ಜಿಲ್ಲಾದ್ಯಂತ ಮಹಾಶಿವರಾತ್ರಿ ಸಂಭ್ರಮ: ಜಾಗರಣೆಗೆ ಸಿದ್ಧತೆ

KannadaprabhaNewsNetwork |  
Published : Feb 26, 2025, 01:00 AM IST
ಕ್ಯಾಪ್ಷನ25ಕೆಡಿವಿಜಿ42, 43, 44, 45 ದಾವಣಗೆರೆಯಲ್ಲಿ ಶಿವರಾತ್ರಿ ಅಂಗವಾಗಿ ಮಾರುಕಟ್ಟೆಯಲ್ಲಿ ಹಣ್ಣು ಹೂ, ಬಿಲ್ವ ಪತ್ರೆ ಖರೀದಿಯಲ್ಲಿ ಗ್ರಾಹಕರು........ಕ್ಯಾಪ್ಷನ25ಕೆಡಿವಿಜಿ46 ದಾವಣಗೆರೆಯಲ್ಲಿ ಶಿವರಾತ್ರಿ ಹಬ್ಬದ ಮಾರುಕಟ್ಟೆ ಕಂಡು ಬಂದ ದೃಶ್ಯ | Kannada Prabha

ಸಾರಾಂಶ

ಹಿಂದೂಗಳ ಪ್ರಮುಖ ಹಬ್ಬವಾದ ಮಹಾಶಿವರಾತ್ರಿ ಫೆ.26ರಂದು ಆಚರಣೆಗೆ ಜಿಲ್ಲಾದ್ಯಂತ ಮಂಗಳವಾರ ಜನತೆ ಸಕಲ ಸಿದ್ಧತೆಯಲ್ಲಿ ತೊಡಗಿದ್ದು ಕಂಡುಬಂತು.

- ಬಹುತೇಕ ಶಿವ ದೇಗುಲಗಳಿಗೆ ವರ್ಣರಂಜಿತ ವಿದ್ಯುತ್‌ ದೀಪಾಲಂಕಾರ । ತಳಿರುತೋರಣ, ಹೂವುಗಳಿಂದ ಅಲಂಕಾರ

- - - ಕನ್ನಡ ಪ್ರಭ ವಾರ್ತೆ ದಾವಣಗೆರೆ ಹಿಂದೂಗಳ ಪ್ರಮುಖ ಹಬ್ಬವಾದ ಮಹಾಶಿವರಾತ್ರಿ ಫೆ.26ರಂದು ಆಚರಣೆಗೆ ಜಿಲ್ಲಾದ್ಯಂತ ಮಂಗಳವಾರ ಜನತೆ ಸಕಲ ಸಿದ್ಧತೆಯಲ್ಲಿ ತೊಡಗಿದ್ದು ಕಂಡುಬಂತು.

ನಗರದ ಹಳೇ ದಾವಣಗೆರೆಯ ಶ್ರೀ ಪಾತಾಳ ಲಿಂಗೇಶ್ವರ ಸ್ವಾಮಿ ದೇವಸ್ಥಾನ, ಎಸ್‌ಕೆಪಿ ರಸ್ತೆಯ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಾರ್ಕಂಡೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಗೀತಾಂಜಲಿ ಚಿತ್ರಮಂದಿರ ರಸ್ತೆಯ ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನ, ಬಂಬೂ ಬಜಾರ್‌ನಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಕೆಟಿಜೆ ನಗರದ 10ನೇ ತಿರುವಿನಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಸಮೀಪದ ಹಳೇ ಕುಂದವಾಡದ ಶ್ರೀ ಸದ್ಗುರು ಕರಿಬಸವೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ, ಕೊಂಡಜ್ಜಿ ರಸ್ತೆಯ ಮೈಲಾರ ಲಿಂಗೇಶ್ವರ ದೇವಸ್ಥಾನ, ಎಸ್.ಎಸ್.ಬಡಾವಣೆಯ ಅಥಣಿ ಕಾಲೇಜಿನಲ್ಲಿರುವ ಶಿವನ ಮೂರ್ತಿ ಬಳಿ, ಸ್ವಾಮಿ ವಿವೇಕಾನಂದ ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ, ಪಿ.ಬಿ. ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ, ವಿನೋಬ ನಗರದ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನ, ನಗರದ ಪಿ.ಜೆ. ಬಡಾವಣೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ ಶ್ರೀ ಸಾಯೀಶ್ವರ ಲಿಂಗಕ್ಕೆ ರುದ್ರಾಭಿಷೇಕ, ಎಸ್‌ಕೆಪಿ ರಸ್ತೆಯ ನರಗೇಶ್ವರ ಸ್ವಾಮಿ ದೇವಸ್ಥಾನ, ಬಂಬೂ ಬಜಾರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬಕ್ಕೇಶ್ವರ ಶಾಲೆ ಸಮೀಪದ ಶಿವನ ದೇವಸ್ಥಾನಗಳನ್ನು ವಿವಿಧ ಬಗೆಯ ಹೂವು, ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದು, ಮಹಾ ಶಿವರಾತ್ರಿ ಹಬ್ಬಕ್ಕೆ ತಯಾರಿ ನಡೆಸಲಾಗಿದೆ.

ಮಹಾ ಶಿವರಾತ್ರಿಯ ಮುನ್ನಾ ದಿನವಾದ ಮಂಗಳವಾರ ವಿನೋಬನಗರ, ಆಂಜನೇಯ ಬಡಾವಣೆ, ವಿದ್ಯಾರ್ಥಿ ಭವನ, ದೇವರಾಜ ಅರಸು ಬಡಾವಣೆ, ಕೊಂಡಜ್ಜಿ ರಸ್ತೆ, ಕೆ.ಆರ್.ಮಾರುಕಟ್ಟೆ, ಮಂಡಿಪೇಟೆ, ಗಡಿಯಾರ ಕಂಬ, ಕಾಯಿಪೇಟೆ, ಹೊಂಡದ ಸರ್ಕಲ್, ಚಾಮರಾಜ ಪೇಟೆ ವೃತ್ತ, ವಿದ್ಯಾನಗರ, ಸಿದ್ದವೀರಪ್ಪ ಬಡಾವಣೆ, ಎಸ್.ನಿಜಲಿಂಗಪ್ಪ ಬಡಾವಣೆ, ನಿಟ್ಟುವಳ್ಳಿ ಸೇರಿದಂತೆ ಇನ್ನೂ ಹಲವೆಡೆ ಪೂಜೆಗೆ ಬೇಕಾದ ಬಿಲ್ವಪತ್ರೆ, ವಿವಿಧ ಬಗೆಯ ಹೂವು, ಕಲ್ಲಂಗಡಿ, ಕರ್ಬೂಜ, ಗಂಜಾಂ, ಬನಸ್ಪತ್ರೆ, ಬಾಳೆ, ಕರ್ಜೂರ, ಕಿತ್ತಳೆ, ಸೇಬು ಸೇರಿದಂತೆ ಇತರೆ ಹಣ್ಣುಗಳ ಖರೀದಿಯಲ್ಲಿ ಗ್ರಾಹಕರು ನೆರೆದಿದ್ದ ದೃಶ್ಯ ಕಂಡುಬಂದಿತು.

ಅಗತ್ಯ ವಸ್ತುಗಳ ಬೆಲೆ ಪ್ರತಿ ವರ್ಷದಂತೆ ಈ ವರ್ಷವೂ ಗಗನಕ್ಕೇರಿವೆ. ಆದರೂ ಭಕ್ತರು ದರ ಏರಿಕೆ ಬಗ್ಗೆ ಗಮನಕೊಡದೇ ಶಿವರಾತ್ರಿ ಹಬ್ಬದ ಆಚರಣೆಗೆ ಶಿವನಿಗೆ ನೈವೇದ್ಯಕ್ಕೆ ಉಪಾಹಾರ, ಫಲಾಹಾರ ತಯಾರಿಗೆ ಸಜ್ಜಾಗಿದ್ದಾರೆ. ಅದರಲ್ಲೂ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಕೂಡ 1 ಮಾರಿಗೆ ₹150-₹200 ದರ ಕಂಡಿದೆ. ಬಗೆಬಗೆಯ ಹೂ, ಹಣ್ಣುಗಳ ದರಗಳೂ ಬಹಳ ಏರಿಕೆಯಾಗಿವೆ.

- - - -25ಕೆಡಿವಿಜಿ42, 43, 44, 45: ದಾವಣಗೆರೆಯಲ್ಲಿ ಶಿವರಾತ್ರಿ ಅಂಗವಾಗಿ ಮಾರುಕಟ್ಟೆಯಲ್ಲಿ ಶಿವಭಕ್ತರು ಹಣ್ಣು ಹೂ, ಬಿಲ್ವ ಪತ್ರೆ ಮುಂತಾದ ಹಬ್ಬದ ವಸ್ತುಗಳ ಖರೀದಿಸಿದರು. -25ಕೆಡಿವಿಜಿ46: ದಾವಣಗೆರೆಯಲ್ಲಿ ಶಿವರಾತ್ರಿ ಹಬ್ಬ ಹಿನ್ನೆಲೆ ಮಾರುಕಟ್ಟೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿರುವುದು.

PREV

Recommended Stories

‘ಫಾರಿನ್‌ ಅನ್ನಭಾಗ್ಯ’ ಕೊಟ್ಟವರಿಗೆ ಹವಾಲಾ ಮೂಲಕ ಹಣ ಪಾವತಿ?
ಬಸವಣ್ಣ ಅಧ್ಯಯನ ಪೀಠ ಸ್ಥಾಪನೆ ಮಾಡಿ : ಮೊಯ್ಲಿ