ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಎಂ.ಎಲ್.ಸಂತೋಷ ಆಯ್ಕೆ

KannadaprabhaNewsNetwork |  
Published : Mar 21, 2025, 12:33 AM IST
ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಎಂ.ಎಲ್.ಸಂತೋ? ಆಯ್ಕೆ | Kannada Prabha

ಸಾರಾಂಶ

ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಲ್.ಸಂತೋಷ ಉಪಾಧ್ಯಕ್ಷರಾಗಿ ಹನುಮಂತರಾಜು

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಲ್.ಸಂತೋಷ ಉಪಾಧ್ಯಕ್ಷರಾಗಿ ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ ಖಜಾಂಚಿ ಅರುಂಧತಿ, ಜಂಟಿ ಕಾರ್ಯದರ್ಶಿ ಕೃಷ್ಣಪ್ಪ ಆಯ್ಕೆಯಾದರೆ ಎಂದು ಚುನಾವಣಾಧಿಕಾರಿಯಾಗಿದ್ದ ಹಿರಿಯ ವಕೀಲ ನಾಗೇಂದ್ರಪ್ಪ ಘೋಷಣೆ ಮಾಡಿದರು.ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜಿ.ಡಿ.ದೇವರಾಜು, ಟಿ.ಕೃಷ್ಣಮೂರ್ತಿ, ಎಂ.ಎಲ್.ಸಂತೋಷ ಸ್ಪರ್ಧೆ ಮಾಡಿದ್ದು, ದೇವರಾಜು ೧೮ ಮತ ಪಡೆದರೆ ಎಂ.ಎಲ್ ಸಂತೋಷ್ ಅವರು ೧೯ ಮತ ಪಡೆದು ಜಯಶೀಲರಾಗಿದ್ದಾರೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ ಲಕ್ಷ್ಮೀ ಅವರು ೧೫ ಮತ್ತು ಕೃಷ್ಣಪ್ಪ ಅವರು ೨೨ ಮತ ಪಡೆದು ಕೃಷ್ಣಪ್ಪ ಅವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇನ್ನೂಳಿದಂತೆ ಉಪಾಧ್ಯಕ್ಷ, ಪ್ರಧಾನಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ನೂತನ ಅಧ್ಯಕ್ಷ ಎಂ.ಎಲ್.ಸಂತೋಷ್, ಪ್ರಧಾನ ಕಾರ್ಯದರ್ಶಿ ಎಂ.ಎಚ್.ಮಂಜುನಾಥ್ ಮಾತನಾಡಿ ವಕೀಲ ಸಮಸ್ಯೆ ಹಾಗೂ ಕುಂದುಕೊರತೆಗಳ ಬಗ್ಗೆ ಗಮನ ಹರಿಸಿ ಮುಂದಿನ ದಿನಗಳಲ್ಲಿ ಈ ನಮ್ಮ ಜೆಎಂಎಫ್‌ಸಿ ಕೋರ್ಟ್‌ನ್ನು ಮೇಲ್ದರ್ಜೆಗೆ ತರಲು ಎಲ್ಲರೂ ಪ್ರಮಾಣಿಕ ಪ್ರಯತ್ನ ಮಾಡಬೇಕು. ನೂತನವಾಗಿ ಆಯ್ಕೆಯಾದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು. ಚುನಾವಣೆ ವೇಳೆಯಲ್ಲಿ ಮಾಜಿ ಅಧ್ಯಕ್ಷ ಬಿ.ಎಲ್.ನಾಗರಾಜು, ಹಿರಿಯ ವಕೀಲರಾದ ಎ.ಎಂ.ಕೃಷ್ಣಮೂರ್ತಿ, ಪುಟ್ಟರಾಜಯ್ಯ, ಮಧುಸೂಧನ್, ಅನಿಲ್‌ಕುಮಾರ್, ತಿಮ್ಮರಾಜು, ರಾಮಚಂದ್ರಯ್ಯ, ನರಸಿಂಹರಾಜು ಶಿವಕುಮಾರ್, ಮಲ್ಲಿಕಾರ್ಜುನಯ್ಯ, ನಾಗೇಂದ್ರಪ್ಪ, ಸಂತೋಷ ಲಕ್ಷ್ಮೀ, ಶಿಲ್ಪಾ, ಕೆಂಪರಾಜಮ್ಮ, ಬೃಂಧಾ, ಮಂಜುಳ, ಜ್ಯೋತಿ, ಸುನೀಲ್, ಶಿವರಾಜು, ತಿಮ್ಮೇಶ್, ನಾಗರಾಜು, ಅನಂತರಾಜು, ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ