ಮಧ್ವಾಚಾರ್ಯರದ್ದು ಭಕ್ತಿ ಮಾರ್ಗದ ಪ್ರಚಾರದಲ್ಲಿ ಮಹತ್ವದ ಪಾತ್ರ

KannadaprabhaNewsNetwork |  
Published : Oct 31, 2026, 01:45 AM IST
28ಕೆಆರ್ ಎಂಎನ್ 6.ಜೆಪಿಜಿರಾಮನಗರದ ಕಂದಾಯ ಭವನದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ರಾಮನಗರ: ವೇದಾಂತ ದರ್ಶನದಲ್ಲಿ ಮಧ್ವಾಚಾರ್ಯರು ದ್ವೈತ ಸಿದ್ಧಾಂತದ ಪ್ರಮುಖ ಪ್ರತಿಪಾದಕರಾಗಿದ್ದು, ಭಕ್ತಿ ಮಾರ್ಗದ ಪ್ರಚಾರದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಭರತನಾಟ್ಯ ಕಲಾವಿದ ಸುಜೇಂದ್ರ ಬಾಬು ಅಭಿಪ್ರಾಯಪಟ್ಟರು

ರಾಮನಗರ: ವೇದಾಂತ ದರ್ಶನದಲ್ಲಿ ಮಧ್ವಾಚಾರ್ಯರು ದ್ವೈತ ಸಿದ್ಧಾಂತದ ಪ್ರಮುಖ ಪ್ರತಿಪಾದಕರಾಗಿದ್ದು, ಭಕ್ತಿ ಮಾರ್ಗದ ಪ್ರಚಾರದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಭರತನಾಟ್ಯ ಕಲಾವಿದ ಸುಜೇಂದ್ರ ಬಾಬು ಅಭಿಪ್ರಾಯಪಟ್ಟರು.

ನಗರದ ಕಂದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಧ್ವಾಚಾರ್ಯರು ದಕ್ಷಿಣ ಭಾರತ ಪ್ರವಾಸ ಕೈಗೊಂಡು ಅನಂತಶಯನ ಶ್ರೀರಂಗಂ ಮೊದಲಾದ ಸ್ಥಳಗಳಲ್ಲಿ ತಮ್ಮ ದ್ವೈತ ತತ್ವವಾದವನ್ನು ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಸಂಪ್ರದಾಯವಾದಿಗಳಿಂದ ಪ್ರಬಲ ವಿರೋಧ ವ್ಯಕ್ತವಾದರೂ ಅದಕ್ಕೆ ಜಗ್ಗದೆ ತಮ್ಮ ತತ್ವಗಳನ್ನು ಸಮರ್ಥಿಸಿಕೊಂಡು ಉಡುಪಿಗೆ ಮರಳಿದರು. ಅಲ್ಲಿ ಭಗವದ್ಗೀತೆಗೆ ಭಾಷ್ಯ ರಚಿಸಿ, ದ್ವೈತ ಸಿದ್ಧಾಂತದ ಆಧಾರದ ಮೇಲೆ 37 ಗ್ರಂಥಗಳನ್ನು ಬರೆದರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ.ಸತೀಶ್ ಮಾತನಾಡಿ, ಮಧ್ವಾಚಾರ್ಯರು ವಾಯುದೇವರ 3ನೇ ಅವತಾರವೆಂದು ಪರಂಪರೆಯಲ್ಲಿ ನಂಬಲಾಗಿದ್ದು ಹನುಮಂತ ಹಾಗೂ ಭೀಮರ ನಂತರ ಮಧ್ವಾಚಾರ್ಯರು ಅವತರಿಸಿದರು ಎಂಬ ನಂಬಿಕೆಯಿದೆ. ಈ ಕುರಿತು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿಯೂ ಉಲ್ಲೇಖವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳಾದ ಡಾ. ಕೆ ಕುಮಾರ್, ಜಿಲ್ಲಾ ಗ್ರಂಥಾಲಯಾಧಿಕಾರಿ ಚನ್ನಕೇಶವ, ಕೃಷಿ ಇಲಾಖೆಯ ಅಧಿಕಾರಿಗಳಾದ ಕೇಶವಮೂರ್ತಿ, ಶ್ರೀನಿವಾಸ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

28ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ಕಂದಾಯ ಭವನದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ