ಮಹಾಲಿಂಗಪುರ ಪುರಸಭೆ: ₹6.61 ಲಕ್ಷ ಉಳಿತಾಯ ಬಜೆಟ್ ಅನುಮೋದನೆ

KannadaprabhaNewsNetwork |  
Published : Mar 17, 2026, 03:00 AM IST
ಮಹಾಲಿಂಗಪುರ ಪುರಸಭೆಯ ಸನ್ ೨೦೨೬-೨೭ನೇ ಸಾಲಿನ ಪುರಸಭೆಯ ಅಯವ್ಯಯ(ಬಜೆಟ್)ಗೆ ಜಮಖಂಡಿ ಎಸಿ ಶ್ವೇತಾ ಬಿಡಿಕರ ಅನುಮೋದನೆ ನೀಡಿದರು. | Kannada Prabha

ಸಾರಾಂಶ

ಮಹಾಲಿಂಗಪುರ ಪಟ್ಟಣದ ಪುರಸಭೆಯ ಸನ್ ೨೦೨೬-೨೭ನೇ ಸಾಲಿನ ಪುರಸಭೆಯ ಅಯವ್ಯಯ(ಬಜೆಟ್)ಗೆ ಜಮಖಂಡಿ ಎಸಿ ಶ್ವೇತಾ ಬಿಡಿಕರ ಅನುಮೋದನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ಪುರಸಭೆಯ ಸನ್ ೨೦೨೬-೨೭ನೇ ಸಾಲಿನ ಪುರಸಭೆಯ ಅಯವ್ಯಯ(ಬಜೆಟ್)ಗೆ ಜಮಖಂಡಿ ಎಸಿ ಶ್ವೇತಾ ಬಿಡಿಕರ ಅನುಮೋದನೆ ನೀಡಿದರು.

ಬಜೆಟ್ ನಲ್ಲಿ ಪಟ್ಟಣದ ಕುಡಿಯುವ ನೀರು ನೈರ್ಮಲೀಕರಣ, ಬೀದಿ ದೀಪಗಳ ವ್ಯವಸ್ಥೆ ರಸ್ತೆ ಮತ್ತು ಚರಂಡಿ, ಉದ್ಯಾನಗಳ ಅಭಿವೃದ್ಧಿ, ಕೆರೆಯ ಅಭಿವೃದ್ಧಿ ಮತ್ತು ೧೫,೧೬ನೇ ಹಣಕಾಸಿನ /ಎಸ್.ಎಫ್.ಸಿ ಹಾಗೂ ಇತರ ಸರಕಾರದ ಪುರಷೃತ ಯೋಜನೆಗಳ ಮುಂದುವರೆದ ಕಾಮಗಾರಿಗಳಿಗಾಗಿ ಅನುದಾನ ಕಾಯ್ದಿರಿಸಿದ್ದು, ಅದರಂತೆ ಎಸ್.ಎಫ್.ಸಿ ಹಾಗೂ ಪುರಸಭೆ ನಿಧಿಯಡಿ ಸರಕಾರದ ಮಾರ್ಗಸೂಚಿ ಪ್ರಕಾರ ಶೇ೨೪.೧೦, ಶೇ೭.೨೫, ಶೇ೫, ರಡಿ ಮೊತ್ತ ಕಾಯ್ದಿರಿಸಲಾಗಿದೆ.

೨೦೨೬-೨೭ನೇ ಸಾಲಿಗಾಗಿ ತಯಾರಿಸಿದ ಆಯವ್ಯಯದ ಅಂದಾಜು ₹೩೧,೧೩,೧೮,೨೬೮ ಆದಾಯ ನಿರೀಕ್ಷಿಸಿದ್ದು, ₹೩೧,೦೬,೫೭,೨೬೮ ವೆಚ್ಚ ನಿರೀಕ್ಷಿಸಲಾಗಿದ್ದು, ೬,೬೧,೦೦೦ ಉಳಿತಾಯ ಬಜೆಟ್‌ ಅನುಮೋದಿಸಲಾಯಿತು. ಬಜೆಟ್ ಗೆ ಆಡಳಿತಾಧಿಕಾರಿ ಶ್ವೇತಾ ಎಮ್ ಬಿಡಿಕರ ಅವರಿದಂದ ಮಾ.೧೨ರಂದು ಅನುಮೋದನೆ ಪಡೆಯಲಾಗಿದೆ ಎಂದು ಮುಖ್ಯಾಧಿಕಾರಿ ನಾಮದೇವ ಲಮಾಣಿ ಪ್ರಕಟಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರ್ಸಿಯನ್‌ ಹೇರಿ ಕನ್ನಡ ಕೊಲೆ ಮಾಡಿದ ಟಿಪ್ಪು: ಸಿ.ಟಿ. ರವಿ
ಲೇಡಿಗೋಶನ್‌ : ಗುತ್ತಿಗೆದಾರರ ಬಾಕಿ ಮೊತ್ತ ಲೋಕ ಅದಾಲತ್‌ನಲ್ಲಿ ಇತ್ಯರ್ಥ