ಮನುಕುಲದ ಹಾದಿ ಬದಲಾಯಿಸಿದವರು ಮಾಹಾತ್ಮಗಾಂಧೀಜಿ: ಎನ್.ರಮೇಶ್

KannadaprabhaNewsNetwork | Published : Oct 4, 2024 1:10 AM

ಸಾರಾಂಶ

ಬೀರೂರು, ಮಹಾತ್ಮಾಗಾಂಧೀಜಿ ಸತ್ಯವನ್ನೇ ಪ್ರಾಣವನ್ನಾಗಿಟ್ಟು ಕೊಂಡವರು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಿಸ್ವಾರ್ಥ ಬದುಕು ಹಾಗೂ ದೇಶಪ್ರೇಮಕ್ಕಾಗಿ ಸತ್ಯ ಅಹಿಂಸೆ ಮೂಲಕ ಏನೆಲ್ಲಾ ಸಾಧನೆ ಮಾಡಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿದ್ದು ಅವರ ಆಶಯಗಳಿಗೆ ಬೆಲೆ ತುಂಬುವ ಕೆಲಸ ನಮ್ಮಿಂದ ಆಗಬೇಕಿದೆ ಕಾಂಗ್ರೆಸ್‌ನ ಕಡೂರು ಕ್ಷೇತ್ರದ ಉಸ್ತುವಾರಿ ವೀಕ್ಷಕ ಎನ್.ರಮೇಶ್ ಹೇಳಿದರು.

ಗಾಂಧಿ- ಶಾಸ್ತ್ರಿಜಿ ಜಯಂತಿ ಅಂಗವಾಗಿ ಗಾಂಧಿ ಪುತ್ಥಳಿಗೆ ಕಾಂಗ್ರೆಸ್‌ನಿಂದ ಮಾಲಾರ್ಪಣೆ

ಕನ್ನಡಪ್ರಭ ವಾರ್ತೆ, ಬೀರೂರು.ಮಹಾತ್ಮಾಗಾಂಧೀಜಿ ಸತ್ಯವನ್ನೇ ಪ್ರಾಣವನ್ನಾಗಿಟ್ಟು ಕೊಂಡವರು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಿಸ್ವಾರ್ಥ ಬದುಕು ಹಾಗೂ ದೇಶಪ್ರೇಮಕ್ಕಾಗಿ ಸತ್ಯ ಅಹಿಂಸೆ ಮೂಲಕ ಏನೆಲ್ಲಾ ಸಾಧನೆ ಮಾಡಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿದ್ದು ಅವರ ಆಶಯಗಳಿಗೆ ಬೆಲೆ ತುಂಬುವ ಕೆಲಸ ನಮ್ಮಿಂದ ಆಗಬೇಕಿದೆ ಕಾಂಗ್ರೆಸ್‌ನ ಕಡೂರು ಕ್ಷೇತ್ರದ ಉಸ್ತುವಾರಿ ವೀಕ್ಷಕ ಎನ್.ರಮೇಶ್ ಹೇಳಿದರು.ಪಟ್ಟಣದ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಅಂಗವಾಗಿ ಬುಧವಾರ ಮಹಾತ್ಮಗಾಂಧಿ ವೃತ್ತದಲ್ಲಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಮನುಕುಲದ ಹಾದಿ ಬದಲಾಯಿಸಿದವರು ಗಾಂಧೀಜಿ, ಇಂತಹ ಆದರ್ಶ ವ್ಯಕ್ತಿ ಮಾರ್ಗ ದರ್ಶನವನ್ನು ಕಾಂಗ್ರೆಸ್ ಅನುಸರಿಸುತ್ತಿದ್ದು, ಅವರ ಜೀವನವೇ ಸಂದೇಶ. ಸತ್ಯಕ್ಕಾಗಿ ಹೋರಾಟ ನಡೆಸಿದ ಮಹಾತ್ಮರ ಆಶಯದಂತೆ ನಡೆಯೋಣ ಎಂದರು.

ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್ ಮಾತನಾಡಿ, ದೇಶಕ್ಕೆ ಮಹಾತ್ಮಾಗಾಂಧೀಜಿ, ಶಾಸ್ತ್ರಿ ಯವರ ಕೊಡುಗೆ ಅಪಾರ. ಸ್ವತಂತ್ರ ಭಾರತದಲ್ಲಿ ಅವರ ಆಶೋತ್ತರಗಳಿಗೆ ಮಾನ್ಯತೆ ನೀಡಿ ಅವುಗಳನ್ನು ಪೂರೈಸುವಲ್ಲಿ ನಾವೆಲ್ಲರೂ ಕಂಕಣಬದ್ಧರಾಗೋಣ ಎಂದರು. ಕಾಂಗ್ರೆಸ್ ಯೋಜನೆಗಳಲ್ಲಿ ಗಾಂಧೀಜಿ ಚಿಂತನೆ ಇದೆ. ಡಾ. ಮನಮೋಹನ ಸಿಂಗ್ ನೇತೃತ್ವದ ಯುಪಿಎ ಅಧಿಕಾರವಿದ್ದಾಗ ಜನರಿಗೆ ಉದ್ಯೋಗ ನೀಡಿ ಬದುಕಿಗೆ ಶಕ್ತಿ ನೀಡಲು ಮಹಾತ್ಮ ಗಾಂಧೀಜಿ ರಾಷ್ಟ್ರಿಯ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿ ದುಡಿಯುವ ಕೈಗಳಿಗೆ ಉದ್ಯೋಗದ ಹಕ್ಕು , ಉಚಿತ - ಕಡ್ಡಾಯ ಶಿಕ್ಷಣದ ಹಕ್ಕು, ಆಹಾರ ಭದ್ರತೆ ಯೋಜನೆ, ಗಾಂಧಿ ಚಿಂತನೆ ಮೂಲಕ ಖಾದಿ ಉದ್ಯಮ ಬೆಳೆಸುವಲ್ಲಿ ಕಾಂಗ್ರೆಸ್ ಕೊಡುಗೆ ಸಾಕಷ್ಟಿದೆ ಎಂದರು.ತಾಪಂ ಮಾಜಿ ಅಧ್ಯಕ್ಷ ದಾಸಯ್ಯುನ ಗುತ್ತಿ ಚಂದ್ರಪ್ಪ ಮಾತನಾಡಿ, ಜೈಜವಾನ್ ಜೈಕಿಸಾನ್ ಎಂಬ ಘೊಷಣೆ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ ಲಾಲ್ ಬಹದ್ದೂರು ಶಾಸ್ತ್ರಿ 17 ತಿಂಗಳ ಪ್ರಧಾನಿಯಾಗಿದ್ದು ಇಡೀ ದೇಶವನ್ನು ಸ್ವಾಭಿಮಾನಿಯನ್ನಾಗಿ ಮಾಡಿದ್ದರು ಎಂದರು.ಈ ಸಂದರ್ಭದಲ್ಲಿ ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಪುರಸಭೆ ಸದಸ್ಯರಾದ ಗಂಗಾಧರ್, ಲೋಕೆಶಪ್ಪ, ಕಾರ್ಯಕರ್ತ ರಾದ ಬಿ.ಟಿ.ಚಂದ್ರಶೇಖರ್, ವಿನಾಯಕ್, ಮುಬಾರಕ್, ಡಿಶ್ ರವಿ, ಆಟೋ ಸಂಘದ ಮಾಜಿ ಅಧ್ಯಕ್ಷ ಸೋಮಪ್ಪ, ಆರಿಫ್ ಸೇರಿದಂತೆ ಮತ್ತಿತರು ಇದ್ದರು.2 ಬೀರೂರು 2ಬೀರೂರು ಪಟ್ಟಣದ ಗಾಂಧಿಜಿ ಮತ್ತು ಶಾಸ್ತ್ರಿಜಿ ಜಯಂತಿ ಅಂಗವಾಗಿ ಬುಧವಾರ ಮಹಾತ್ಮಗಾಂಧಿ ವೃತ್ತದಲ್ಲಿ ಗಾಂಧಿ ಪುತ್ತಳಿಗೆ ಕಾಂಗ್ರೆಸ್ ನ ಕಡೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವೀಕ್ಷಕ ಎನ್.ರಮೇಶ್ ಕಾರ್ಯಕರ್ತರೊಂದಿಗೆ ಮಾಲಾರ್ಪಣೆ ಮಾಡಿದರು.ಆಸಂದಿ ಕಲ್ಲೇಶ್ ಇದ್ದರು.

Share this article