ಮಹಾತ್ಮರ ಬದುಕು, ಬರಹ ನಮ್ಮದಾಗಬೇಕು: ಸುರೇಶ ಬಡಿಗೇರ

KannadaprabhaNewsNetwork |  
Published : May 21, 2024, 01:45 AM IST
ಫೋಟೋ- ಕನ್ನಡ | Kannada Prabha

ಸಾರಾಂಶ

ಕಲಬುರಗಿ ನಗರದಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ಹಾಗೂ ಸನ್ ರೈಸ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯನ್ನು ಕೇವಲ ಮೆರವಣಿಗೆಗೆ ಸೀಮಿತಗೊಳಿಸದೆ, ಅವರ ಬದುಕು ಬೋಧನೆಯನ್ನು ಅನುಸರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅಭಿಪ್ರಾಯಪಟ್ಟರು.

ಜೈ ಕನ್ನಡಿಗರ ರಕ್ಷಣಾ ವೇದಿಕೆ ಹಾಗೂ ಸನ್ ರೈಸ್ ಆಸ್ಪತ್ರೆ ವತಿಯಿಂದ ನಗರದ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಬುದ್ಧ, ಬಸವ, ಅಂಬೇಡ್ಕರ್ ರತ್ನ ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.

ಬುದ್ದ, ಬಸವ, ಅಂಬೇಡ್ಕರ್ ಅವರು ನಮ್ಮೊಳಗಿನ ಎಚ್ಚರ. ಸಮಾಜದ ಎಲ್ಲರೂ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪರಿವರ್ತನೆ ಅಗತ್ಯವಾಗಿದ್ದು, ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳಿಂದ ಇದು ಸಾಧ್ಯ ಎಂದು ತಿಳಿಸಿದರು.

ನದಿ ಸಿನ್ನೂರ ಮಹಾಲಕ್ಷ್ಮಿ ಶಕ್ತಿ ಪೀಠದ ಗುರುರಾಜೇಂದ್ರ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು.

ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಪ್ರಶಸ್ತಿ ಪ್ರದಾನ ಮಾಡಿದರು. ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಡಾ. ಸುರೇಶ ಎಲ್. ಶರ್ಮಾ ಮಹಾಪುರುಷರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಸನ್ ರೈಸ್ ಆಸ್ಪತ್ರೆಯ ಮುಖ್ಯಸ್ಥ ಡಾ. ಸಲ್ಮಾನ್ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಂಜುನಾಥ ನಾಲವಾರಕರ, ಚಂದ್ರಿಕಾ ಪರಮೇಶ್ವರಿ, ರವಿ ದೇಗಾಂವ, ಮಲ್ಲಿಕಾರ್ಜುನ ನೀಲೂರ ಇತರರು ವೇದಿಕೆಯಲ್ಲಿದ್ದರು.

ಪ್ರಶಸ್ತಿ ಪ್ರದಾನ:

ಡಾ. ಶಿವರಂಜನ ಸತ್ಯಂಪೇಟೆ, ಡಾ. ಪುಟ್ಟಮಣಿ ದೇವಿದಾಸ, ಡಾ. ಅನಿಲ ಟೆಂಗಳಿ, ಶಶಿಕಲಾ ನರೋಣಕರ, ಡಾ. ರಾಜಶೇಖರ ಮಾಂಗ್, ಸಿದ್ಧಾರ್ಥ ಚಿಮ್ಮಾಇದಲಾಯಿ, ಜೈಭೀಮ ಸಾವಳಗಿ, ತಿಪ್ಪಮ್ಮ ಮಾನಕರ್, ಎಚ್.ಬಿ. ಪಾಟೀಲ ಇತರರಿಗೆ ಬುದ್ಧ, ಬಸವ, ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ವೇಳೆಯಲ್ಲಿ ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಅನುಷ್ಠಾನ ಸಮಿತಿ ಸದಸ್ಯರಾದ ಚಂದ್ರಿಕಾ ಪರಮೇಶ್ವರ, ಧೂಳಪ್ಪ ಕಟ್ಟಿಮನಿ, ರಾಜ್ ತಿಲಕ್ ಉಪಾಧ್ಯಾಯ, ಕಲ್ಯಾಣರಾವ ತೊನಸನಳ್ಳಿ, ವಿಜಯಕುಮಾರ ಕಟ್ಟಿಮನಿ ಇವರಿಗೆ ಸನ್ಮಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ