ನಮ್ಮ ದೇಶದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಒಳ್ಳೆಯದಾಗಲಿ, ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನವಿದೆ ಎಂಬ ಸದುದ್ದೇಶದಿಂದ ಕುಂಕುಮಾರ್ಚನೆ ಆಯೋಜಿಸಲಾಗಿದೆ ಎಂದು ಬೆಳಗಾವಿಯ ರಾಷ್ಟಸೇವಿಕಾ ಸಹಕಾರ್ಯವಾಹಿಕಾ ಅಲಕಾತಾಯಿ ಇನಾಮದಾರ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ನಮ್ಮ ದೇಶದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಒಳ್ಳೆಯದಾಗಲಿ, ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನವಿದೆ ಎಂಬ ಸದುದ್ದೇಶದಿಂದ ಕುಂಕುಮಾರ್ಚನೆ ಆಯೋಜಿಸಲಾಗಿದೆ ಎಂದು ಬೆಳಗಾವಿಯ ರಾಷ್ಟಸೇವಿಕಾ ಸಹಕಾರ್ಯವಾಹಿಕಾ ಅಲಕಾತಾಯಿ ಇನಾಮದಾರ ಹೇಳಿದರು.ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದ ಆವರಣದಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿದ ಮಹಾಲಕ್ಷ್ಮೀ ಸೌಭಾಗ್ಯದಾತೆ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸಂಸ್ಕೃತಿಯ ಅನುಗುನವಾಗಿ ಧರ್ಮಪಾಲನೆ ಮಾಡಬೇಕು. ಪರಿವಾರ ವ್ಯವಸ್ಥೆ ನಡೆಸಿಕೊಂಡು ಬರುವ ಸಂಪ್ರದಾಯ ನಮ್ಮಲ್ಲಿದೆ. ಆದರೆ, ಜವಾಬ್ದಾರಿಯ ಅರಿವು ನಮಗಿರಬೇಕು. ಪರಸ್ಪರ ಸಹಕಾರದಿಂದ ಸಂಸಾರ ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ನಿಪ್ಪಾಣಿ ಶಾಸಕಿ ಹಾಗೂ ಜೊಲ್ಲೆ ಗ್ರುಪ್ ಸಹ ಸಂಸ್ಥಾಪಕಿ ಶಶಿಕಲಾ ಜೊಲ್ಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತಾ ಎಂಬ ಶಬ್ದದಲ್ಲಿ ಮೂಲಕ ಒಳ್ಳೆಯ ಸಂಸಾರ ಅಳವಡಿಸಿಕೊಳ್ಳಬೇಕು ಎಂದರು.ಕಣೇರಿಯ ಜನನಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವರ್ಷಾ ಪಾಟೀಲ, ಸ್ನೇಹಾ ಕುಲಕರ್ಣಿ ಮತ್ತು ಚಿಕ್ಕೋಡಿಯ ನಿಲಮ್ ಅಡಕೆ ಮಾತನಾಡಿದರು.ಪ್ರಿಯಾ ಜ್ಯೋತಿಪ್ರಸಾದ ಜೊಲ್ಲೆ, ಯಶಸ್ವಿನಿ ಬಸವಪ್ರಸಾದ ಜೊಲ್ಲೆ, ಮಂಗಲ ಜೊಲ್ಲೆ ಹಾಗೂ ಜೊಲ್ಲೆ ಗ್ರುಪ್‌ನ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೆಶಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ರೂಪಾ ಮಾನೆ ಸ್ವಾಗತಿಸಿದರು. ಸ್ವಪ್ನಾ ವಾಳಕೆ ಮತ್ತು ಸ್ನೇಹಾ ಕಾಂಬಳೆ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.