ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ನಂತರ ಮಾತನಾಡಿ, ಶರಣರಲ್ಲಿ ಒಬ್ಬರಾದ ಮಾಚಿ ದೇವರುದ 12ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಜಾತಿ ಮತ ಕಾಯಕದಿಂದ ಯಾರು ಮೇಲೆಲ್ಲ, ಯಾರು ಕೀಳಲ್ಲ ಎಂಬ ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ್ದರು ಎಂದು ಬಣ್ಣಿಸಿದರು.ತಾಲೂಕು ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ಬಟ್ಟೆ ತೊಳೆಯುವ ಕಸುಬಿನ ಮಡಿವಾಳರು ಆರ್ಥಿಕ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ. ಕುಲ ಕಸುಬು ಬಿಟ್ಟು ಬೇರೆ ಉದ್ಯೋಗ ಮಾಡುವ ಆರ್ಥಿಕ ಸಾಮರ್ಥ್ಯ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಶಂಕರ, ಕಾರ್ಯದರ್ಶಿ ಗಂಗಯ್ಯ, ಸಂಘಟನಾ ಕಾರ್ಯದರ್ಶಿ ರಾಜೇಶ್, ನಿರ್ದೇಶಕರಾದ ಅಂದಾನಿ, ಶಂಕರ, ಶಶಿಕುಮಾರ್ ಹಾಗೂ ಶಿರಸ್ತೇದಾರ್ ಲಕ್ಷ್ಮೀ ನರಸಿಂಹ ಇದ್ದರು. ಮಡಿವಾಳ ಮಾಚೀದೇವರ ಜಯಂತಿ ಆಚರಣೆ
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಮಡಿವಾಳ ಮಾಚೀದೇವರ ಜಯಂತಿ ಆಚರಿಸಲಾಯಿತು.
ಈ ವೇಳೆ ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ, ವಕೀಲ ಸಿ.ಎಸ್ ವೆಂಕಟೇಶ್, ಜಿಲ್ಲಾ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಸಂಘದ ಅಧ್ಯಕ್ಷ ಶ್ರೀನಿವಾಸ್, ಮಾಚಿದೇವ ಟ್ರಸ್ಟ್ ನ ಅಧ್ಯಕ್ಷ ಸಂಜೀವಯ್ಯ, ಪ್ರಧಾನ ಕಾರ್ಯದರ್ಶಿ ಮಂಜು, ಗೌರವಾಧ್ಯಕ್ಷ ನಾರಾಯಣಪ್ಪ ಪಾಲಹಳ್ಳಿ, ಕರುನಾಡಿ ಸೇನೆ ಅಧ್ಯಕ್ಷೆ ಪ್ರಿಯಾ ರಮೇಶ್, ಡಿಎಸ್ ಎಸ್ ಗಂಜಾಂ ರವಿಚಂದ್ರ, ಮಂಜುನಾಥ್ ಬೆಳಗೊಳ, ಪದಾಧಿಕಾರಿಗಳಾಧ ಕೃಷ್ಣಪ್ಪ ಕೆಆರ್ ಎಸ್, ಸತೀಶ್ ಪ್ರೇಮ್, ಸುರೇಶ್ ಬೆಳಗೊಳ ಮಹೇಶ್, ಪ್ರದೀಪ್ ಗಂಜಾಂ, ದಾಸು ಸೇರಿದಂತೆ ತಾಲೂಕು ಆಡಳಿತದ ಕೆಲ ಸಿಬ್ಬಂದಿ ಇದ್ದರು.