ಮಾಹೆಯಿಂದ ಶೈಕ್ಷಣಿಕ ಪ್ರವಾಸೋದ್ಯಮಕ್ಕೆ ಆದ್ಯತೆ - ಡಾ. ಶರತ್‌ ಕೆ. ರಾವ್

KannadaprabhaNewsNetwork |  
Published : Sep 27, 2026, 02:45 AM IST
ಮಾಹೆಯಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳ ಜೊತೆಗೆ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಯಿತು | Kannada Prabha

ಸಾರಾಂಶ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನ - 2026ನ್ನು ಶನಿವಾರ ಆಚರಿಸಲಾಯಿತು. ಮಾಹೆಯಲ್ಲಿ ಅಧ್ಯಯನ ಮಾಡುತ್ತಿರುವ ವಿವಿಧ ದೇಶಗಳ ವಿದ್ಯಾರ್ಥಿಗಳು ಸೇರಿ ಭವಿಷ್ಯದ ಪ್ರವಾಸೋದ್ಯಮವನ್ನು ವಿಭಿನ್ನವಾಗಿ ರೂಪಿಸುವ ಕುರಿತು ಸಂವಾದದಲ್ಲಿ ಭಾಗವಹಿಸಿದರು.

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನ - 2026ನ್ನು ಶನಿವಾರ ಆಚರಿಸಲಾಯಿತು. ಮಾಹೆಯಲ್ಲಿ ಅಧ್ಯಯನ ಮಾಡುತ್ತಿರುವ ವಿವಿಧ ದೇಶಗಳ ವಿದ್ಯಾರ್ಥಿಗಳು ಸೇರಿ ಭವಿಷ್ಯದ ಪ್ರವಾಸೋದ್ಯಮವನ್ನು ವಿಭಿನ್ನವಾಗಿ ರೂಪಿಸುವ ಕುರಿತು ಸಂವಾದದಲ್ಲಿ ಭಾಗವಹಿಸಿದರು. ಡಿಜಿಟಲ್ ಅಜೆಂಡ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಪ್ರವಾಸೋದ್ಯಮದ ಮರುರೂಪಣೆ ಎಂಬ ವಿಷಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿವಿಧ ಪ್ರಾದೇಶಿಕ ಹಿನ್ನೆಲೆಯ ಜನರೊಂದಿಗೆ ಪರಸ್ಪರ ಸಂಪರ್ಕವನ್ನು ಮೂಡಿಸುವಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ವಹಿಸುತ್ತಿರುವ ಪಾತ್ರದ ಕುರಿತು ಈ ಕಾರ್ಯಕ್ರಮದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.. ಕಾರ್ಯಕ್ರಮದ ಮುಖ್ಯ ಅತಿಥಿ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್, ಪ್ರವಾಸೋದ್ಯಮದ ಕ್ಷೇತ್ರದಲ್ಲಿ ಸಾಂಸ್ಕೃತಿಕ ಮಹತ್ವದ ಅಂಶಗಳಿಗೆ ಒತ್ತು ನೀಡುವಂತೆ ನವ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ವೇಗವಾಗಿ ಪರಿವರ್ತನೆಗೊಳ್ಳುತ್ತಿರುವ ಪ್ರವಾಸೋದ್ಯಮದ ವಲಯದಲ್ಲಿ ಶೈಕ್ಷಣಿಕ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯ ಹೆಚ್ಚುತ್ತಿದೆ. ಶಿಕ್ಷಣ ಮತ್ತು ಸಂಸ್ಕೃತಿ ಸೇರಿದರೇ ಗಡಿಯಾಚೆಗೆ ಸಂಬಂಧಗಳನ್ನು ವೃದ್ದಿಸಲು ಸಾಧ್ಯವಿದೆ, ಮಾಹೆಯು ಅಂತರ್‌ಸಾಂಸ್ಕೃತಿಕ ವಿನಿಮಯವನ್ನು ವೃದ್ಧಿಸಲು ಆದ್ಯತೆ ನೀಡುತ್ತದೆ. ಆಮೂಲಕ ಜಾಗತಿಕ ಸಂಬಂಧಗಳನ್ನು ವೃದ್ಧಿಸುವ ಆಶಯವನ್ನು ಹೊಂದಿದೆ ಎಂದರು.

ಶೈಕ್ಷಣಿಕ ಪ್ರವಾಸೋದ್ಯಮದ ಕುರಿತು ಸುಲಭವಾಗಿ ತಿಳಿಯಲು ಮತ್ತು ಅನುಭವವನ್ನು ಹಂಚಿಕೊಳ್ಳಲು ಇಂಟರ್‌ನೆಟ್‌ ಪೋರ್ಟಲನ್ನು ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಮಾಹೆಯ ಅಂತಾರಾಷ್ಟ್ರೀಯ ಫುಟ್‌ಬಾಲ್ ತಂಡಕ್ಕೆ ಚಾಲನೆ ನೀಡಿದ್ದು, ಕ್ರೀಡೆಯ ಮೂಲಕ ಅಂತಾರಾಷ್ಟ್ರೀಯ ವಿದ್ಯಾರ್ಥಿಸಮುದಾಯದ ಸ್ನೇಹಸಂಬಂಧವನ್ನು ವೃದ್ಧಿಸುವುದು ಇದರ ಉದ್ದೇಶವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣೇಶ ವಿಗ್ರಹ ವಿಸರ್ಜನೆ ಸಂದರ್ಭ ನಾಲ್ಕು ಮಂದಿಗೆ ವಿದ್ಯುತ್ ಸ್ಪರ್ಶ : ಇಬ್ಬರು ಗಂಭೀರ
ಕಾರಿಡರ್‌ ಆವರಣಗೋಡೆ ಕುಸಿತ: ಓರ್ವ ಗಂಭೀರ, ಮೂವರಿಗೆ ಗಾಯ