
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರಸಭೆಯ ಅಧ್ಯಕ್ಷೆ ಕಲಾವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಜೆಟ್ ಅನ್ನು ಮಂಡನೆ ಮಾಡಲಾಯಿತು.
ಆರಂಭಿಕ ಶಿಲ್ಕು 13,30,64,164 ರೂ. ಆಗಿದ್ದು, ಅನುದಾನ ಸೇರಿದಂತೆ ಒಟ್ಟು 38,56,70,500 ರು. ಗಳ ಆದಾಯ ಮೂಲವನ್ನು ನಿರೀಕ್ಷಿಸಲಾಗಿದೆ. 50,16,70,500 ರು. ಖರ್ಚು ಅಂದಾಜಿಸಲಾಗಿದ್ದು, 1,70,64,164 ರು. ಉಳಿತಾಯವನ್ನು ಅಂದಾಜಿಸಲಾಗಿದೆ.ಆದಾಯದ ಪೈಕಿ ಎಸ್‌ಎಫ್‌ಸಿ ವೇತನ ಅನುದಾನ 5 ಕೋಟಿ ರು., ಎಸ್‌ಎಫ್‌ಸಿ ವಿದ್ಯುತ್ ಅನುದಾನ 4.22 ಕೋಟಿ ರು., 15 ಮತ್ತು 16ನೇ ಹಣಕಾಸು ಯೋಜನೆ ಅನುದಾನ 3.32 ಕೊಟಿ ರು.,, ವಾಣಿಜ್ಯ ಮಳಿಗೆ ಬಾಡಿಗೆ ಮತ್ತು ದಂಡ 1.18 ಕೋಟಿ ರು., ನೀರಿನ ತೆರಿಗೆ ಶುಲ್ಕಗಳು, ನೀರು ಸರಬರಾಜು ಸಂಪರ್ಕ ಶುಲ್ಕಗಳು ಮತ್ತು ದಂಡ 1.26 ಕೋಟಿ ರು., ಗುತ್ತಿಗೆದಾರರು, ಸರಬರಾಜುದಾರರಿಂದ ಠೇವಣಿಗಳು, ಬಾಡಿಗೆ ಠೇವಣಿಗಳಿಂದ 1.03 ಕೋಟಿ ರು. ಗುತ್ತಿಗೆದಾರರು, ನೌಕರರಿಂದ ಕಡಿತವಾದ ತೆರಿಗೆ ಮತ್ತು ವಸೂಲಾತಿಯಿಂದ 1.27 ಕೋಟಿ ರು., ಹಾಗೂ ಆಸ್ತಿ ತೆರಿಗೆ, ಕಟ್ಟಡ ಪರವಾನಗಿಯಲ್ಲಿ ಸಂಗ್ರಹಿಸಿದ ಉಪಕರಣಗಳು 1.42 ಕೋಟಿ ರು., ಸೇರಿದಂತೆ ನಗರಸಭೆಯ ವಿವಿಧ ಮೂಲಗಳಿಂದ ಒಟ್ಟು 31.685 ಕೋಟಿ ರು. ಆದಾಯ ನಿರೀಕ್ಷೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ರಮೇಶ್ ಇದ್ದರು.