ಶೋಭಯಾತ್ರೆ ಆರಂಭವಾದ ಬಳಿಕ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯ ಮಂಟಪವು ದೇಗುಲದಿಂದ ಮೆರವಣಿಗೆಯಲ್ಲಿ ಹೊರಟಿತ್ತು. ಆದರೆ ಡಿಸಿಸಿ ಬ್ಯಾಂಕ್ ಸಮೀಪ ಇಳಿಜಾರಿನ ರಸ್ತೆಯಲ್ಲಿ ಮಂಟಪ ಇರಿಸಲಾಗಿದ್ದ ಟ್ರಾಕ್ಟರ್ ಬುಧವಾರ ನಸುಕಿನ ಜಾವ 3.30ರ ವೇಳೆ ಮಗುಚಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ದಸರಾ ದಶಮಂಟಪಗಳ ಶೋಭಯಾತ್ರೆ ವೇಳೆ ಮಂಟಪವೊಂದರ ಟ್ರಾಕ್ಟರ್ ಮಗುಚಿ ಬಿದ್ದಿದ್ದು, ಮೂವರು ಗಾಯಗೊಂಡು ಭಾರಿ ಆತಂಕ ಸೃಷ್ಟಿಸಿತು. ಮಂಗಳವಾರ ರಾತ್ರಿ ಶೋಭಯಾತ್ರೆ ಆರಂಭವಾದ ಬಳಿಕ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯ ಮಂಟಪವು ದೇಗುಲದಿಂದ ಮೆರವಣಿಗೆಯಲ್ಲಿ ಹೊರಟಿತ್ತು. ಆದರೆ ಡಿಸಿಸಿ ಬ್ಯಾಂಕ್ ಸಮೀಪ ಇಳಿಜಾರಿನ ರಸ್ತೆಯಲ್ಲಿ ಮಂಟಪ ಇರಿಸಲಾಗಿದ್ದ ಟ್ರಾಕ್ಟರ್ ಬುಧವಾರ ನಸುಕಿನ ಜಾವ 3.30ರ ವೇಳೆ ಮಗುಚಿತು. ಇದರಿಂದ ಮೂವರಿಗೆ ಗಾಯಗಳಾಗಿವೆ. ಘಟನೆಯಿಂದ ಸ್ಥಳದಲ್ಲಿ ಅಪಾರ ನೂಕುನುಗ್ಗಲು ಉಂಟಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಪರದಾಡಿದರು. ಮುಂಜಾನೆ 6 ಗಂಟೆ ವೇಳೆಗೆ ಎರಡು ಕ್ರೇನ್ ಗಳ ಸಹಾಯದಿಂದ ಟ್ರ್ಯಾಕ್ಟರ್ ಅನ್ನು ಮೇಲೆತ್ತಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ದೇಗುಲ ಸಮಿತಿಯ ಸದಸ್ಯರೊಬ್ಬರು, ದೇಗುಲದ ಸಮೀಪ ಹಾಗೂ ಮೆರವಣಿಗೆಯಲ್ಲಿ ಒಟ್ಟು ಎರಡು ಪ್ರದರ್ಶನ ನೀಡಿದ್ದೆವು. ನಸುಕಿನ ಜಾವ 4 ಗಂಟೆಗೆ ತೀರ್ಪುಗಾರರ ಮುಂದೆ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಆ ಸ್ಥಳ ತಲುಪುವ ಮುನ್ನ ಟ್ರಾಕ್ಟರ್ ಮಗುಚಿತ್ತು ಎಂದರು.