ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಹಾಗೂ ವಿಕಸಿತ ಭಾರತ ನಿರ್ಮಿಸುವ ಸಲುವಾಗಿ ಹೆಚ್ಚಿನ ಸದಸ್ಯತ್ವ ನೊಂದಣಿ

KannadaprabhaNewsNetwork |  
Published : Sep 12, 2024, 01:56 AM ISTUpdated : Sep 12, 2024, 12:56 PM IST
50 | Kannada Prabha

ಸಾರಾಂಶ

ಪ್ರಧಾನಿ ಮೋದಿ ಅವರು ಭಾರತವನ್ನು ವಿಶ್ವಗುರುವನ್ನಾಗಿ ರೂಪಿಸುವ ಸಲುವಾಗಿ ಹಗಲಿರುಳೂ ಕೂಡ ವಿಶ್ರಮಿಸದೆ ದುಡಿಯುತ್ತಿದ್ದಾರೆ.

 ನಂಜನಗೂಡು : ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಹಾಗೂ ವಿಕಸಿತ ಭಾರತ ನಿರ್ಮಿಸುವ ಸಲುವಾಗಿ ದೊಡ್ಡ ಸಂಖ್ಯೆಯಲ್ಲಿ ಸದಸ್ಯತ್ವ ನೊಂದಣಿ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಿ ಎಂದು ವರುಣ ಕ್ಷೇತ್ರದ ಬಿಜೆಪಿ ಸದಸ್ಯತ್ವ ಸಂಚಾಲಕ ಮಹದೇವಸ್ವಾಮಿ ಹೇಳಿದರು.

ತಾಲೂಕಿನ ನಗರ್ಲೆ ಗ್ರಾಮದಲ್ಲಿ ವರುಣ ಕ್ಷೇತ್ರದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಧಾನಿ ಮೋದಿ ಅವರು ಭಾರತವನ್ನು ವಿಶ್ವಗುರುವನ್ನಾಗಿ ರೂಪಿಸುವ ಸಲುವಾಗಿ ಹಗಲಿರುಳೂ ಕೂಡ ವಿಶ್ರಮಿಸದೆ ದುಡಿಯುತ್ತಿದ್ದಾರೆ. 

ಅವರ ಕೈ ಬಲ ಪಡಿಸಬೇಕಾದರೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸದೃಢವಾಗಿ ಕಟ್ಟಬೇಕಿದೆ. ಅಲ್ಲದೆ ಹೆಚ್ಚು ನೊಂದಣಿಯನ್ನು ಮಾಡುವುದರಿಂದ ಮಾತ್ರ ಕ್ಷೇತ್ರದಲ್ಲಿ ಬಿಜೆಪಿ ಬಲಗೊಳ್ಳಲು ಸಾಧ್ಯ ಎಂದರು.ಪ್ರತಿಯೊಬ್ಬ ಕಾರ್ಯಕರ್ತರೂ ಸಹ ನಿಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ವರುಣ ಕ್ಷೇತ್ರದಲ್ಲಿ 2 ಲಕ್ಷಕ್ಕಿಂತಲೂ ಅಧಿಕ ಸದಸ್ಯತ್ವ ನೊಂದಾವಣಿ ಮಾಡುವ ಗುರಿಯನ್ನು ಹೊಂದಲಾಗಿದೆ. 

ಪ್ರತಿಯೊಬ್ಬ ಕಾರ್ಯಕರ್ತರೂ ಸಹ ಪಕ್ಷಕ್ಕಾಗಿ ಕೆಲಸ ಮಾಡಿ ಪ್ರತಿ ಬೂತ್ ನಲ್ಲಿ ಸುಮಾರು 300ಕ್ಕೂ ಹೆಚ್ಚಿನ ಯುವ ಮತದಾರರನ್ನು ಬಿಜೆಪಿಗೆ ಸೆಳೆದು ಸದಸ್ಯತ್ವ ನೊಂದಾವಣೆ ಮಾಡಿಸಬೇಕು ಹಾಗೂ ಪ್ರತಿ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಸಾಧನೆ ಮತ್ತು ಪ್ರಧಾನಿ ಮೋದಿರವರ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಹೆಚ್ಚು ಸದಸ್ಯತ್ವ ನೊಂದಾವಣೆ ಮಾಡಿಸಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಮೆಲ್ಲಹಳ್ಳಿ-ಹಾರೋಹಳ್ಳಿ ಜಿಪಂ ವ್ಯಾಪ್ತಿಯ ಎಲ್ಲ ಗ್ರಾಪಂ ಮತ್ತು ಗ್ರಾಮಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ವಾಸು, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಾದಪ್ಪ, ವೆಂಕಟೇಶ್, ತುಂಬಲ ನಂದೀಶ್, ಅಂಕಪ್ಪ, ನಾಗರಾಜ್, ಡಿ. ಮಹೇಶ್, ರಾಜೇಶ್, ಕುಮಾರ್, ಚಿಕ್ಕಸ್ವಾಮಿ, ಸೋಮಣ್ಣ, ಸಿದ್ದಲಿಂಗಸ್ವಾಮಿ, ಗುರುಸ್ವಾಮಿ, ಚಂದ್ರು, ಚರಣ್, ಚಂದು, ಬಸವರಾಜ್ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...