ಚಿಂತಾಮಣಿ: 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲುಕೀಳು ತಾರತಮ್ಯ, ಅಸ್ಪೃಶ್ಯತೆ ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಬಳಲಿದ್ದವರ ಏಳಿಗೆಗಾಗಿ ಶ್ರಮಿಸಿದ ಕ್ರಾಂತಿಕಾರ ಶರಣರೇ ಮಡಿವಾಳ ಮಾಚಿದೇವಯ್ಯನವರೆಂದು ತಹಸೀಲ್ದಾರ್ ಸುದರ್ಶನ್ ಯಾದವ್ ತಿಳಿಸಿದರು.
ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡುಬಂದವರೆಂದು ಮುಖ್ಯ ಭಾಷಣಕಾರ ಕೆ.ಬಾಲಾಜಿ ನುಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮತ್ತು ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಾಪಂ ಇಒ ಎಸ್.ಆನಂದ್, ಬಿಇಒ ಉಮಾದೇವಿ, ಸಮಾಜ ಕಲ್ಯಾಣ ಇಲಾಖೆಯ ಎನ್. ಕೃಷ್ಣಪ್ಪ, ಸಮುದಾಯದ ತಾಲೂಕು ಅಧ್ಯಕ್ಷ ಡಾ.ರಾಮಮೂರ್ತಿ, ಕಾರ್ಯದರ್ಶಿ ಮು.ಪಾಪಣ್ಣ, ಉಪಾಧ್ಯಕ್ಷ ಮತ್ತು ಖಜಾಂಚಿ ಎಂ.ನಾರಾಯಣಸ್ವಾಮಿ ಆನೂರು ವೆಂಕಟೇಶಪ್ಪ, ಕೆಎಸ್‌ಆರ್‌ಟಿಸಿ ಅಶ್ವತ್ಥಪ್ಪ, ಕೇಬಲ್ ಕೃಷ್ಣಪ್ಪ, ಪೂಲಪೇಟೆ ನಾರಾಯಣಸ್ವಾಮಿ ಬಂಬೂಬಜಾರ್ ನಾರಾಯಣಸ್ವಾಮಿ, ತಳಗವಾರ ಗಂಗಾಧರ ಉಪಸ್ಥಿತರಿದ್ದರು.ಪೋಟೋ; ಸಮುದಾಯದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಗಣ್ಯರ ಚಿತ್ರ