ಆಧ್ಯಾತ್ಮಿಕ ಪ್ರಪಂಚಕ್ಕೆ ಮಧ್ವಾಚಾರ್ಯರ ಕೊಡುಗೆ ಅನನ್ಯ: ನಾಗಸಂಪಿಗೆ

KannadaprabhaNewsNetwork |  
Published : Feb 20, 2024, 01:48 AM IST
ರಾಘವೇಂದ್ರ ಸ್ವಾಮಿ ಮಠ | Kannada Prabha

ಸಾರಾಂಶ

ಬಾಗಲಕೋಟೆ: ಅಧ್ಯಾತ್ಮ ಪ್ರಪಂಚಕ್ಕೆ ಮಧ್ವಾಚಾರ್ಯರು ನೀಡಿದ ಕೊಡುಗೆ ಅದ್ವಿತೀಯವಾಗಿದೆ ಎಂದು ಪಂಡಿತ್ ಬಿಂದುಮಾಧವಾಚಾರ್ಯ ನಾಗಸಂಪಿಗೆ ಹೇಳಿದರು. ನಗರದ ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವ ನವಮಿ ನಿಮಿತ್ತ ಹಮ್ಮಿಕೊಂಡಿದ್ದ ಜಗತ್ತಿಗೆ ಮಧ್ವರ ಸಂದೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಧ್ಯಾತ್ಮ ಪ್ರಪಂಚಕ್ಕೆ ಮಧ್ವಾಚಾರ್ಯರು ನೀಡಿದ ಕೊಡುಗೆ ಅದ್ವಿತೀಯವಾಗಿದೆ ಎಂದು ಪಂಡಿತ್ ಬಿಂದುಮಾಧವಾಚಾರ್ಯ ನಾಗಸಂಪಿಗೆ ಹೇಳಿದರು.

ನಗರದ ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವ ನವಮಿ ನಿಮಿತ್ತ ಹಮ್ಮಿಕೊಂಡಿದ್ದ ಜಗತ್ತಿಗೆ ಮಧ್ವರ ಸಂದೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನಾದಿ ಕಾಲದ ವೇದ, ಉಪನಿಷತ್ ಗಳ ಸಾರವನ್ನು ತಮ್ಮ ಸರ್ವಮೂಲ ಗ್ರಂಥಗಳ ಜಗತ್ತಿಗೆ ಸರಳವಾಗಿ ತಿಳಿಸಿದ ಮಹಾನ್ ಚೇತನ ಮಧ್ವಾಚಾರ್ಯರು. ಬದುಕಿನ ಎಲ್ಲ ಸಮಸ್ಯೆಗಳಿಗೂ ಅವರ ಗ್ರಂಥದಲ್ಲಿ ಸೂಕ್ತ ಪರಿಹಾರಗಳಿವೆ. ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ ಎಂದರು.

ಮಧ್ವ ನವಮಿ ನಿಮಿತ್ತ ಬೆಳಗ್ಗೆ ರಾಯರ ವೃಂದಾವನಕ್ಕೆ ವಿಶೇಷ ಫಲ ಪಂಚಾಮೃತ ಅಭಿಷೇಕ, ಅಲಂಕಾರ ನೆರವೇರಿಸಲಾಯಿತು.

ವಿಪ್ರ ಅಭಿವೃದ್ಧಿ ಸಂಘದ ಸದಸ್ಯರಿಂದ ವಿಷ್ಣು ಸಹಸ್ರನಾಮ, ವಾಯುಸ್ತುತಿ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ ನಡೆಯಿತು. ನಂತರ ನಡೆದ ರಥೋತ್ಸವದಲ್ಲಿ ನೂರಾರು ಜನ ಭಾಗವಹಿಸಿದ್ದರು. ನೈವೇದ್ಯ, ಹಸ್ತೋದಕದ ನಂತರ ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಯಿತು. ಸಂಜೆ ಭಜನೆ, ಮಹಾಮಂಗಳಾರತಿ ನಡೆದವು.

ಅರವಿಂದಾಚಾರ್ ಕಟ್ಟಿ, ಕೆ.ಬಿ. ದೇಶಪಾಂಡೆ, ಎನ್.ಬಿ. ಆಲೂರ, ಹೃಷಿಕೇಶ್ ಗುಡಿ, ಕೆ.ಎಚ್. ಕುಲಕರ್ಣಿ, ವಿಲಾಸ್ ಪಾಟೀಲ, ಅಪ್ಪಣ್ಣ ಪುರೋಹಿತ, ಪವನ್ ಮಂಕಣಿ, ಬಿ.ಆರ್. ಗುಮಾಸ್ತೆ, ವಿನಾಯಕ ಭೋಕರೆ, ಶ್ರೀನಿವಾಸ ಕಟ್ಟಿ, ರೋಹಿತ ದೇಸಾಯಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!