ಅಚಲ ಕಾಯಕ ನಿಷ್ಠರಾಗಿದ್ದ ಮಡಿವಾಳ ಮಾಚಿದೇವರು : ಎಚ್.ಎಂ.ಶಿವಣ್ಣ

KannadaprabhaNewsNetwork |  
Published : Feb 02, 2025, 01:02 AM IST
ನರಸಿಂಹರಾಜಪುರ ತಾಲೂಕು ಕಚೇರಿಯಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಸಮಾರಂಭದಲ್ಲಿ  ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾಭಾನು, ತಹಶೀಲ್ದಾರ್ ತನುಜ ಟಿ.ಸವದತ್ತಿ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಮಾಚಯ್ಯ ಹುಟ್ಟಿನಿಂದಲೂ ಮಡಿವಾಳನಾಗಿದ್ದು ಅಚಲ ಕಾಯಕ ನಿಷ್ಠರಾಗಿದ್ದವರು ಎಂದು ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಹೇಳಿದರು.ಶನಿವಾರ ತಾಲೂಕು ಕಚೇರಿಯಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಉಪನ್ಯಾಸ ನೀಡಿ, ಮಾಚಯ್ಯನವರು ಹಿಮಾಲಯದಷ್ಟು ಧೃಢನಾಗಿದ್ದರು. ತನ್ನ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದವರು.

ತಾಲೂಕು ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಾಚಯ್ಯ ಹುಟ್ಟಿನಿಂದಲೂ ಮಡಿವಾಳನಾಗಿದ್ದು ಅಚಲ ಕಾಯಕ ನಿಷ್ಠರಾಗಿದ್ದವರು ಎಂದು ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಹೇಳಿದರು.

ಶನಿವಾರ ತಾಲೂಕು ಕಚೇರಿಯಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಉಪನ್ಯಾಸ ನೀಡಿ, ಮಾಚಯ್ಯನವರು ಹಿಮಾಲಯದಷ್ಟು ಧೃಢನಾಗಿದ್ದರು. ತನ್ನ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದವರು. ಜಂಗಮ ವೇಷದಲ್ಲಿ ಬಂದ ಶಿವನ ಬಟ್ಟೆಗಳನ್ನು ಆತನ ಷರತ್ತಿನ ಮೇರೆಗೆ ತನ್ನ ಹೆಂಡತಿ ಮಲ್ಲಿಗೆಮ್ಮಳ ಎದೆ ಬಗೆದ ರಕ್ತದಲ್ಲಿ ಒಗೆದು ಒಣಗಿಸಿಕೊಂಡು ಬಂದ ಸಂದರ್ಭ ದಂತ ಕಥೆಯಾಗಿದೆ. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ನಾನಾ ಭಾಗಗಳಿಂದ ಕಲ್ಯಾಣಕ್ಕಾಗಿ ಬರುವವರಿಗೆ ಪರೀಕ್ಷಿಸಿ, ಮಡಿ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆ ಗೊಳಪಡದ ಹೊರತು ಕಲ್ಯಾಣಪುರ ಪ್ರವೇಶ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲ ಎಂಬುದಕ್ಕೆ ಮಾಚಿದೇವನ ಘನತೆಯೇ ಸಾಕ್ಷಿ ಎಂದರು.ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್. ಶೆಟ್ಟಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಮಡಿವಾಳ ಮಾಚಿ ದೇವರ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಡಿ ಆಚರಣೆಗೆ ತರಲಾಗಿದೆ. ಮಾಚಿದೇವರ ಕಾಯಕ ನಿಷ್ಠೆ, ಅವರ ಜೀವನದ ತತ್ವ, ಸಿದ್ದಾಂತಗಳು ಇಂದಿಗೂ ಅನುಕರಣೀಯ ಎಂದರು.ಮಡಿವಾಳ ಮಾಚಿದೇವರ ಸಂಘದ ಕಾರ್ಯದರ್ಶಿ ನಿರಂಜನ್ ಮಾತನಾಡಿ, ನಮ್ಮ ಸಂಘಕ್ಕೆ ಜಾಗ ಕೋರಿ ಹಲವಾರು ಬಾರಿ ಮನವಿ ಸಲ್ಲಿಸಿ ದ್ದೇವೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನಲ್ಲಿ ಎಲ್ಲಾದರೂ ಒಂದು ಎಕರೆ ಜಾಗವನ್ನು ಸಂಘಕ್ಕಾಗಿ ಮಂಜೂರು ಮಾಡಿ ಕೊಡಬೇಕೆಂದು ತಹಸೀಲ್ದಾರ್ ತನುಜಾ. ಟಿ.ಸವದತ್ತಿ ಅವರಿಗೆ ಮನವಿ ಮಾಡಿದರು.ಪ.ಪಂ. ಅಧ್ಯಕ್ಷೆ ಸುರಯ್ಯಭಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಈ ಸಂದರ್ಭದಲ್ಲಿ ತಾಲೂಕು ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಬಸವರಾಜು, ಪ.ಪಂ. ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯೆ ಜುಬೇದಾ, ಕ್ಷೇತ್ರಾಧ್ಯಕ್ಷ ಶ್ರೀನಿವಾಸ್‌, ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮಂಜುನಾಥ್, ಸಂಘದ ಸದಸ್ಯರಾದ ಉಮೇಶ, ಶಾರದಮ್ಮ, ನಾಗರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿ ಹೆಚ್ಚು ರಾಗಿ ಬೆಳೆದು ಮಾದರಿರೈತರಾಗಿರುವ ಹುಲಿಕಟ್ಟೆ ಹರ್ಷಿತ್‌ಗೌಡ
ಅಬಕಾರಿ ಲಂಚ: ತಿಮ್ಮಾಪುರ ವಿರುದ್ಧ ಲೋಕಾಗೆ ದೂರು