ರಾಜ್ಯದಲ್ಲಿರುವುದು ‘ಎಂ ಪ್ಲಸ್ ಎಂ’ ಸರ್ಕಾರದ ಆಡಳಿತ: ಸುನಿಲ್ ಕುಮಾರ್

KannadaprabhaNewsNetwork |  
Published : Jun 25, 2025, 12:34 AM IST
32 | Kannada Prabha

ಸಾರಾಂಶ

ರಾಜ್ಯ ಸರ್ಕಾರ ಮುಸ್ಲಿಮರಿಗೆ ಆಶ್ರಯ ಮನೆಯಲ್ಲಿ 15 ಪರ್ಸೆಂಟ್ ಮೀಸಲು ನೀಡುತ್ತಿದೆ. ಆದರೆ ಬಡವರು ಮಾತ್ರ ಮನೆ ಪಡೆಯುವುದಕ್ಕೆ ಹಣ ನೀಡಬೇಕು. ಇದು ತೆರಿಗೆ ಹಾಕಿ ಜನರನ್ನು ಸುಲಿಗೆ ಮಾಡುತ್ತಿದ್ದ ರಜಾಕಾರರಿಗಿಂತಲೂ ಕ್ರೂರ ಸರ್ಕಾರ ಎಂದು ಸುನಿಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದಲ್ಲಿರುವುದು ‘ಎಂ ಪ್ಲಸ್ ಎಂ’ ಸರ್ಕಾರದ ಆಡಳಿತ, ಕಾಂಗ್ರೆಸ್ ಸರ್ಕಾರ ಎಂದರೆ ‘ಮುಸ್ಲಿಂ ಪ್ಲಸ್ ಮನಿ’ ಸರ್ಕಾರ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.ಅವರು ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಮುಸ್ಲಿಮರಿಗೆ ಆಶ್ರಯ ಮನೆಯಲ್ಲಿ 15 ಪರ್ಸೆಂಟ್ ಮೀಸಲು ನೀಡುತ್ತಿದೆ. ಆದರೆ ಬಡವರು ಮಾತ್ರ ಮನೆ ಪಡೆಯುವುದಕ್ಕೆ ಹಣ ನೀಡಬೇಕು. ಇದು ತೆರಿಗೆ ಹಾಕಿ ಜನರನ್ನು ಸುಲಿಗೆ ಮಾಡುತ್ತಿದ್ದ ರಜಾಕಾರರಿಗಿಂತಲೂ ಕ್ರೂರ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿ.ಆರ್. ಪಾಟೀಲ್, ರಾಜು ಕಾಗೆ ಮುಂತಾದ ಅವರದೇ ಪಕ್ಷದ ಶಾಸಕರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ, ಕಾಮಗಾರಿಗೆ ಕಾಸು, ಮನೆಗೆ ಹಣ ಕೊಡಬೇಕು ಎಂದು ಒಬ್ಬ ಶಾಸಕರು ಹೇಳಿದ್ದಾರೆ. ಅನುದಾನ ಇಲ್ಲ, ಅಭಿವೃದ್ಧಿ ಆಗುತ್ತಿಲ್ಲ, ರಾಜೀನಾಮೆ ನೀಡುತ್ತೇನೆ ಅಂತ ಮತ್ತೊಬ್ಬ ಶಾಸಕ ಹೇಳುತ್ತಿದ್ದಾರೆ, ಶಿವಮೊಗ್ಗದ ಶಾಸಕರು ಸಚಿವ ಜಮೀರ್ ಅಹಮದ್ ರಾಜೀನಾಮೆ ಕೇಳಿದ್ದಾರೆ. ಇದು ಜೀರೋ ಪರ್ಸೆಂಟ್ ಅಭಿವೃದ್ಧಿ, 60 ಪರ್ಸೆಂಟ್ ಕರಪ್ಶನ್ ಸರ್ಕಾರ, ದಿವಾಳಿಯಾಗಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನಕ್ಕೂ ಕೈ ಹಾಕಿದ್ದಾರೆ ಎಂದರು.ವಿಸಿಟಿಂಗ್ ಮಿನಿಸ್ಟರ್:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಾವು ಇಂಧನ ಸಚಿವರಾಗಿದ್ದಾಗ ಇಲಾಖೆಯಲ್ಲಿ ಏನು ನಡೆದಿದೆ ಎಂದು ಗೊತ್ತಿದೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸುನಿಲ್, ಈ ಬಗ್ಗೆ ಎರಡು ವರ್ಷ ಯಾಕೆ ಬಾಯಿ ಮುಚ್ಚಿ ಕುಳಿತಿರಿ ಎಂದು ಪ್ರಶ್ನಿಸಿದರು.ನಮಗೆ ಅಭಿವೃದ್ಧಿ ಸಚಿವರು ಬೇಕು, ಅಪರೂಪಕೊಮ್ಮೆ ಜಿಲ್ಲೆಗೆ ಬರುವ ವಿಸಿಟಿಂಗ್ ಮಿನಿಸ್ಟರ್ ಬೇಡ ಎಂದು ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದರು.ಎರಡು ವರ್ಷದಲ್ಲಿ ಈ ಸರ್ಕಾರದಿಂದ ಉಡುಪಿಯಲ್ಲಿ ಏನು ಅಭಿವೃದ್ಧಿಯಾಗಿದೆ? ಹೊಸ ರಸ್ತೆ, ಹೊಸ ಅಂಗನವಾಡಿ ನಿರ್ಮಾಣ ಆಗಿದೆಯಾ? ಖಾಲಿ ಹುದ್ದೆಗಳು ಭರ್ತಿಯಾಗಿದೆಯಾ? ಎರಡು ವರ್ಷದಲ್ಲಿ ಏನು ಮಾಡಿದ್ದೀರಿ ಹೇಳಿ ಎಂದ ಸುನಿಲ್, ಅಭಿವೃದ್ಧಿ ಕೆಲಸ ಮಾಡಿದರೆ ಟೀಕಿಸುವುದಿಲ್ಲ, ಬಿಜೆಪಿಯ 5 ಶಾಸಕರು ನಿಮ್ಮನ್ನು ಬೆಂಬಲಿಸುತ್ತೇವೆ ಎಂದರು..............

ಕಾಂಗ್ರೆಸಿಂದ ಮತ್ತೆ ತುರ್ತು ಪರಿಸ್ಥಿತಿ !ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿಗೆ ಈಗ 50 ವರ್ಷಗಳಾಗುತ್ತಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ. ರಾಜ್ಯ ಸರ್ಕಾರ ಹಿಂದೂ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ.

ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಎಫ್ಐಆರ್ ಹಾಕುತ್ತಿದೆ. ಮೊದಲು ಹಿಂದೂ ನಾಯಕರ ಗಡಿಪಾರು, ಬೆದರಿಸುವ ಪ್ರಯತ್ನ ಆಯಿತು, ಈಗ ಹಿಂದೂ ನಾಯಕರು ಭಾಗವಹಿಸುವ ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತಿದೆ. ಸೂಲಿಬೆಲೆಯ ಕುಂದಾಪುರದಲ್ಲಿ ಶ್ರೀಕಾಂತ್ ಶೆಟ್ಟಿಗೆ ಬಾಗಲಕೋಟೆಯಲ್ಲಿ ಅಡ್ಡಿ ಮಾಡಿದರು, ಈಗ ಮೋಹನ್ ದಾಸ್ ಪೈ ಮೇಲೆ ಎಫ್‌ಐಆರ್ ಮಾಡಲು ಹೊರಟಿದೆ ಎಂದು ಸುನಿಲ್ ಕಿಡಿಕಾರಿದರು.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಮಣ್ಣುಮುಕ್ಕಿದ್ರು, ರಾಜ್ಯದಲ್ಲಿ ಇದೇ ರೀತಿ ಮುಂದುವರಿದರೇ ಇಲ್ಲಿ ಕಾಂಗ್ರೆಸ್ ಕೂಡ ಮಣ್ಣುಮುಕ್ಕುತ್ತದೆ ಎಂದವರು ಎಚ್ಚರಿಕೆ ನೀಡಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌