ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ದೇವಸ್ಥಾನದ ಆವರಣದ ಕುಸ್ತಿ ಮೈದಾನದಲ್ಲಿ ಬುಧವಾರ ರಾತ್ರಿಯಿಡೀ ನಡೆದ ಸ್ಪರ್ಧೆಯಲ್ಲಿ ಉಭಯ ಮಲ್ಲರು ಆರಂಭದಿಂದಲೇ ಪಟ್ಟು–ಪ್ರತಿಪಟ್ಟಿನ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಬಲ ಹಾಗೂ ತಂತ್ರಗಾರಿಕೆಯ ಸಮನ್ವಯದೊಂದಿಗೆ ಹೋರಾಡಿದ ಮಹಾರುದ್ರ ಕಾಳೆ, ನಿರ್ಣಾಯಕ ಹಂತದಲ್ಲಿ ಹಿಡಿತ ಬಿಗಿಗೊಳಿಸಿ ಶುಭಂ ಅವರನ್ನು ಚಿತ್‌ಗೊಳಿಸಿ ಜಯ ತಮ್ಮದಾಗಿಸಿಕೊಂಡರು.
ಮಹಾರುದ್ರ ಕಾಳೆ ಅವರ ಯಶಸ್ಸಿಗೆ ಮೈದಾನದಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು. ಕರ್ನಾಟಕ ಹಾಗೂ ಮಹಾರಾಷ್ಟ್ರದ 55 ಜೋಡಿ ಪೈಲ್ವಾನರು ಪಾಲ್ಗೊಂಡಿದ್ದ ಪಂದ್ಯಾವಳಿ ಜಾತ್ರೆಯ ಕ್ರೀಡಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.