ಕನ್ನಡಪ್ರಭ ವಾರ್ತೆ ಬೆಳಗಾವಿ
ಕಳೆದ 3 ದಶಕಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತ ಬಂದಿದ್ದ ಮಾದಿಗ ಸಮುದಾಯಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರವು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಸಮುದಾಯದ ಪರವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ಎಐಸಿಸಿ ವೀಕ್ಷಕರು ಹಾಗೂ ಕೆಪಿಸಿಸಿ ಸಂಯೋಜಕಿ ಸುನಿತಾ ಸೋಮಲಿಂಗ ಐಹೊಳೆ ಹೇಳಿದರು.ನಗರದಲ್ಲ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಎಡಗೈ ಸಮುದಾಯಗಳ ಜನಸಂಖ್ಯೆ ೩೪.೧೦ ಲಕ್ಷ, ಬಲಗೈ ಸಮುದಾಯಗಳ ಜನಸಂಖ್ಯೆ ೩೭.೩೦ ಲಕ್ಷ ಜನಸಂಖ್ಯೆ ಇದೆ. ರಾಜ್ಯದಲ್ಲಿ ಶೇ.೧೭ರಷ್ಟಿರುವ ಎಸ್ಸಿ ಮೀಸಲಾತಿಯನ್ನು 5 ವರ್ಗೀಕರಣ ಮಾಡಿ ಆ.೪ ರಂದು ಆಯೋಗ ಶಿಫಾರಸ್ ಮಾಡಿದ್ದನ್ನು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 5 ವರ್ಗೀಕರಣವನ್ನು 3 ವರ್ಗಗಳಿಗೆ ಸೀಮಿತಗೊಳಿಸಲು ಸಂಪುಟದಲ್ಲಿ ತೀರ್ಮಾನ ಮಾಡಿರುವುದು ಸ್ವಾಗತಾರ್ಹ ಎಂದರು.
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ವರದಿಯಲ್ಲಿ ಶೇ.೬ ಬಲಗೈ ಸಮುದಾಯಗಳ ೨೦ ಜಾತಿಗಳು, ಶೇ.೬ ಎಡಗೈ ಸಮುದಾಯಗಳ ೧8 ಜಾತಿಗಳು, ಶೇ.೫ ಇತರೆ ಸಮುದಾಯಗಳ ೬೩ ಜಾತಿಗಳಿಗೆ ಮೀಸಲಾತಿ ಪ್ರಮಾಣವನ್ನು ಭಾಗಶಃ ಪರಿಷ್ಕೃತಗೊಂಡು ವರ್ಗೀಕರಿಸಲು ನಿರ್ಧರಿಸಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸಚಿವ ಸಂಪುಟ ಸೇರಿದಂತೆ ಸಮುದಾಯದ ಶಾಸಕರಿಗೆ, ರಾಜಕೀಯ ಮುಖಂಡರಿಗೆ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಎಡಗೈ ಸಮುದಾಯಗಳ ಜನಸಂಖ್ಯೆ ೩೪.೧೦ ಲಕ್ಷ, ಬಲಗೈ ಸಮುದಾಯಗಳ ಜನಸಂಖ್ಯೆ ೩೭.೩೦ ಲಕ್ಷ ಜನಸಂಖ್ಯೆ ಇದೆ. ರಾಜ್ಯದಲ್ಲಿ ಶೇ.೧೭ರಷ್ಟಿರುವ ಎಸ್ಸಿ ಮೀಸಲಾತಿಯನ್ನು 5 ವರ್ಗೀಕರಣ ಮಾಡಿ ಆ.೪ ರಂದು ಆಯೋಗ ಶಿಫಾರಸ್ ಮಾಡಿದ್ದನ್ನು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 5 ವರ್ಗೀಕರಣವನ್ನು 3 ವರ್ಗಗಳಿಗೆ ಸೀಮಿತಗೊಳಿಸಲು ಸಂಪುಟದಲ್ಲಿ ತೀರ್ಮಾನ ಮಾಡಿರುವುದು ಸ್ವಾಗತಾರ್ಹ.
-ಸುನಿತಾ ಸೋಮಲಿಂಗ ಐಹೊಳೆ, ಕಾಂಗ್ರೆಸ್ ನಾಯಕಿ.