ಶೃಂಗೇರಿ: ಹವಾಗುಣ ಬದಲಾವಣೆ ಪರಿಣಾಮಗಳು ಜಗತ್ತಿನಾದ್ಯಂತ ಗೋಚರಿಸುತ್ತಿದ್ದು ಮಲೆನಾಡು ಭಾಗದಲ್ಲಿಯೂ ಅಲ್ಲೋಲ ಕಲ್ಲೋಲ ಸೃಷ್ಠಿಸುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ, ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ. ಈ ನಿಟ್ಟಿನಲ್ಲಿ ಮಾದವ ಗಾಡ್ಗೀಳ್ ವರದಿ ಪುನರ್ ವಿಮರ್ಷೆ ಅಗತ್ಯವಾಗಿದೆ ಎಂದು ಪರಿಸರ ವಿಜ್ಞಾನ ಉಪನ್ಯಾಸಕ ಮನು ಜೋಗಿಬೈಲು ಹೇಳಿದ್ದಾರೆ.
ಇವುಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಇವುಗಳಿಂದ ಮಲೆನಾಡು ಉಳಿಸಿಕೊಳ್ಳಲು ಬದಲಾಗುತ್ತಿರುವ ಹವಾಗುಣಕ್ಕೆ ಹೊಂದಿಕೊಳ್ಳುವುದು ಮತ್ತು ಅದಕ್ಕೆ ಸೂಕ್ತ ಅಭಿವೃದ್ಧಿ ಮಾದರಿ ಅಳವಡಿಸುವುದು ಅಗತ್ಯ.ಇದನ್ನು ಸಾಧಿಸುವಲ್ಲಿ ಗಾಡ್ಗೀಳ್ ವರದಿಯಲ್ಲಿ ಅನೇಕ ಅಂಶಗಳು ಮಾರ್ಗದರ್ಶಕವಾಗಿದೆ. ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ವರದಿಯಲ್ಲಿನ ಕೆಲವು ಗೊಂದಲಗಳನ್ನು ಪರಿಹರಿಸಿದರೆ ಮಲೆನಾಡಿನ ಸಮಸ್ಯೆಗಳಿಗೆ ಗಾಡ್ಗೀಳ್ ವರದಿಯೇ ಸೂಕ್ತ ಪರಿಹಾರ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.