ಶಾಸಕ ಕೆ.ಎಂ.ಶಿವಲಿಂಗೇಗೌಡ ನೇತೃತ್ವ ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ಮಾ.೨೬ ಮಂಗಳವಾರ ಬೆಳಿಗ್ಗೆ ಜಗದ್ಗುರು ಜಂಗಮ ಮಾಹಾಪೂಜೆ, ಸುಕ್ಷೇತ್ರ ಕೋಡಿಮಠ ಪೀಠವನ್ನು ಅಲಂಕರಿಸಿದ ೫೫ ಪೂಜ್ಯ ಜಂಗಮವರ್ಯರ ದಿವ್ಯ ಸ್ಮರಣಾರ್ಥ ಕರ್ತೃಗದ್ದುಗೆ ಪೂಜೆ, ದ್ವಜಾರೋಹಣ, ಸಿಂಹಾಸನ ಪೂಜೆಯನ್ನು ಅಣ್ಣಾಯ್ಕನಹಳ್ಳಿ ಹಾಗೂ ಹಳ್ಳಾರಟ್ಟ ವಂಶಸ್ಥರಿಂದ ನಡೆಯಲ್ಲಿದೆ.
ಬೆಳಿಗ್ಗೆ ೧೧ ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ನಿರಂಜನ ಜಗದ್ಗುರು ಶಿವಮೊಗ್ಗದ ಬೆಕ್ಕಿನ ಕಲ್ಮಠ ಆನಂದಪುರ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲ್ಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಂತಾರಾಷ್ಟೀಯ ಮಹಿಳಾ ಸಮ್ಮೇಳನದ ರೂವಾರಿಗಳು ಹಾಗೂ ಸೇವಾಕರ್ತರಾದ ಸುನಂದಮ್ಮ ಕಾರ್ಯಕ್ರಮ ಉದ್ಘಾಟಿಸಲಿದ್ದು ಗುರು ಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿ ತಾಯಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.ಮಾ.೨೭ರ ಬುಧವಾರ ಬೆಳಿಗ್ಗೆ ೬.೩೦ಕ್ಕೆ ಶ್ರೀ ಮಠದಲ್ಲಿ ವೇದಮೂರ್ತಿ ನೀಲಕಂಠಯ್ಯ, ಶಿವಲಿಂಗಮೂರ್ತಿ ಇವರಿಂದ ಪುರಾಣ ಶ್ರವಣ, ಸಂಜೆ ಸಭಾ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರು ಸಾವಿರ ಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲ್ಲಿದ್ದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್‌ಗೌಡರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ರಾತ್ರಿ ೧೦ಘಂಟೆಗೆ ಮಹದೇಶ್ವರಬೆಟ್ಟದಲ್ಲಿ ಸಿದ್ಧಲಿಂಗ ಮಹಾಸ್ವಾಮಿಗೆ ಪಾದಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.