ಭಕ್ತಿ, ಜ್ಞಾನ, ಧರ್ಮವನ್ನು ಸಾರಿದವರು ಮಧ್ವಾಚಾರ್ಯರು: ಶಾಸಕ ಮೇಟಿ

KannadaprabhaNewsNetwork |  
Published : Oct 23, 2026, 02:30 AM IST
(ಫೋಟೊಬಿಕೆಟಿ2, ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಧ್ವಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಶಾಸಕ ಉಮೇಶ ಮೆಟಿ ಉದ್ಘಾಟಿಸಿದರು) | Kannada Prabha

ಸಾರಾಂಶ

-ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಧ್ವಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಶಾಸಕ ಉಮೇಶ ಮೇಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಕ್ತಿ, ಜ್ಞಾನ ಮತ್ತು ಧರ್ಮದ ಮಹತ್ವ ಸಾರಿದ ಮಧ್ವಾಚಾರ್ಯರು ಕೇವಲ ತತ್ವಜ್ಞಾನಿಗಳಾಗಿರದೆ, ಸಮಾಜದಲ್ಲಿ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿದ ಮಹಾನ್ ಚಿಂತಕರಾಗಿದ್ದರು ಎಂದು ಶಾಸಕ ಉಮೇಶ ಮೇಟಿ ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಧ್ವಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಧ್ವಾಚಾರ್ಯರ ತತ್ವ, ಚಿಂತನೆಗಳು ಇಂದಿಗೂ ಕೋಟ್ಯಂತರ ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಅವರ ಜೀವನ ಮತ್ತು ಬೋಧನೆಗಳು ಸಮಾಜಕ್ಕೆ ಸನ್ಮಾರ್ಗ, ಧಾರ್ಮಿಕ ನಿಷ್ಠೆ ಹಾಗೂ ನೈತಿಕ ಮೌಲ್ಯಗಳ ಮಹತ್ವ ತಿಳಿಸುತ್ತವೆ. ಇಂತಹ ಮಹಾನ್ ಆಚಾರ್ಯರ ಆದರ್ಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಮಾತನಾಡಿ, ತ್ರೈತಾಯುಗದಲ್ಲಿ ಆಂಜನೇಯ ಅವತಾರವಾಗಿ, ದ್ವಾಪರ ಯುಗದಲ್ಲಿ ಭೀಮಸೇನ ಅವತಾರವಾಗಿ ಹಾಗೂ ಕಲಿಯುಗದಲ್ಲಿ ಮಧ್ವಾಚಾರ್ಯರ ರೂಪದಲ್ಲಿ ಭಗವಂತನ ಸ್ವರೂಪವಾಗಿ ಮಧ್ವಾಚಾರ್ಯರು ನಮ್ಮ ಕಣ್ಮುಂದೆ ಕಾಣಿಸಿಕೊಂಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಮಧ್ವಾಚಾರ್ಯರು ಅಚಲವಾದ ಭಕ್ತಿ ಹೊಂದಿದ್ದರು. ಅವರ ಸರಳತೆ, ನಿಷ್ಠೆ ಮತ್ತು ಜೀವನದ ಆದರ್ಶಗಳು ಪ್ರತಿಯೊಬ್ಬರಿಗೂ ಮಹತ್ವದ ಪಾಠ ಕಲಿಸುತ್ತವೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು. ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಮಾತನಾಡಿ, ಮಧ್ವಾಚಾರ್ಯರು ಗುರುಕೃಪೆ ಮತ್ತು ಗುರುಕರುಣೆಯ ಮಹತ್ವವನ್ನು ಸಾರಿದವರು. ಮಧ್ವಾಚಾರ್ಯರ ಕುರಿತು ತಿಳಿದುಕೊಳ್ಳುವುದರಿಂದ ಜೀವನ ಪಾವನವಾಗುತ್ತದೆ. ಗುರುಕರುಣೆಯೇ ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿದರು. ವಿಶೇಷ ಉಪನ್ಯಾಸಕರಾಗಿ ಅಗಮಿಸಿದ್ದ ಬಿಂದುಮಾದರವಾಚಾರ್ಯ ನಾಗಸಂಪಿಗೆ ಹಾಗೂ ಭೀಮಸೇನಾಚಾರ್ಯ ಪಾಂಡುರಂಗ ಅವರು ಮಧ್ವಾಚಾರ್ಯರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬುಡಾ ಅಧ್ಯಕ್ಷ ಅಬ್ದುಲ್‌ರಜಾಕ್‌ ಬೇನೂರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಸೇರಿದಂತೆ ಸಮುದಾಯದ ಮುಖಂಡರಾದ ರಾಜಶೇಖರ ದೇಶಪಾಂಡೆ, ನಾರಾಯಣ ದೇಸಾಯಿ, ಗಿರೀಶ ಮಾಸೂರಕರ, ಹರಿ ಪಾಟೀಲ, ಕೆ.ಬಿ. ದೇಸಾಯಿ, ವಿನಾಯಕ ಬೋಕರೆ, ದಯಾನಂದ ಕುಲಕರ್ಣಿ ಹಾಗೂ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧರ್ಮದ ನಾಶ ಧರ್ಮದ ವಿಜಯವೇ ವಿಜಯದಶಮಿ: ರಂಭಾಪುರಿ ಜಗದ್ಗುರು
ಇಳಕಲ್ಲದಲ್ಲಿ ಆರೆಸ್ಸೆಸ್‌ ಆಕರ್ಷಕ ಪಥಸಂಚಲನ