ಮಧ್ವಾಚಾರ್ಯರು ತತ್ವಜ್ಞಾನದ ಸೂರ್ಯರಿದ್ದಂತೆ: ಪಂ. ಪ್ರಮೋದಾಚಾರ್ಯ ಪೂಜಾರ

KannadaprabhaNewsNetwork |  
Published : Oct 22, 2026, 02:15 AM IST
ಕೊಪ್ಪಳ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಶ್ರೀ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜಿಲಾನಿ ಅವರು ಶ್ರೀ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಕೊಪ್ಪಳ: ಶ್ರೀ ಮಧ್ವಾಚಾರ್ಯರು ತತ್ವಜ್ಞಾನದ ಸೂರ್ಯರಿದ್ದಂತೆ. ತಮ್ಮ ದ್ವೈತ ಸಿದ್ಧಾಂತದ ಮೂಲಕ ಸಕಲ ಜನರಿಗೂ ತತ್ವಜ್ಞಾನದ ಉಪದೇಶ ನೀಡಿ, ಮೋಕ್ಷದ ಮಾರ್ಗ ತೋರಿಸಿದ ಮಹಾನ್ ದಾರ್ಶನಿಕರು ಎಂದು ಪಂ. ಪ್ರಮೋದಾಚಾರ್ಯ ಪೂಜಾರ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಶ್ರೀ ಮಧ್ವಾಚಾರ್ಯರ ಜಯಂತಿಯಲ್ಲಿ ಅವರು ಮಾತನಾಡಿದರು. ಶ್ರೀ ವಾಯುದೇವರ ಅವತಾರವೆಂದು ಪೂಜಿಸಲ್ಪಡುವ ಶ್ರೀಮದಾನಂದತೀರ್ಥ ಭಗವತ್ಪಾದರು ಸಜ್ಜನರ ಉದ್ಧಾರಕ್ಕಾಗಿ ಭೂಮಿಯಲ್ಲಿ ಅವತರಿಸಿ, ದ್ವೈತ ಸಿದ್ಧಾಂತ ಪ್ರತಿಷ್ಠಾಪಿಸಿದರು. ಸರ್ವಮೂಲ ಗ್ರಂಥಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಮಹದುಪಕಾರ ಮಾಡಿದ್ದಾರೆ ಎಂದರು.

ಸರಳವಾಗಿ ಜಯಂತಿ ಆಚರಣೆ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜಿಲಾನಿ ಅವರು ಶ್ರೀ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಹಾನ್ ದಾರ್ಶನಿಕರ ಜಯಂತಿಯನ್ನು ಆಚರಿಸುವುದು ಹೆಮ್ಮೆಯ ಸಂಗತಿ ಎಂದರು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಗುರುರಾಜ ಜೋಷಿ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ಅನಂತಾಚಾರ್ಯ ಹುಲಗಿ, ವ್ಯವಸ್ಥಾಪಕ ಜಗನ್ನಾಥಾಚಾರ್ಯ ಹುನಗುಂದ, ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷ ಡಿ.ವಿ. ಜೋಷಿ, ರವಿ ಪುರೋಹಿತ, ಶ್ರೀನಿವಾಸ ಜೋಷಿ, ವೇಣುಗೋಪಾಲ ಜಾಗೀರದಾರ್, ಹನುಮಂತರಾವ್ ದೇಶಪಾಂಡೆ, ನಾಗರಾಜ ಬಳ್ಳಾರಿ, ಸುಶೀಲೇಂದ್ರ ದೇಸಾಯಿ, ಪ್ರಹ್ಲಾದ ಬನ್ನಿಗೋಳ, ಶೇಷಗಿರಿ ಗುಬ್ಬಿ, ಮಂಜುನಾಥ ಹಳ್ಳಿಕೇರಿ, ಸುರೇಶ ಕುಲಕರ್ಣಿ, ಸುನೀಲ್ ದೇಸಾಯಿ, ಸುರೇಶ ಮುಧೋಳ, ಅಶ್ವತ್ಥನಾರಾಯಣ ದೇಶಪಾಂಡೆ, ಗೋಪಾಲರಾವ್ ಗುಡಿ, ಸಮೀರ್ ಬಂಡಿಹಾಳ, ವಿಜಯ ಕಿನ್ನಾಳ, ಪವನ್ ಕೋನಾಪುರ, ವೆಂಕಟೇಶ ಕುಲಕರ್ಣಿ, ಗುರುರಾಜ ಕುಲಕರ್ಣಿ, ಮೈಲಾರರಾವ್ ಕುಲಕರ್ಣಿ, ಕೃಷ್ಣ ಸೊರಟೂರ, ಸಮಾಜದ ಹಿರಿಯರಾದ ಸತ್ಯನಾರಾಯಣರಾವ್ ಹುಲಿಹೈದರ್, ವಾಜೇಂದ್ರಾಚಾರ್ಯ ಕುರಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಕುಟಿಕ ಜಾತಿಯ ವಕ್ರಕಂಠ ಹಕ್ಕಿ ಕೂಡ್ಲಿಗಿಗೆ ತಾತ್ಕಾಲಿಕ ವಲಸೆ
ಕುಷ್ಟಗಿ ರೈಲ್ವೆ ಮೇಲ್ಸೇತುವೆ ಶೀಘ್ರ ಲೋಕಾರ್ಪಣೆ