ಹೂವಿನಹಡಗಲಿ: ನಾಡಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ದೇವಸ್ಥಾನದ ಆವರಣದಲ್ಲಿ, ಕಂಚಾವೀರರ ಭಗಣಿಗೂಟ, ಗೊರವರ ಸರಪಳಿ ಪವಾಡಗಳು ನೆರೆದಿದ್ದ ಭಕ್ತರನ್ನು ಮಂತ್ರ ಮುಗ್ದರನ್ನಾಗಿಸಿತು.
ಭಗಣಿಗೂಟ, ಚರ್ಮದ ಮಿಣಿಗಳು, ಮುಳ್ಳಿನ ಕಂಟಿ, ಖಡ್ಗಗಳು, ಕೈಗೆ ಚುಚ್ಚಿಕೊಳ್ಳುವ ಆರುತಿ ಆಯುಧ ಸೇರಿದಂತೆ ಇನ್ನಿತರ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ನಂತರದಲ್ಲಿ ಗುರು ವೆಂಕಪ್ಪಯ್ಯ ಒಡೆಯರ್ ಇವರಿಂದ ಭಂಡಾರ ಆಶೀರ್ವಾದ ಪಡೆದರು.
ಕಟ್ಟಿಗೆಯಿಂದ ತಯಾರಿಸಿದ ಭಗಣಿಗೂಟವೆಂಬ ಆಯುಧವನ್ನು ಕಂಚಾವೀರರು ತಮ್ಮ ಬಲಕಾಲಿನ ಕೆಳಗೆ ಏಳು ಕೋಟಿ ಏಳು ಕೋಟಿ ಏಳು ಕೋಟಿಗೋ ಎಂದು ಮೈಲಾರಲಿಂಗೇಶ್ವರ ಸ್ವಾಮಿ ನಾಮ ಸ್ಮರಣೆ ಮಾಡುತ್ತಾ, ಕಾಲಿಗೆ ಬಡಿದುಕೊಳ್ಳುತ್ತಾರೆ. ಕಾಲಿನಲ್ಲಿ ರಂಧ್ರ ಮಾಡಿದ ಬಳಿಕ ಇದರಲ್ಲಿ ಚರ್ಮದ ಮಿಣಿಗಳು, ಮುಳ್ಳಿನ ಕಂಟಿಗಳನ್ನು ದಾಟಿಸುತ್ತಾರೆ. ಮೈಲಾರಲಿಂಗೇಶ್ವರ ಸ್ವಾಮಿ ಕುರಿತು ಖಡ್ಗಗಳನ್ನು ಹಿಡಿದು ದೇವರ ಮಹಿಳೆ ಹೊಗಳುವ ಒಡವುಗಳನ್ನು ಹೇಳಿದರು. ಗೊರವರು ಕಬ್ಬಿಣದ ಪರಪಳಿಯನ್ನು ಪವಾಡ ಕಟ್ಟೆಗೆ ಕಟ್ಟಿದ ಬಳಿಕ ದೇವರ ನಾಮ ಸ್ಮರಣೆ ಮಾಡುತ್ತಾ, ಸರಪಳಿಯನ್ನು ಹರಿದರು. ಕಂಚಾವೀರರು ಹಾಗೂ ಗೊರವರು ಮಾಡುವ ಪವಾಡಗಳ ಸಂದರ್ಭದಲ್ಲಿ, ನೆರೆದಿದ್ದ ಭಕ್ತರು ಸೀಳಳು ಕೇಕೆ ಹಾಕುತ್ತಾರೆ, ಜತೆಗೆ ಗೊರವರ ಢಮರುಗ ಶಬ್ದ ಪವಾಡ ಮಾಡುವವರಿಗೆ ಹುಮ್ಮಸ್ಸು ತುಂಬಿದರು.ದೇವಸ್ಥಾನದಲ್ಲಿ ವಂಶ ಪಾರಂಪರ್ಯವಾಗಿ ಪವಾಡಗಳನ್ನು ಮಾಡುತ್ತಾ ಬಂದಿರುವ, ಕಂಚಾವೀರರು ಮತ್ತು ಗೊರವರು, ಪವಾಡಕ್ಕೂ ಮುನ್ನ ಒಂದು ದಿನ ಉಪವಾಸ ವ್ರತ ಮಾಡುತ್ತಾರೆ, ವ್ರತಕ್ಕೆ ಭಂಗ ಬರದಂತೆ ಮನೆಯಲ್ಲಿನ ಮಹಿಳೆಯರನ್ನು ಬೇರೆಡೆ ಕಳಿಸುತ್ತಾರೆ, ಕಾರಣ ಪವಾಡಗಳಿಗೆ ತೊಂದರೆ ಆಗದಂತೆ ಮಡಿಯುಡಿಯಿಂದ ಪವಾಡಗಳನ್ನು ಮಾಡುತ್ತೇವೆ ಎನ್ನುತ್ತಾರೆ ಕಂಚಾವೀರರು.
ಮೈಲಾರಲಿಂಗೇಶ್ವರ ಕಾರ್ಣಿಕ ಸ್ಥಳ ಡೆಂಕಣ ಮರಡಿಯಲ್ಲಿ (ಮಣಿಕಾಚೂಲ ಪರ್ವತ) ಅಡಗಿ ಕುಳಿತಿದ್ದ ಮಣಿಕಾಸುರ, ಮಲ್ಲಾಸುರ ರಾಕ್ಷಸರನ್ನು ಸಂಹರಿಸಿ ನಂತರ ದೇವಸ್ಥಾನದ ಕಂಚಾವೀರರು, ಗೊರವರು ಪವಾಡಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಬಗಣಿ ಗೂಟ ಪವಾಡ ಮಾಡಿದವರು: ವಸಂತ ಕಂಚಾವೀರ, ಚೇತನ್ ಕಂಚಾವೀರ, ಮಾಲತೇಶ ಕಂಚಾವೀರ.
ಸರಪಳಿ ಪವಾಡ: ಅನಿಲ್ ದಳವಾಯಿ, ಉಮೇಶ್ ದಳವಾಯಿ ಹಾಗೂ ಸಂಗಡಿಗರಾದ ನಿಂಗಪ್ಪ ರಾಗೇರ, ಭರಮಪ್ಪ ಆರೇರ, ರವೀಂದ್ರ ಮಾಲ್ದಾರ.