ಕನ್ನಡಪ್ರಭ ವಾರ್ತೆ ಆನಂದಪುರ
ಸ್ಥಳೀಯ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಜಿಲ್ಲಾ ಜಾನಪದ ಪರಿಷತ್, ತಾಲೂಕು ಮತ್ತು ಹೋಬಳಿ ಘಟಕದ ವತಿಯಿಂದ ಜಿಲ್ಲಾ ಜಾನಪದ ಸಮ್ಮೇಳನದ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆನಂದಪುರ ಸಮೀಪದ ಹೊಸೂರು ಗ್ರಾಪಂ ಚನ್ನಶೆಟ್ಟಿ ಕೊಪ್ಪದಲ್ಲಿ ಮಾ.9 ರಂದು ಒಂದು ದಿನ ವೈವಿಧ್ಯಮಯ ಜಾನಪದ ಕಾರ್ಯಕ್ರಮ ಚೆನ್ನಶೆಟ್ಟಿ ಕೊಪ್ಪದ ಚೆನ್ನಮ್ಮಾಜಿ ಯುವಕ ಸಂಘದ ಸಹಯೋಗದೊಂದಿಗೆ ಜಿಲ್ಲಾ ಜಾನಪದ ಸಮ್ಮೇಳನ ನಡೆಸಲಾಗುವುದು ಎಂದರು.ಸಮ್ಮೇಳನ ಯಶಸ್ವಿಯಾಗಲು 8 ಉಪಸಮಿತಿಗಳನ್ನು ರಹಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಪ್ರಾರಂಭಗೊಂಡ ಸಮ್ಮೇಳ ಮಧ್ಯ ರಾತ್ರಿಯವರೆಗೆ ನಡೆಯಲಿದೆ. ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಜಾನಪದ ಕಲಾವಿದರಾದ ಬಿ.ಟಾಕಪ್ಪ, ಗುಡ್ಡಪ್ಪ ಜೋಗಿ, ನಾಗರಾಜ್ ಜೋಗಿ, ವಿ.ಟಿ ಸ್ವಾಮಿ, ಸತ್ಯನಾರಾಯಣ ಸಿರುವಂತೆ, ಬಿ.ಡಿ.ರವಿಕುಮಾರ್, ಡಾ.ವೆಂಕಟೇಶ್ ಜೋಯಿಸ್, ಸ್ವಾಮಿ ರಾವ್ ಗುಡವಿ, ವೆಂಕಟೇಶ್ ಚಂದಳ್ಳಿ, ಗಣಪತಿ ಯಡೇಹಳ್ಳಿ, ಜಯಪ್ಪ ಉಪಸ್ಥಿತರಿದ್ದರು.