ದೇವನಹಳ್ಳಿ: ತಾಲೂಕಿನ ಕನ್ನಮಂಗಲದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಅಂಗವಾಗಿ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ ಹಸ್ತೋಧಕ ಕಾರ್ಯಕ್ರಮಗಳು ನಡೆಯಿತು. ಡಾ.ಮೀರಾ ವಿಜಯಕುಮಾರ್ ಸಂಗಡಿಗರಿಂದ ಪಂಚವೀಣಾ ಸಂಗೀತ ಕಾರ್ಯಕ್ರಮ ಜರುಗಿತು. ಗುರುವಾರ ಮಠದಲ್ಲಿ ರಾಯರ ಬೃಂದಾವನಕ್ಕೆ ಉತ್ತರಾಧನೆ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ ಎಂದು ಕನ್ನಮಂಗಲ ಮಂಜುನಾಥ್ ತಿಳಿಸಿದರು. ಭಕ್ತರು ಆಗಮಿಸಿ ರಾಯರ ದರ್ಶನ ಮಾಡಿ ತೀರ್ಥ ಪ್ರಸಾದ ಪಡೆದರು.