ಕಳೆಗುಂದುತ್ತಿರುವ ಮಡಿಕೇರಿ ಜನೋತ್ಸವ ದಸರಾ: ಕೆ.ಎಂ.‌ಗಣೇಶ್

KannadaprabhaNewsNetwork |  
Published : Oct 24, 2026, 02:45 AM IST
ಮಲ್ಲನಗೌಡ ಹಗರಟಗಿ. | Kannada Prabha

ಸಾರಾಂಶ

ಮಡಿಕೇರಿ ಜನೋತ್ಸವಕ್ಕೆ ತನ್ನದೇ ಆದ ಸಂಪ್ರದಾಯ, ವೈಶಿಷ್ಟ್ಯತೆ ಇದ್ದು, ವರ್ಷಕಳೆದಂತೆ ಕಳೆಗುಂದುತ್ತಿದೆ ಎಂದು ನಗರ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ.ಬಿ.ಗಣೇಶ್ ದೂರಿದರು.

ಮಡಿಕೇರಿ : ಮಡಿಕೇರಿ ಜನೋತ್ಸವಕ್ಕೆ ತನ್ನದೇ ಆದ ಸಂಪ್ರದಾಯ, ವೈಶಿಷ್ಟ್ಯತೆ ಇದ್ದು, ವರ್ಷಕಳೆದಂತೆ ಕಳೆಗುಂದುತ್ತಿದೆ ಎಂದು ನಗರ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ.ಬಿ.ಗಣೇಶ್ ದೂರಿದರು.ದಸರಾ ಹಬ್ಬ ಎಂದರೆ ಎಲ್ಲರಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಆದರೆ, ಈ ಬಾರಿ ದಸರಾ ಹಬ್ಬದ ವಾತಾವರಣವೇ ಇರಲಿಲ್ಲ. ದಸರಾ ಆರಂಭಕ್ಕೂ ಮೊದಲು ಉಪ ಸಮಿತಿಗಳೊಂದಿಗೆ ಬಜೆಟ್ ಮಾಡಿ ಯಾವ ಯಾವ ಸಮಿತಿಗೆ ಎಷ್ಟೆಷ್ಟು ಹಣ ಎಂಬ ಮಾಹಿತಿಯನ್ನು ನಿರ್ಧರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತಿತ್ತು. ಆದರೆ, ಕೆಲವು ವರ್ಷಗಳಿಂದ ಆಗುತ್ತಿಲ್ಲ. ಪರಿಣಾಮ ದಸರಾ ಕಳೆಗುಂದಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೊದಲೆಲ್ಲಾ ೨೦-೩೦ ಸಾವಿರದಲ್ಲಿ ದಸರಾ ಮಾಡಲಾಗುತ್ತಿತ್ತು. ಆ ನಂತರ ೨೦೦೩-೦೪ರಲ್ಲಿ ಎಂ.ಎಂ.ನಾಣಯ್ಯ ಅವರು ಉಸ್ತುವಾರಿ ಸಚಿವರಾಗಿದ್ದಾಗ ಮೊದಲ ಬಾರಿಗೆ ೩ ಲಕ್ಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು. ಆನಂತರ ತನ್ವೀರ್ ಶೇಟ್ ೧೦ ಲಕ್ಷ, ಡಾ.ಮಹದೇವಪ್ಪ ೭೫ ಲಕ್ಷ ಹೀಗೆ ಇಂದು ೨ ಕೋಟಿಗೆ ತಲುಪಿದೆ. ಇಂದು ಅನುದಾನ ಹೆಚ್ಚಾಗಿದೆ. ಆದರೆ, ದಸರಾ ಕಳೆಗುಂದಿದೆ ಎಂದು ಆರೋಪಿಸಿದರು.

ಈ ಬಾರಿ ಲೈಟಿಂಗ್ಸ್ ವ್ಯವಸ್ಥೆಯಲ್ಲಿ ಹಲವಾರು ಲೋಪಗಳು ಕಂಡುಬಂದಿದೆ. ನೇರವಾಗಿ ವಿದ್ಯುತ್ ಕಂಬಕ್ಕೆ ಲೈಟಿಂಗ್ಸ್ ಸಂಪರ್ಕ ಕಲ್ಪಿಸಲಾಗಿತ್ತು. ವಿದ್ಯುತ್ ಕಂಬದಿಂದ ನೇರವಾಗಿ ಲೈಟಿಂಗ್ಸ್‌ಗೆ ಸಂಪರ್ಕ ಕಲ್ಪಿಸಲು ಅನುಮತಿ ನೀಡಿದ್ದು ಯಾರು?. ಸೆಸ್ಕ್ ಇಲಾಖೆಗೆ ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ದಸರಾ ಸಮಿತಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಆದರೆ, ದಸರಾ ಸಮಿತಿಗೆ ಈ ಬಾರಿ ಕಣ್ಣು ಇರಲಿಲ್ಲ. ಕಿವಿನು ಇರಲಿಲ್ಲ ಎಂದು ಟೀಕಿಸಿದರು.ಸರ್ಕರದಿಂದ ೨ ಕೋಟಿ ಅನುದಾನ ನೀಡಲಾಗಿದೆ. ಆದರೆ, ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲದೇ ೧೦ ದಿನವು ಒಂದೇ ರೀತಿಯಲ್ಲಿತ್ತು. ನಗರದ ಬೀದಿಗಳಲ್ಲಿ ಅಳವಡಿಸಿದ್ದ ಲೈಟಿಂಗ್ಸ್ ಒಂದು ಉರಿಯುತ್ತಿದ್ದರೆ, ಮತ್ತೊಂದು ಉರಿಯುತ್ತಿರಲಿಲ್ಲ. ಇಂತಹ ಪರಿಸ್ಥಿತಿ ದಸರಾ ಆಚರಣೆಯಾಗಿತ್ತು. ಸರ್ಕಾರದಿಂದ ಅನುದಾನ ನೀಡಿದ ಸಂದರ್ಭ ಸರಿಯಾದ ರೀತಿಯಲ್ಲಿ ಅದನ್ನು ಬಳಕೆ ಮಾಡುವಂತಾಗಬೇಕು. ೨೦೨೬ರ ಮಡಿಕೇರಿ ದಸರಾ ಜನೋತ್ಸವದ ಲೆಕ್ಕಚಾರವನ್ನು ದಸರಾ ಸಮಿತಿ ಜನತೆ ಮುಂದಿಡಬೇಕು ಎಂದು ಆಗ್ರಹಿಸಿದರು.ಮಡಿಕೇರಿ ದಸರಾ ಬೆಳೆಯಲು ೧೦ ಮಂಟಪಗಳೇ ಕಾರಣವಾಗಿದೆ. ಆದರೆ, ಇಂದು ಮಂಟಪಗಳು ಪ್ರದರ್ಶನ ಮತ್ತು ಪ್ರಶಸ್ತಿಗೆ ಸೀಮಿತವಾಗಿದೆ. ಮೊದಲಿನಂತೆ ನಗರದ ಬೀದಿಗಳಲ್ಲಿ ಶೋಭಯಾತ್ರೆ ಕಂಡುಬರುತ್ತಿಲ್ಲ. ಪರಿಣಾಮ ಇಂದು ನಗರದ ಜನತೆಯೇ ಮಡಿಕೇರಿ ದಸರಾ ನೋಡಲು ಬರುತ್ತಿಲ್ಲ. ಮೈಸೂರು, ಮಂಡ್ಯ, ಹಾಸನ, ಪಿರಿಯಾಪಟ್ಟಣದಿಂದ ಜನ ಬರುತ್ತಿದ್ದಾರೆಯೇ ಹೊರತು ಜಿಲ್ಲೆ ಜನತೆಯಿಲ್ಲ. ಆದ್ದರಿಂದ ದಸರಾ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿ ಜನರನ್ನು ಆಕರ್ಷಣೆ ಮಾಡುವ ಜತೆಗೆ ಎಲ್ಲಾ ಮಂಟಪಗಳು ಒಟ್ಟಿಗೆ ಶೋಭಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಲಂಕಾರ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್, ಪ್ರಮುಖರಾದ ಕೃಷ್ಣರಾಜ್, ಮೋಹನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು