ಮಣಿಪಾಲ: ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಸಿಐ) ಪ್ರತಿಷ್ಠಿತ ಉದ್ದಿಮೆ-ಶೈಕ್ಷಣಿಕ ಪಾಲುದಾರಿಕೆ ಪ್ರಶಸ್ತಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಪಾತ್ರವಾಗಿದೆ. ನವದೆಹಲಿಯಲ್ಲಿ ಡಿ. 5 ರಂದು ನಡೆದ ಸಿಸಿಐ ಕೈಗಾರಿಕೆ-ಶೈಕ್ಷಣಿಕ ಪಾಲುದಾರಿಕೆ ಶೃಂಗಸಭೆಯಲ್ಲಿ, ಮಾಹೆ ಸಂಸ್ಶೆಯ ಕಾರ್ಪೋರೇಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್ ಅವರು ವಿಶ್ವವಿದ್ಯಾಲಯದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಮಾಹೆಗೆ ಒಲಿದಿರುವ ಈ ಪ್ರತಿಷ್ಠಿತ ಪ್ರಶಸ್ತಿಯ ಕುರಿತು ಮಾಹೆ ಉಪಕುಲಪತಿ ಲೆ.ಜ. (ಡಾ.) ಎಂ.ಡಿ. ವೆಂಕಟೇಶ್ ಅವರು, ಈ ಪ್ರತಿಷ್ಠಿತ ಮನ್ನಣೆಯನ್ನು ಪಡೆದಿರುವುದು ನಮಗೆ ಅತ್ಯಂತ ಗೌರವ ತಂದಿದೆ. ಮಾಹೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮ ಪಾಲುದಾರರು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಜ್ಞಾನ ಮತ್ತು ನವೀನತೆಯ ಗಡಿಗಳನ್ನು ನಿರಂತರವಾಗಿ ವಿಸ್ತರಿಸುತ್ತಿದ್ದಾರೆ. ಈ ಬದ್ಧತೆಗಾಗಿನೀಡಲಾಗಿರುವ ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಸಮಾಜದ ಧನಾತ್ಮಕ ಪರಿವರ್ತನೆಯ ಆಶಾದಾಯಕ ಕೊಡುಗೆ ನೀಡಲಿದೆ ಎಂದಿದ್ದಾರೆ.