ಗೋಣಿಕೊಪ್ಪ ದಶಮಂಟಪ ಶೋಭಾಯಾತ್ರೆ: ಸ್ನೇಹಿತರ ಬಳಗ ಪ್ರಥಮ

KannadaprabhaNewsNetwork |  
Published : Oct 23, 2026, 02:15 AM IST
ಚಿತ್ರ :  22ಎಂಡಿಕೆ2 :   ಸ್ನೇಹಿತರ ಬಳಗ ಕೊಪ್ಪ ಮಂಟಪ.  | Kannada Prabha

ಸಾರಾಂಶ

ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ವತಿಯಿಂದ ನಡೆದ ದಶಮಂಟಪ ಶೋಭಾಯಾತ್ರೆ ಈ ಬಾರಿ ಮಂಟಪಗಳ ಆಕರ್ಷಕ ಪ್ರದರ್ಶನದೊಂದಿಗೆ ಜರುಗಿತು. ಬುಧವಾರ ರಾತ್ರಿ ನಡೆದ ಶೋಭಾಯಾತ್ರೆಯಲ್ಲಿ ವಿವಿಧ ದಶಮಂಟಪಗಳು ತಮ್ಮ ಕಲಾ ವೈಭವವನ್ನು ಪ್ರದರ್ಶಿಸಿದವು. ಸಾವಿರಾರು ಸಂಖ್ಯೆಯಲ್ಲಿ ವಿವಿಧ ಗ್ರಾಮ ಹಾಗೂ ಜಿಲ್ಲೆಯಿಂದ ಆಗಮಿಸಿದ ಜನರು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಸ್ಪರ್ಧೆಯಲ್ಲಿ ಸ್ನೇಹಿತರ ಬಳಗ ಕೊಪ್ಪ 50,000 ರು. ನಗದು ಹಾಗೂ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ಪಡೆಯಿತು. ಶ್ರೀ ಶಾರದಾಂಬ ದಸರಾ ಸಮಿತಿ 30,000 ನಗದು ಹಾಗೂ ಟ್ರೋಫಿಯೊಂದಿಗೆ ದ್ವಿತೀಯ ಬಹುಮಾನ ಪಡೆಯಿತು.

ಮಡಿಕೇರಿ: ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ವತಿಯಿಂದ ನಡೆದ ದಶಮಂಟಪ ಶೋಭಾಯಾತ್ರೆ ಈ ಬಾರಿ ಮಂಟಪಗಳ ಆಕರ್ಷಕ ಪ್ರದರ್ಶನದೊಂದಿಗೆ ಜರುಗಿತು. ಬುಧವಾರ ರಾತ್ರಿ ನಡೆದ ಶೋಭಾಯಾತ್ರೆಯಲ್ಲಿ ವಿವಿಧ ದಶಮಂಟಪಗಳು ತಮ್ಮ ಕಲಾ ವೈಭವವನ್ನು ಪ್ರದರ್ಶಿಸಿದವು. ಸಾವಿರಾರು ಸಂಖ್ಯೆಯಲ್ಲಿ ವಿವಿಧ ಗ್ರಾಮ ಹಾಗೂ ಜಿಲ್ಲೆಯಿಂದ ಆಗಮಿಸಿದ ಜನರು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಸ್ಪರ್ಧೆಯಲ್ಲಿ ಸ್ನೇಹಿತರ ಬಳಗ ಕೊಪ್ಪ 50,000 ರು. ನಗದು ಹಾಗೂ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ಪಡೆಯಿತು. ಶ್ರೀ ಶಾರದಾಂಬ ದಸರಾ ಸಮಿತಿ 30,000 ನಗದು ಹಾಗೂ ಟ್ರೋಫಿಯೊಂದಿಗೆ ದ್ವಿತೀಯ ಬಹುಮಾನ ಪಡೆಯಿತು.

ಯುವ ದಸರಾ ಸಮಿತಿ 20,000 ರು. ನಗದು ಹಾಗೂ ಪಾರಿತೋಷಕದೊಂದಿಗೆ ತೃತೀಯ ಬಹುಮಾನ ಪಡೆಯಿತು.

ಗುರುವಾರ ಬೆಳಗ್ಗೆ ವಿಜೇತರಿಗೆ ಬಹುಮಾನವನ್ನು ಆಯೋಜಕರು ವಿತರಿಸಿದರು.

ಡಿಜೆ ಬಳಕೆ ತಡೆ: ಪೊಲೀಸ್ ಇಲಾಖೆಯ ಬಂದೋಬಸ್ತ್, ದಸರಾ ಸಮಿತಿಯ ಸಹಕಾರದಲ್ಲಿ ಎಲ್ಲಾ ದಶಮಂಟಪ ಸಮಿತಿಗಳ ಪ್ರಯತ್ನದಿಂದ ಈ ಬಾರಿಯ ದಸರಾ ಉತ್ಸವ ಯಶಸ್ವಿಯಾಗಿ ಜರುಗಿತು. ರಾತ್ರಿ 11 ರ ನಂತರ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ತಡೆಹಿಡಿಲಾಗಿತ್ತು. ಕೊಡಗಿನ ಸಾಂಪ್ರದಾಯಿಕ ವಾಲಗ ಹಾಗೂ ಚಂಡೆ ನಾದಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಬೆಳ್ಳಿಗೆ 7 ರ ವರೆಗೆ ವಿವಿಧ ಸಮಿತಿಗಳಿಂದ ಕಲಾಕೃತಿಗಳ ಪ್ರದರ್ಶನ ಕೂಡ ನಡೆಯಿತು.

ಪ್ರತಿ ಬಾರಿಯೂ ಕೂಡ ಸ್ನೇಹಿತರ ಬಳಗ ಕೊಪ್ಪ ವಿಭಿನ್ನ ರೀತಿಯ ಕಥ ವಸ್ತುವನ್ನು ವಿಶೇಷ ರೀತಿಯಲ್ಲಿ ಪ್ರದರ್ಶಿಸುತ್ತ ಶೋಭ ಯಾತ್ರೆಗೆ ಮೆರಗನ್ನು ನೀಡುತ್ತ ಬರುತ್ತಿದೆ. ಸಮಿತಿಯ ಎಲ್ಲಾ ಸದಸ್ಯರ ಪ್ರಯತ್ನದಿಂದ ಈ ಬಾರಿ ಮತ್ತೊಮ್ಮೆ ಪ್ರಥಮ ಬಹುಮಾನ ಗಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ
ಇಂದು ‘ಬನ’ ತುಳು ಚಿತ್ರ ಕರಾವಳಿಯಲ್ಲಿ ಬಿಡುಗಡೆ