ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಪ್ಪಾರ್ಚನೆ । ಸಚಿವ ಸುಧಾಕರ್, ಸಂಸದ ಗೋವಿಂದ ಕಾರಜೋಳ ಭಾಗಿಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯದ ಮೂಲೆ ಮೂಲೆಯಿಂದ ಭಕ್ತಾಧಿಗಳು ಆಗಮಿಸಿ ಶ್ರೀ ದತ್ತಾತ್ರೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ರಥೋತ್ಸವ ಜರುಗಿತು.
ವಿಶೇಷವಾಗಿ ಈ ಬಾರಿ ರಥೋತ್ಸವ ಚಾಲನೆಯಾದ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಪ್ಪನಮನ ಸಲ್ಲಿಸಲಾಯಿತು. ಸುಮಾರು ಅರ್ಧ್ ಗಂಟೆಗಳ ಕಾಲ ಖಾಸಗಿ ಹೆಲಿಕಾಪ್ಟರ್ ಸುಮಾರು 10ಕ್ಕೂ ಹೆಚ್ಚು ಚೀಲಗಳಲ್ಲಿ ತಂದಿದ್ದ ಬಣ್ಣ, ಬಣ್ಣಹೂಗಳನ್ನು ರಥೋತ್ಸವ, ಶಿವನ ಮೂರ್ತಿ, ಗೋಪುರದ ಮೇಲೆ ಚೆಲ್ಲುವ ಮೂಲಕ ಆಗಮಿಸಿದ್ದ ಭಕ್ತರಿಗೆ ಸಂತಸವನ್ನುಂಟು ಮಾಡಿತು. ರಥೋತ್ಸವ ಸಮಯದಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.ಪುಪ್ಪಾರ್ಚನೆ ಸಂದರ್ಭದಲ್ಲಿ ಹೆಲಿಕಾಪ್ಟರ್ ಕೆಳಮಟ್ಟದಲ್ಲಿ ಹಾರಾಡಿದ ಹಿನ್ನೆಲೆಯಲ್ಲಿ ಜೋರಾಗಿ ಬೀಸಿದ ಗಾಳಿ ಭಕ್ತರನ್ನು ತಳ್ಳಿಕೊಂಡು ಹೋಯಿತು. ಹೆಲಿಕಾಪ್ಟರ್ ಗಾಳಿಯ ಸಂದರ್ಭದಲ್ಲೂ ಭಕ್ತರು ದೇವರಿಗೆ ಜಯಕಾರ ಹಾಕುತ್ತ ಮುಂದೆ ಸಾಗಿದರು. ರಥೋತ್ಸವದಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.
ಭಕ್ತರು ರಥದ ಮುಂದೆ ಸಾಗುತ್ತಲೇ ದೇವರ ಜೊತೆಯಲ್ಲಿ ಶ್ರೀ ಸ್ವಾಮಿಗೂ ಪ್ರಣಾಮಗಳನ್ನು ಸಲ್ಲಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸೇರದ ಜನರು ಹೆಲಿಕಾಪ್ಟರ್ ಮೂಲಕ ಉತ್ಸವ ಮೂರ್ತಿ ಮೇಲೆ ಪುಷ್ಪ ಚೆಲ್ಲುವ ದೃಶ್ಯವನ್ನು ಎಲ್ಲರೂ ಕಣ್ತುಂಬಿಕೊಂಡರು.
ರಾಜ್ಯದಲ್ಲಿ ಹಲವಾರು ಮಠಗಳು, ಮಠಾಧೀಶರಿದ್ದು, ಗ್ರಾಮೀಣ ಭಾಗದಲ್ಲೇ ಜನಿಸಿ ಗ್ರಾಮೀಣ ಭಾಗದ ಜನರ ಕಷ್ಟ ಸುಖಗಳಿಗೆ ಪರಿಹಾರ ಹುಡುಕಿಕೊಡುವ ನಿಟ್ಟಿನಲ್ಲಿ ಶ್ರೀ ಮಲ್ಲಪ್ಪಸ್ವಾಮೀಜಿ ಅವರು ದತ್ತಾತ್ರೇಯ ಸ್ವಾಮಿಯ ಆಶೀರ್ವಾದಿಂದ ಬೃಹತ್ ಮಠವನ್ನು ಆರಂಭಿಸಿ ಸೇವಾ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಠಕ್ಕೆ ಆಗಮಿಸುವ ಭಕ್ತರು ತಮ್ಮ ಕಷ್ಟಗಳಿಗೆ ಪರಿಹಾರ ಸಿಕ್ಕಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಸರಳ, ಸಜ್ಜನ, ಮೆದು ಭಾಷಿಯಾದ ಸ್ವಾಮೀಜಿಯವರ ಕಾರ್ಯಗಳು ಎಲ್ಲರಿಗೂ ಸ್ಪೂರ್ತಿ ಎಂದು ಹೇಳಿದರು.
ಶಿವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ದೊಡ್ಡೇರಿಯ ಕನ್ನೇಶ್ವರ ಆಶ್ರಮ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಕಳೆದ 30 ವರ್ಷಗಳಿಂದ ಶ್ರೀ ಮಲ್ಲಪ್ಪಸ್ವಾಮೀಜಿಯವರು ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷವೂ ಮಠದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸ ಕೈಗೊಂಡಿದ್ದಾರೆ. ಮಠಕ್ಕೆ ಆಗಮಿಸುವ ಎಲ್ಲಾ ಭಕ್ತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದಾರೆ. ಮಲ್ಲಪ್ಪ ಸ್ವಾಮಿಯವರ ಜನಪರ ಕಾಳಜಿ ಪ್ರಶ್ನಾತೀತ ಎಂದು ಹೇಳಿದರು.