ಮಹಾರ್‌ ಯೋಧರಂತೆ ಸ್ವಾಭಿಮಾನಿಗಳಾಗಿ: ಬಿ.ಟಿ.ಚಂದ್ರಶೇಖರ್

KannadaprabhaNewsNetwork |  
Published : Jan 03, 2025, 12:34 AM IST
2 ಬೀರೂರು 1ಬೀರೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಮಾದಿಗ ಸಮಾಜ ಮತ್ತು ಪುರಸಭೆ ಪೌರಕಾರ್ಮಿಕರು ಭೀಮಾ ಕೋರೆಗಾಂವ ವಿಜಯೋತ್ಸವ ಆಚರಣೆ ಮಾಡಿದರು. ಬಿ.ಟಿ.ಚಂದ್ರಶೇಖರ್, ಮಲ್ಲಿಕಾರ್ಜುನ್, ಜಯಮ್ಮ, ಪಿಎಸೈ ಸಜಿತ್ ಕುಮಾರ್ ಇದ್ದರು. | Kannada Prabha

ಸಾರಾಂಶ

ಬೀರೂರು, ದೇಶದಲ್ಲಿ 206 ವರ್ಷಗಳ ಹಿಂದೆ ನಡೆದ ಭೀಮಾ ಕೋರೆಗಾಂವ್ ಹೋರಾಟ ಇತಿಹಾಸ ಸೃಷ್ಟಿಸಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಹೇಳಿದರು.

- ಐತಿಹಾಸಿಕ ಯುದ್ಧ । ಬೀರೂರಿನ ಅಂಬೇಡ್ಕರ್ ಪ್ರತಿಮೆ ಬಳಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

ಕನ್ನಡಪ್ರಭವಾರ್ತೆ, ಬೀರೂರು

ದೇಶದಲ್ಲಿ 206 ವರ್ಷಗಳ ಹಿಂದೆ ನಡೆದ ಭೀಮಾ ಕೋರೆಗಾಂವ್ ಹೋರಾಟ ಇತಿಹಾಸ ಸೃಷ್ಟಿಸಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಹೇಳಿದರು.ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಮಂಭಾಗದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವದಲ್ಲಿ ಮಾತನಾಡಿದರು. ‘ಭೀಮಾ ಕೋರೆಗಾಂವ್ ಕದನ ದಲಿತರ ಆತ್ಮಗೌರವ ಹೋರಾಟವಾಗಿದ್ದು, 500 ಮಂದಿ ಮಹಾರ್ ಯೋಧರು ಅನ್ನ–ನೀರು ಹಾಗೂ ವಿಶ್ರಾಂತಿ ಇಲ್ಲದೇ 28 ಸಾವಿರ ಪೇಶ್ವೆ ಸೈನಿಕರ ವಿರುದ್ಧ ಹೋರಾಟ ನಡೆಸಿ ಆ ಮೂಲಕ ವಿಜಯ ಸಾಧಿಸಿದ್ದರು. ಮಹಾರ್ ಯೋಧರಂತೆ ಎಲ್ಲರೂ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು ಎಂದರು.

ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದ ದಲಿತ ಹೋರಾಟಗಾರರು ಅನ್ನ, ನೀರು, ವಿಶ್ರಾಂತಿ ಇಲ್ಲದೆ ಸುಮಾರು 28 ಸಾವಿರ ಪೇಶ್ವೆಗಳ ಸೈನ್ಯದ ವಿರುದ್ಧ ಹೋರಾಡಿ ಗೆದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಐತಿಹಾಸಿಕವಾಗಿದೆ. ಈ ಹೋರಾಟವನ್ನು ಡಾ. ಅಂಬೇಡ್ಕರ್ ದೇಶಕ್ಕೆ ಪರಿಚಯಿಸಿದರು. ಇಂತಹ ಹೋರಾಟ ಕಿಚ್ಚು ದಲಿತ ಬಾಂಧವರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪುರಸಭೆ ಪೌರಕಾರ್ಮಿಕರ ಪರವಾಗಿ ಜಯಮ್ಮ ಮಾತನಾಡಿ, ಶೋಷಿತ ವರ್ಗಗಳ ಯುವಕರು ದೈಹಿಕ, ಮಾನಸಿಕವಾಗಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ದೇಶ ಕಾಯುವ ಯೋಧರ ಹುದ್ದೆ ಗಳಿಗೆ ಸೇರಬೇಕು. ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಸೇರುವ ಮೂಲಕ ತಮ್ಮ ಸಮುದಾಯದ ಏಳಿಗೆಗೆ ನೆರವಾಗಬೇಕು ಎಂದು ತಿಳಿಸಿದರು.ಮಾದಿಗ ಸಮಾಜದ ಮುಖಂಡ ಮಲ್ಲಿಕಾರ್ಜುನ್ ಮಾತನಾಡಿ, ‘ಪೇಶ್ವೆ ಬಾಜಿರಾಯ ಅಸ್ಪೃಶ್ಯ ಯೋಧರ ಬೆಂಬಲ ತಿರಸ್ಕರಿಸಿ, ಮಹಾರ್ ಪಡೆಯ ಸಿದ್ಧನಾಯಕನನ್ನು ಅಪಮಾನಿಸಿ ಕಳುಹಿಸುತ್ತಾನೆ. ಇದರಿಂದ ಅವರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದು, ಅಸ್ಪೃಶ್ಯತೆ ಆಚರಣೆ, ಜಾತಿ ಪದ್ಧತಿ ಮತ್ತು ಮನುಧರ್ಮ ಶಾಸ್ತ್ರದ ವಿರುದ್ಧ ಹೋರಾಡಿ, ಯುದ್ಧದಲ್ಲಿ ವಿಜಯ ಸಾಧಿಸಿ ದ್ದರು.‘ಭೀಮಾ ಕೋರೆಗಾಂವ್ ಯುದ್ಧ ಇವತ್ತಿಗೂ ಮುಗಿಯದೆ ಮುಂದುವರಿಯುತ್ತಿದೆ. ಈ ದೇಶದಲ್ಲಿ ಎಲ್ಲಿಯವರೆಗೆ ಜಾತಿ ವ್ಯವಸ್ಥೆ, ಅಸಮಾನತೆ, ಅಸ್ಪೃಶ್ಯತೆ ಮತ್ತು ಮನುಧರ್ಮ ಶಾಸ್ತ್ರ ಜೀವಂತಾಗಿ ಇರುತ್ತದೆಯೋ ಅಲ್ಲಿಯವರೆಗೂ ಮತ್ತೆ ಮತ್ತೆ ಕೋರೆ ಗಾಂವ್ ಯುದ್ಧ ಮಾಡಬೇಕಾಗುತ್ತದೆ. ಈಗಿನ ಕೋರೆಗಾಂವ್ ಯುದ್ಧವನ್ನು ಅಹಿಂಸಾತ್ಮಕ, ಸಂವಿಧಾನತ್ಮಕ ಮತ್ತು ಅಕ್ಷರದ ಅರಿವಿನ ಮೂಲಕ ಮಾಡಬೇಕಿದೆ’ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಿಎಸೈ ಸಜಿತ್ ಕುಮಾರ್, ವಿಜಯಕುಮಾರ್, ಬೀರೂರು ಗಿರೀಶ್, ಪೌರಕಾರ್ಮಿಕರಾದ ವೆಂಕಟೇಶ್, ಪ್ರಶಾಂತ್, ಶೃಂಗಾರ್, ಸುಭ್ರಮಣಿ, ಕುಪ್ಪಸ್ವಾಮಿ, ಸೇರಿದಂತೆ ಮತ್ತಿತರಿದ್ದರು,2 ಬೀರೂರು 1ಬೀರೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಮಾದಿಗ ಸಮಾಜ ಮತ್ತು ಪುರಸಭೆ ಪೌರಕಾರ್ಮಿಕರು ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸಿದರು. ಬಿ.ಟಿ.ಚಂದ್ರಶೇಖರ್, ಮಲ್ಲಿಕಾರ್ಜುನ್, ಜಯಮ್ಮ, ಪಿಎಸೈ ಸಜಿತ್ ಕುಮಾರ್ ಇದ್ದರು.

PREV

Recommended Stories

‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ