸೇವೆ ಮಾಡಬೇಕು ಎಂಬ ತತ್ವವನ್ನು ತಮ್ಮ ಬದುಕಿನುದ್ದಕ್ಕೂ ಮೈಗೂಡಿಕೊಂಡು ಬಂದವರು. ಕ್ಷೇತ್ರದ ಜನತೆ ಅವರ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ, ಗೌರವ ಯಾವತ್ತು ಕಡಿಮೆಯಾಗುವುದಿಲ್ಲ ಎಂದು ಸ್ಮರಿಸಿದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ನಮ್ಮ ತಂದೆ ಅವರು ಅಧಿಕಾರದ ಅವಧಿಯಲ್ಲಿ ಅನೇಕ ಶಾಶ್ವತ ಯೋಜನೆಗಳನ್ನು ಈ ಕ್ಷೇತ್ರಕ್ಕೆ ನೀಡಿದ್ದಾರೆ. ಅವರ ಹಾಗೆ ನಾನು ಕೂಡಾ ಕ್ಷೇತ್ರದ ಜನ ಸೇವಕನಾಗಿ ಕಾರ್ಯ ಮಾಡುತ್ತಿದ್ದೇನೆ. ಶಾಶ್ವತ ಯೋಜನೆಗಳನ್ನು ಕಲ್ಪಿಸುವ ಕನಸು ಹೊತ್ತಿದ್ದೇನೆ. ಈ ಕ್ಷೇತ್ರದ ಜನತೆ ಮನಗೂಳಿ ಕುಟುಂಬದ ಮೇಲೆ ಇಟ್ಟಿರುವ ಗೌರಕ್ಕೆ, ಪ್ರೀತಿಗೆ ನಾವು ಎಂದು ಅಗೌರವದಿಂದ ವರ್ತಿಸುವುದಿಲ್ಲ ಸಾಮಾನ್ಯರಲ್ಲಿ ನಾನು ಸಾಮಾನ್ಯನಾನು ಜನತೆಯ ಸೇವೆ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಮುಖಂಡ ಗುರಣ್ಣಗೌಡ ಪಾಟೀಲ ನಾಗಾವಿ, ಸೋಮನಗೌಡ ಬಿರಾದಾರ, ಭಾಗಪ್ಪಗೌಡ ಪಾಟೀಲ ಆಹೇರಿ, ಮಲ್ಲಣ್ಣ ಸಾಲಿ, ರವಿರಾಜ ದೇವರಮನಿ, ಬಸವರಾಜ ಕಾಂಬಳೆ, ಅರವಿಂದ ಹಂಗರಗಿ, ಸಿದ್ರಾಮ ಕಲ್ಲೂರ, ಪ್ರಭುಗೌಡ ಬಿರಾದಾರ, ಸಾಧೀಕ ಸುಂಬಡ, ಶಿವಾನಂದ ಕೋಟರಗಸ್ತಿ, ಜಿ.ಟಿ.ಪಾಟೀಲ, ಸಲೀಂ ಕಣ್ಣಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಗೆ ಸತತ ಪ್ರಯತ್ನ, ಪ್ರಾಮಾಣಿಕತೆ ಅಗತ್ಯ
ಹಿಪ್ಪರಗಿ ಬ್ಯಾರೇಜ್‌ ನೀರು ಸಂಗ್ರಹದಲ್ಲಿ ಚೇತರಿಕೆ